ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ರಮವಾಗಿ ಬಡ್ಡಿ ವ್ಯವಹಾರ ಮಾಡುತ್ತಿರುವವರ ಮನೆಗಳ ಮೇಲೆ ಜಿಲ್ಲಾ ಪೊಲೀಸರು ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಿದ್ದು, ನಗದು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಎ.ಜಿ. ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ನಗರದಲ್ಲಿ ಒಟ್ಟು 9 ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 39 ಲಕ್ಷ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್’ಗಳು, 19 ಆರ್ ಸಿ ಬುಕ್’ಗಳು, 07 ವೆಹಿಕಲ್ ಬಾಂಡ್, 02 ಫಾರ್ಮ್ ನಂ 29, 30 ಮತ್ತು ಅಗ್ರಿಮೆಂಟ್ ಕಾಪಿ, ಪಾಸ್ ಬುಕ್, ಸೇಲ್ ರೀಡ್, ಪಹಣಿ, 29 ಬೈಕ್’ಗಳು ಮತ್ತು 2 ಕಾರುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಒಟ್ಟು 09 ಆರೋಪಿತರ ವಿರುದ್ಧ ಒಟ್ಟು 09 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
Also read: ಭದ್ರಾವತಿ | ಎಡಿಟೆಡ್ ವೀಡಿಯೋ ಆದರೆ FLSಗೆ ಕಳುಹಿಸಿ, ನಿಮ್ಮ ದೌರ್ಜನ್ಯ ಕ್ಷೇತ್ರಕ್ಕೆ ಗೊತ್ತಿದೆ: ಬಿಜೆಪಿ
ಕಾರ್ಯಾಚರಣೆ ಶಿವಮೊಗ್ಗ-ಎ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಬಾಬು ಆಂಜನಪ್ಪ ಮತ್ತು ಶಿವಮೊಗ್ಗ – ಬಿ ಪೊಲೀಸ್ ಉಪಾಧೀಕ್ಷಕರಾದ ಸಂಜೀವ್ ಕುಮಾರ್, ಸಿಇಎನ್ ಠಾಣೆ ಪೊಲೀಸ್ ಉಪಾಧೀಕ್ಷರಾದ ಕೃಷ್ಣಮೂರ್ತಿ ಅವರುಗಳ ಮೇಲ್ವಿಚಾರಣೆಯಲ್ಲಿ ನಡೆಯಿತು.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾ ನಗರ , ಮಾರ್ನಾಮಿ ಬೈಲು , ಕಾಮಾಕ್ಷಿ ಬೀದಿಯಲ್ಲಿ, ಹರೀಶ್ ಕೆ ಪಾಟೀಲ್, ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ರವರು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ, ಚಂದ್ರಕಲಾ, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ರವರು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪುರದಲ್ಲಿ, ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ ರವರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು , ಬಸವನಗುಡಿಯಲ್ಲಿ ಗುರುರಾಜ್ ಕೆ ಟಿ, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರದಲ್ಲಿ, ಸತ್ಯನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆ, ಗುರುಪುರ ಸೇರಿದಂತೆ ಒಟ್ಟು 9 ಕಡೆ ದಾಳಿ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post