ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಐಎಸ್’ಎಲ್ ಕಾರ್ಖಾನೆಯನ್ನು ಉಳಿಸುವ ಎಲ್ಲ ಪ್ರಯತ್ನಗಳು ಇನ್ನೂ ನಡೆದಿದ್ದು, ಎಲ್ಲ ಮಾರ್ಗಗಳು ಮುಚ್ಚಿದೆ ಎಂದು ತಿಳಿಯಬೇಕಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP B Y Raghavendra ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಐಎಸ್’ಎಲ್ ಕಾರ್ಖಾನೆಯನ್ನು ಉಳಿಸುವ ಎಲ್ಲ ಪ್ರಯತ್ನಗಳು ಇನ್ನೂ ನಡೆದಿವೆ. ಈ ಕುರಿತಂತೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದು, ಸಕಾರಾತ್ಮಕ ಪ್ರಕ್ರಿಯೆ ಬಂದಿದೆ ಎಂದರು.
ರಾಜ್ಯ ಸರ್ಕಾರದಿಂದ ಲೇ ಆಫ್ ವಾಪಾಸ್ ಪಡೆದು ನಡೆಸುವ ಪ್ರಯತ್ನ ನಡೆದಿವೆ. ಇದರ ನಡುವೆಯೇ ಕಾರ್ಮಿಕ ಮುಖಂಡರ ಸಭೆ ಸಹ ಕರೆಯಲಾಗಿದೆ. ಯಾವ ಮಾರ್ಗದ ಮೂಲಕ ಕಾರ್ಖಾನೆಯನ್ನು ಉಳಿಸಿಕೊಳ್ಳಬಹುದು ಎಂಬ ಕುರಿತಾಗಿ ಚಿಂತನೆ ನಡೆದಿದೆ. ಒಂದು ವಾರದ ನಂತರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
Also read: ವಿಐಎಸ್’ಎಲ್ ಉಳಿಸುವ ಕುರಿತು ದೆಹಲಿಯಿಂದ ಮರಳಿದ ಎಂಪಿ ರಾಘವೇಂದ್ರ ಮಹತ್ವದ ಹೇಳಿಕೆ!
ಅಲ್ಲದೇ, ರಾಜ್ಯ ಬಜೆಟ್ ನಂತರ ನಿಯೋಗವನ್ನು ಕೊಂಡುಯ್ದು ಚರ್ಚೆ ನಡೆಸಲಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post