ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂದು ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ರೂಪಿಸಿದ ನಾವಿನ್ಯ ಯೋಜನೆಗಳ ಪ್ರದರ್ಶನ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ನಡೆಯಿತು.
ನೀರಿನ ಶುದ್ಧಿಕರಣ ಘಟಕ, ಪೆಡಲ್ ಬ್ರೇಕ್ ಮತ್ತು ವೇಗ ವರ್ಧಕ ವ್ಯವಸ್ಥೆ, ಸಿ.ಎನ್.ಸಿ ಯಂತ್ರಕ್ಕಾಗಿ ವರ್ಕ್‌ಪೀಸ್ ಹೋಲ್ಡಿಂಗ್ ಜಿಗ್, ಸಸ್ಯಗಳ ನಾರು ತೆಗೆಯುವ ಯಂತ್ರ, ವಿದ್ಯುತ್ ಚಾಲಿತ ಬೈಕ್, ವಿದ್ಯುತ್ ಚಾಲಿತ ಸ್ಕೂಟರ್, ವಿಕಲಚೇತನರಿಗಾಗಿ ವಿನ್ಯಾಸಗೊಳಿಸಿದ ವಿದ್ಯುತ್ ಚಾಲಿತ ಕ್ವಾಡ್ ಬೈಕ್, ಕಳೆ ತೆಗೆಯುವ ಯಂತ್ರ, ತ್ರಿಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಅಗತ್ಯ ವಸ್ತುಗಳ ರಚನೆಯ ಅಭಿವೃದ್ದಿ, ಕೈಗಾರಿಕೆಗಳಿಂದ ಹೊರಬರುತ್ತಿರುವ ತ್ಯಾಜ್ಯ ನೀರಿನ್ನು ಸ್ಥಳೀಯ ಸಸ್ಯಗಳ ಮೂಲಕ ಫೈಟೊರೆಮಿಡಿಯೇಷನ್ ಮೂಲಕ ಶುದ್ಧಿಕರಿಸುವ ಯಂತ್ರವನ್ನು ಅನಾವರಣಗೊಳಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಇದೇ ಸಂದರ್ಭದಲ್ಲಿ ಅನುಪಯೋಗಿ ಹಳೆಯ ಇಂಧನ ಚಾಲಿತ ಬೈಕ್ ಮತ್ತು ಸ್ಕೂಟರ್‌ಗಳನ್ನು ನವೀಕರಿಸಿ ನೂತನ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ವಾಹನಗಳನ್ನಾಗಿ ವಿನ್ಯಾಸಗೊಳಿಸಿ ಪ್ರದರ್ಶಿಸಲಾಯಿತು. ಇದರಿಂದಾಗಿ ಎಲ್ಲಾ ವರ್ಗದ ಜನರಿಗೆ ಹೊಸ ಭರವಸೆ ಮೂಡಿಸುವ ಪ್ರಯತ್ನ ಇದಾಗಿದ್ದು, ಆರಾಮದಾಯಕ ಅನುಭವವನ್ನು ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.
ಪ್ರದರ್ಶನಗೊಂಡ ಎಲೆಕ್ಟ್ರಿಕ್ ಬೈಕ್, ಸ್ಕೂಟರ್, ಕ್ವಾಡ್ ಬೈಕ್‌ಗಳು ಸುಮಾರು ನಾಲ್ಕರಿಂದ ಐದು ಗಂಟೆಗಳ ಬ್ಯಾಟರಿ ಚಾರ್ಜ್ ನಂತರ ಸುಮಾರು 60 ರಿಂದ 70 ಕಿ.ಮಿ ಮೈಲೇಜ್ ನೀಡಲಿದೆ. ಮನೆಯಲ್ಲಿಯೇ ಬ್ಯಾಟರಿ ರಿಚಾರ್ಜ್ ಮಾಡುಬಹುದಾಗಿದ್ದು ಒಂದು ಸಲದ ಸಂಪೂರ್ಣ ರಿಚಾರ್ಜ್ ಮಾಡಲು ನಾಲ್ಕರಿಂದ ಐದು ಯೂನಿಟ್ ವಿದ್ಯುತ್ ಬೇಕಾಗಿದ್ದು 30 ರೂಪಾಯಿಗಳ ಖರ್ಚು ಬರಲಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಮಾತನಾಡಿ, ಇಂತಹ ನಾವಿನ್ಯ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗಲಿದ್ದು ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಸಮಸ್ಯೆಗಳನ್ನು ನಿವಾರಿಸಲು ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಆವಿಷ್ಕಾರಗಳನ್ನು ನಡೆಸುತ್ತಿದೆ. ಈ ಯೋಜನೆಗಳು ಹೆಚ್ಚು ಸಫಲಗೊಳ್ಳುವುದರ ಮೂಲಕ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶ ಸೃಷ್ಟಿಸುವಲ್ಲಿ ಉದಯೋನ್ಮುಕವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ, ಖಜಾಂಚಿಗಳಾದ ಸಿ.ಆರ್.ನಾಗರಾಜ, ಕುಲಸಚಿವರಾದ ಪ್ರೋ.ಹೂವಯ್ಯಗೌಡ, ಪ್ರಾಂಶುಪಾಲರಾದ ಡಾ.ಮಂಜುನಾಥ.ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ವಿಭಾಗದ ಮುಖ್ಯಸ್ಥರಾದ ಡಾ.ಈ.ಬಸವರಾಜ್, ಕಾರ್ಯಕ್ರಮ ಸಂಯೋಜಕರಾದ ಡಾ.ಅಮಿತ್ ಕುಮಾರ್, ಪರಮೇಶ್ವರ್.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post