ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್’ಗಳಲ್ಲಿ ತಾಂತ್ರಿಕ ಪರಿಶೀಲನೆ ನಡೆಯುವುದರಿಂದ ಸಾಗರ-ಆನಂದಪುರಂ-ಸೊರಬ-ತಾಳಗುಪ್ಪ ನಡುವಿನ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಸಾಗರದಿಂದ ತಾಳಗುಪ್ಪ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ 134 ಕಿ.ಮೀ:145/600-700 ಮತ್ತು ಸಾಗರ-ಸೊರಬ ಬೈಪಾಸ್ ರಸ್ತೆ ಸ್ಟೇಷನ್ ನಡುವೆ ಬರುವ ಎಲ್ಸಿ ನಂ 130 ಕಿ.ಮೀ 143/600-700 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ದಿ: 17-03-2025 ರಿಂದ 18-03-2025 ಮತ್ತು ದಿ: 20-03-2025 ರಿಂದ 21-03-2025 ರವರೆಗೆ ಗೇಟ್ ಮುಚ್ಚಿ ಈ ಕೆಳಗಿನಂತೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
Also read: ಆರೋಗ್ಯ, ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಟ್ರಕಿಂಗ್ ಸಹಕಾರಿ: ಎಸ್. ಕೆ. ಶೇಷಾಚಲ
134 ಎಲ್ಸಿ ನಂ-145/600-700 ಸಾಗರ-ತಾಳಗುಪ್ಪ ದಿ: 17-03-2025 ರಿಂದ 18-03-2025 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್ಸಿ 132 ಸಾಗರ ಟೌನ್ ಶಿರವಾಳದಿಂದ-ಅಣಲೆಕೊಪ್ಪ ಇಲ್ಲಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
130 ಎಲ್ಸಿ ನಂ-143/600-700 ಸಾಗರ-ಆನಂದಪುರ ದಿ: 20-03-2025 ರಿಂದ 21-03-2025 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಎಲ್ಸಿ 129 ಸಾಗರ ಟೌನ್ ಇಂಡಸ್ಟಿಯಲ್ ಏರಿಯಾ ಬೈಪಾಸ್ ರಸ್ತೆ ಮತ್ತು ಎಲ್ಸಿ 132 ಸಾಗರ ಟೌನ್ ಅಣಲೆಕೊಪ್ಪ ಈ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದಾಗಿದೆ.
ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಅತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್’ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ತಾತ್ಕಾಲಿಕವಾಗಿ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post