ಐಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ, ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್, ಮಣಿಪಾಲ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಐಲೆಟ್ಸ್ ಆಸ್ಪತ್ರೆಯಲ್ಲಿ ಜು.14ರಂದು ಬೆ.10ರಿಂದ ಮಧ್ಯಾಹ್ನ 2ರ ವರೆಗೆ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರೀತಮ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿ ಬಂಜೆತನ ಎನ್ನುವುದು ಸಾಮಾನ್ಯವಾಗಿದೆ. ಏರುತ್ತಿದ್ದ ಜನಸಂಖ್ಯಾ ಸ್ಫೋಟ ಇಂದು ಇಳಿಮುಖವಾಗುತ್ತಿದೆ. ಶತಮಾನಕ್ಕೊಮ್ಮೆ ಪ್ರಕೃತಿಯೇ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಜನಸಂಖ್ಯೆ ಇಳಿಮುಖವಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ ಎಂದರು.
ಬಂಜೆತನ ಎನ್ನುವುದು ಆಹಾರದ ಕ್ರಮ, ತಡವಾದ ಮದುವೆ, ಮದ್ಯ ವ್ಯಸನ ಹೀಗೆ ಹಲವು ಕಾರಣಗಳಿಂದ ಆಗುತ್ತಿದೆ. ರಾಜ್ಯದಲ್ಲಿಯೂಕೂಡ ಈ ಸಮಸ್ಯೆ ಹೆಚ್ಚಾಗಿರುವುದರಿಂದ ಐವಿಎಫ್‍ಸೆಂಟರ್‍ಗಳು ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲಿಯೂ ಇಂತಹ ಆಸ್ಪತ್ರೆಯ ಅವಶ್ಯಕತೆಯನ್ನು ಮನಗಂಡು ಈಗಾಗಲೇ ಹೆಸರು ಮಾಡಿರುವ ಗರ್ಭಗುಡಿ ಐವಿಎಫ್ ಸೆಂಟರ್‍ನ ಸಹಯೋಗದೊಂದಿಗೆ ನಾವು ಈ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಆಸ್ಪತ್ರೆ ತೆರೆಯಲು ಉದ್ದೇಶಿಸಲಾಗಿದೆ ಎಂದರು.
Also read: ಗುರು ಅನುಗ್ರಹವಿದ್ದರೆ ವಿಶ್ವ ಮೆಚ್ಚುವ ಸಾಧನೆ ಸಾಧ್ಯ: ಪಂಡಿತ ರಟ್ಟೀಹಳ್ಳಿ ಸತ್ಯಬೋಧಾಚಾರ್ಯ
ಐವಿಎಫ್ ಸೆಂಟರ್‍ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜಯ್ ಮಾತನಾಡಿ, ಜು.14ರಂದು ನಡೆಯುವ ತಪಾಸಣಾ ಶಿಬಿರದಲ್ಲಿ ನೊಂದಣೀ ಶುಲ್ಕವನ್ನು ನಾಲ್ಕು ಸಾವಿರದಿಂದ ಎರಡು ಸಾವಿರಕ್ಕೆ ಇಳಿಸಲಾಗಿದೆ. ಶಿಬಿರದಲ್ಲಿ ವೈದ್ಯಕೀಯ ಸಲಹೆ, ಸಮಾಲೋಚನೆ ಮತ್ತು ವೀರ್ಯ ವಿಶ್ಲೇಷಣೆ ಮಾಡಲಾಗುವುದು ಎಂದ ಅವರು, ಸುಪ್ರಸಿದ್ಧ ಸಂತಾನೋತ್ಪತ್ತಿ ತಜ್ಞರಾದ ಡಾ. ಆಶಾ ಎಸ್. ವಿಜಯ್ ತಂಡದವರು ಆಗಮಿಸಲಿದ್ದಾರೆ ಎಂದರು.
ಶಿಬಿರದಲ್ಲಿ ಪರೀಕ್ಷೆಯ ನಂತರ ಅಗತ್ಯವಿರುವ ದಂಪತಿಗಳಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುವುದು. ಉಚಿತ ವಸತಿ ಸೌಲಭ್ಯ ಇರುತ್ತದೆ. ಇದಕ್ಕಾಗಿ ಇರುವ ವಿವಿಧ ಪ್ಯಾಕೇಜ್‍ಗಳಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತದೆ. ಇದರ ಸೌಲಭ್ಯವನ್ನು ಶಿವಮೊಗ್ಗ ಅಲ್ಲದೆ ಸುತ್ತಮುತ್ತಲ ಜಿಲ್ಲೆಯ ದಂಪತಿಗಳು ಪಡೆಯಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ್ ಜಾನ್, ಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post