ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು #Indira Gandhi National Open University ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯವಾಗಿದ್ದು, ಜನವರಿ 2026ರ ಅವಧಿಯ ಬಿಎ., ಬಿಕಾಂ, ಬಿಬಿಎಂ, ಬಿಎಸ್ಸಿ, ಎಂಎ., ಎಂಕಾಂ, ಎಂಬಿಎ, ಎಂಸಿಎ, ಎಂಎಸ್ಸಿ ಇನ್ನೂ ಅನೇಕ ಉಪಯುಕ್ತ ಡಿಪ್ಲಮೋ, ಪಿಜಿ ಡಿಪ್ಲಮೋ ಹಾಗೂ ಸರ್ಟಿಫಿಕೇಟ್ ಕೋರ್ಸುಗಳು ಆರಂಭವಾಗಲಿದ್ದು, ಆನ್‍ಲೈನ್ ಪ್ರಕಾರದಲ್ಲಿ ಪ್ರವೇಶ ಪ್ರಾರಂಭವಾಗಿದೆ ಎಂದು ಇಗ್ನೋ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಎಂ. ಷಣ್ಮುಗಂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 325ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಒಡಿಯಲ್ ಮತ್ತು ಆನ್‍ಲೈನ್ ಪ್ರಕಾರದಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಪ್ರವೇಶಕ್ಕೆ 15-02-2026 ಕೊನೆಯ ದಿನಾಂಕವಾಗಿದೆ. ಎಸ್ಸಿ, ಎಸ್ಟಿ ವಾರ್ಷಿಕ ಆದಾಯ ರೂ.2,50,000ಗಳಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗಳಿಗೆ ಶೇ.50ರಷ್ಟು ಶುಲ್ಕ ವಿನಾಯಿತಿ ಇರುತ್ತದೆ.
ಪ್ರವೇಶದ ನಂತರ ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿವಿಧ ಕಾರಣಗಳಿಂದ ಶಿಕ್ಷಣಕ್ಕೆ ಅರ್ಧಕ್ಕೆ ನಿಲ್ಲಿಸಿದವರಿಗೆ ಪದವಿ ಶಿಕ್ಷಣದಿಂದ ವಂಚಿತರಾದವರಿಗೆ ಇಗ್ನೋದಿಂದ ಮುಕ್ತ ಅವಕಾಶ ಇದಾಗಿದ್ದು, ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿ(ಶಿವಮೊಗ್ಗ ಅಧ್ಯಯನ ಕೇಂದ್ರ 1306)ನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಪ್ರತಿವರ್ಷ ರಾಷ್ಟ್ರದಲ್ಲಿ 5 ರಿಂದ 6 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಎಜುಕೇಷನಲ್ ಚಾನಲ್ ಪ್ರಾರಂಭವಾಗಲಿದ್ದು, ಇದು ಕನ್ನಡ ಭಾಷೆಯಲ್ಲೂ ಇರುತ್ತದೆ. ಆನ್‍ಲೈನ್ ಮೂಲಕವೂ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದರು.
ಹೆಚ್ಚಿನ ವಿವರಗಳಿಗಾಗಿ ಇಗ್ನೋ ಜಾಲತಾಣ hಣಣಠಿs://igಟಿouಚಿಜmissioಟಿ.sಚಿmಚಿಡಿಣh.eಜu.iಟಿ/ ಅಥವಾ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಯನ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.
(ಸೋಮವಾರದಿಂದ ಶನಿವಾರ ಬೆಳಿಗ್ಗೆ 11 ರಿಂದ 1ಗಂಟೆಯವರೆಗೆ ಮತ್ತು ಸಂಜೆ 3.30ರಿಂದ 5.30ರ ವರೆಗೆ) ಮೊ. 78922-40342 ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಗ್ನೋ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿಗಳಾದ, ಡಿವಿಎಸ್ ಪ್ರಾಂಶುಪಾಲ ಪ್ರೊ.ಎಂ. ಕುಮಾರಸ್ವಾಮಿ, ಪ್ರೊ.ಚೇತನಾ, ಮುನಿಸ್ವಾಮಿ, ರಾಜೀವ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















