ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಇಎಸ್‌ಐಎಎಮ್‌ಎಸ್ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ಕ್ಲಸ್ಟರ್ ಫೋರಂ ವತಿಯಿಂದ ವ್ಯಾಲ್ಯೂ ಪ್ರಾಡಕ್ಟ್ ಪ್ರೈ. ಲಿಮಿಟೆಡ್‌ಗೆ #Value Products Pvt., Ltd ಕೈಗಾರಿಕಾ ಭೇಟಿಯನ್ನುಆಯೋಜಿಸಲಾಗಿತ್ತು.
ಈ ಕೈಗಾರಿಕಾ ಭೇಟಿಯಲ್ಲಿ ಬಿಎಸ್ಸಿ ಪದವಿಯಎಲ್ಲಾರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂಸ್ಥೆಯು ನೋನಿ ಹಣ್ಣಿನ ವಿವಿಧ ರೀತಿಯ ಪ್ರಾಡಕ್ಟ್ಗಳನ್ನು ತಯಾರಿಸುತ್ತಿದೆ.
ಈ ಕೈಗಾರಿಕಾ ಭೇಟಿಯ ಸಂದರ್ಭದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಾಗ ಮಾಡಿಗುಣಮಟ್ಟ ನಿಯಂತ್ರಣ ಮತ್ತು ಸಂಶೋಧನಾ ಸಹವರ್ತಿಗಳಾದ ಅಪೂರ್ವ ಮತ್ತು ರಾಧಿಕ ಅವರು ಮೊದಲಿಗೆ ನೋನಿ ಹಣ್ಣಿನ ಮರದ ಪರಿಚಯದಿಂದ ಹಿಡಿದು ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ರೀತಿಯ ಔಷಧೀಯ ಸಸ್ಯಗಳ ಪರಿಚಯ ಮತ್ತು ಅವುಗಳಲ್ಲಿನ ರಸಾಯನಿಕ ಪದಾರ್ಥಗಳ ಬಗ್ಗೆ ತಿಳಿಸಿದರು.
ನಂತರ ಅದರ ಯಾವ ಯಾವ ಭಾಗಗಳನ್ನು ನೋನಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಎನ್ನುವ ಬಗ್ಗೆ ತಿಳಿಸಿದರು. ಅವುಗಳ ಸಂಸ್ಕರಣೆ, ಗುಣಮಟ್ಟದ ಪರಿಶೀಲನೆ ಮೊದಲಾದ ಹಂತಗಳ ಕುರಿತು ಮಾಹಿತಿ ನೀಡಿದರು.
ಈ ಕೈಗಾರಿಕಾ ಭೇಟಿಯಿಂದ ರಸಾಯನಶಾಸ್ತç ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ನೋನಿ ಉತ್ಪನ್ನಗಳ ಬಗ್ಗೆ ಉಪಯುಕ್ತ ಮಾಹಿತಿ ದೊರೆಯಿತು. ಅಲ್ಲದೆ ದಿನನಿತ್ಯ ನಾವು ನೋಡುವ ಎಷ್ಟೋ ಗಿಡಗಳಲ್ಲಿ ಔಷಧೀಯ ಗುಣಗಳು ಇರುವುದರ ಬಗ್ಗೆ ಅರಿವು ಮೂಡಿತು.
ಈ ಕೈಗಾರಿಕಾ ಭೇಟಿಯಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಂ. ರಾಧಿಕಾ, ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕಾಂತರಾಜ್ ಅವರುಗಳು ವಿದ್ಯಾರ್ಥಿಗಳನ್ನು ಸಮನ್ವಯಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post