ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ನಾವಿನ್ಯ ಚಿಂತನೆಗಳು ಸಾಮಾಜಿಕ, ಪರಿಸರ, ಆರೋಗ್ಯ ಸೇರಿದಂತೆ ಬಹುಮುಖಿ ಕ್ಷೇತ್ರಗಳ ಮೇಲೆ ಹೆಚ್ಚು ಪ್ರಯೋಜನಕಾರಿಯಾಗಿ ನಿಲ್ಲಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈಚೆಗೆ ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ರೂಪಿಸಿರುವ ನಾವಿನ್ಯಯುತ ಯೋಜನೆ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಆನ್ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಮಗೆ ಎದುರಾದ ಸಮಸ್ಯೆಗಳನ್ನು ಅನ್ವೇಷಿಸಿ ಪರಿಹರಿಸಲು ಆಧುನಿಕ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಿದೆ. ಇಂತಹ ತಂತ್ರಜ್ಞಾನಗಳ ಮೂಲಕ ನಮ್ಮ ಸುತ್ತಲಿನ ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತೆ ನಾವಿನ್ಯ ಚಿಂತನೆಗಳನ್ನು ನಡೆಸಲು ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆ ನೀಡುವ ಜವಬ್ದಾರಿ ನಮ್ಮ ಉಪನ್ಯಾಸಕ ಸಮೂಹದ ಮೇಲಿದೆ. ನಾವಿನ್ಯ ಯೋಚನೆ ಯೋಜನೆಗಳಾಗಿ ಬದಲಾಗಲು ನಮ್ಮ ಕಾಲೇಜಿಲ್ಲಿ ಲಭ್ಯವಿರುವ ನ್ಯೂ ಜೆನ್ ಐ.ಇ.ಡಿ.ಸಿ, ಕೆ.ಎಸ್.ಸಿ.ಎಸ್.ಟಿ ಯಂತಹ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಾದ ಸೌಜನ್ಯ.ಎಸ್.ಡಿ, ಶರದಿ.ಎಸ್, ವರ್ಷ.ಆರ್, ಪ್ರೇಮಾ.ಈ.ವಿ ತಂಡ ಸಹ ಪ್ರಾದ್ಯಾಪಕರಾದ ಡಾ.ಚೇತನ್.ಕೆ.ಆರ್ ಮಾರ್ಗದರ್ಶನದಲ್ಲಿ ರೂಪಿಸಿದ ಇಂಟೆಲಿಜೆಂಟ್ ರಿಯಲ್ ಟೈಮ್ ವಾಟರ್ ಕಂಟೈನ್‌ಮೆಂಟ್ ಮಾಪನ ವ್ಯವಸ್ಥೆಗೆ ಪ್ರಥಮ ಸ್ಥಾನ ಲಭಿಸಿದೆ. ಈ ಯೋಜನೆಯಲ್ಲಿ ಪ್ರಸ್ತಾಪಿಸಿದ ಕೃತಕ ಬುದ್ದಿಮತೆ ನೀರಿನ ಶುದ್ದಿಕರಣಾ ಸೂಚಕಗಳು ನೀರನ್ನು ಶುದ್ದಿಕರಿಸಲು ಹಾಗೂ ಮಾಲಿನ್ಯ ನಿಯಂತ್ರಿಸಲು ಪರಿಣಾಮಕಾರಿಯಾಗಿ ನಿಲ್ಲಲಿದೆ ಎಂದರು.
ಸಹ ಪ್ರಾದ್ಯಾಪಕರಾದ ಡಾ.ಮಂಜುಳಾ.ಜಿ.ಆರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶ್ರೀಲಕ್ಷ್ಮೀ ಜಾವಗಲ್, ಸಿಂಚನಾ ಶೆಟ್ಟರ್, ರಮ್ಯ.ಕೆ, ಶ್ರೀರಕ್ಷಾ.ಎಂ.ಎಸ್ ತಂಡ ರೂಪಿಸಿದ ಕ್ಯೂ ಆರ್ ಕೋಡ್ ಬಳಸಿ ಕಾಲೇಜು ಬಸ್ ಸೀಟುಗಳ ಸ್ವಯಂ ನೊಂದಣಿ ಯೋಜನೆಗೆ ದ್ವಿತೀಯ ಬಹುಮಾನ ಲಭಿಸಿದೆ. ಕೊವಿಡ್ ಹಿನ್ನಲೆಯಲ್ಲಿ ಸಾರಿಗೆ ಸೇವೆ ಬಳಸುವ ಸಂದರ್ಭದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಸ್ವಯಂಚಾಲಿತವಾಗಿ ಖಾತರಿಪಡಿಸಲು ಸಾಧ್ಯವಾಗಲಿದೆ ಎಂದರು.
ಸಹ ಪ್ರಾದ್ಯಾಪಕರಾದ ಮನೋಹರ ನೆಲ್ಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಪೂರ್ವ.ಯು, ಪ್ರಜ್ಞಾ.ಹೆಚ್.ವಿ, ಸೌಮ್ಯ.ಎಂ, ಯಶಸ್ವಿನಿ ಲಿಂಗರಾಜ್ ರೂಪಿಸಿದ ವೃದ್ದರು ಮತ್ತು ದೃಷ್ಟಿಹೀನರಿಗೆ ನೆರವಾಗುವ ಸ್ವಯಂ ಜೌಷಧಿ ವಿತರಕ ವ್ಯವಸ್ಥೆಗೆ ಮೂರನೇ ಬಹುಮಾನ ಲಭಿಸಿದೆ. ಈ ವಿನೂತನ ಯೋಜನೆಯು ವೃದ್ದರು ಹಾಗೂ ದೃಷ್ಟಿಹೀನರಿಗೆ ಸ್ವಯಂ ಆರೈಕೆ ಮಾಡಿಕೊಳ್ಳಲು ನೆರವಾಗಲಿದೆ. ಜೊತೆಗೆ ಸ್ವಯಂ ಜ್ಞಾಪನಾ ವ್ಯವಸ್ಥೆಗಳ ಮೂಲಕ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥ ನಾರಾಯಣ ಶೆಟ್ಟಿ ವಿದ್ಯಾರ್ಥಿಗಳ ನಾವಿನ್ಯ ಚಿಂತನೆಗಳ ಕಿರುಹೊತ್ತಿಗೆ ಬಿಡುಗೊಳಿಸಿದರು. ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಖಜಾಂಚಿಗಳಾದ ಸಿ.ಆರ್.ನಾಗರಾಜ, ಪ್ರಾಂಶುಪಾಲರಾದ ಡಾ.ಮಂಜುನಾಥ.ಪಿ, ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮಾ.ಕೆ.ಎಂ, ಕಾರ್ಯಕ್ರಮ ಸಂಯೋಜಕರಾದ ಡಾ.ಜಲೇಶ್ ಕುಮಾರ್, ಡಾ.ಚೇತನ್.ಕೆ.ಆರ್, ಗಾನವಿ.ಎಂ, ಆಯಿಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post