ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ಈ 17 ಬೈಕ್ ಕಳವು ಪ್ರಕರಣದಲ್ಲಿ ಇಬ್ಬರು ಭಾಗಿಯಾಗಿದ್ದು, ಒಬ್ಬ ಅಪ್ರಾಪ್ತನಾಗಿದ್ದಾನೆ. ಇನ್ನೊಬ್ಬ ವಯಸ್ಕನಾಗಿದ್ದು, ಆತನ ಸಹಚರನಾಗಿದ್ದಾನೆ. ಜಬೀವುಲ್ಲಾ ಎಂಬಾತ ಪರಾರಿಯಾಗಿದ್ದು, ಆತನ ಬಂಧಿಸಲು ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ.18 ರಂದು ಬೈಪಾಸ್ ರಸ್ತೆಯ ದಿಲ್ಲಿ ದರ್ಬಾರ್ ಹೋಟೆಲ್ ಹಿಂದೆ ನಿಲ್ಲಿಸಿದ್ದ ಕೆಎ14 ಇಎನ್ 8461 ಹೋಂಡಾ ಡಿಯೋ ದ್ವಿಚಕ್ರವಾಹನ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ಪತ್ತೆಗೆ ಪೊಲೀಸ್ ಇನ್ಸ್ ಪೆಕ್ಟರ್ ರವಿ ಪಾಟೀಲ್ ಅಪರಾಧ ದಳದ ಪಿಎಸ್‍ಐ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು. ಆ ತಂಡವು 20 ದಿನಗಳಲ್ಲಿ ಆರೋಪಿ ಮತ್ತು ಬೈಕ್ ಅನ್ನು ಪತ್ತೆ ಮಾಡಿದ್ದಾರೆ ಎಂದರು.
Also read: ಅಧಿಕಾರ ದಾಹ ಬಿಟ್ಟು ರಾಜ್ಯವನ್ನು ಭಯೋತ್ಪಾದಕರಿಂದ ರಕ್ಷಿಸಿ: ಮಾಜಿ ಡಿಸಿಎಂ ಈಶ್ವರಪ್ಪ
ನಂತರ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಶಿವಮೊಗ್ಗವಲ್ಲದೇ ಸಾಗರ, ಹೊನ್ನಾಳಿ, ಸಖರಾಯಪಟ್ಟಣ, ರಾಮನಗರ, ಹಾಸನ, ತುಮಕೂರು, ಮೈಸೂರು ಹೀಗೆ ಒಟ್ಟು ವಿವಿಧೆಡೆ ಒಟ್ಟು 14 ಬೈಕ್ ಕಳವು ಮಾಡಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಅದಲ್ಲದೇ ಇನ್ನೂ ಮೂರು ಪ್ರತ್ಯೇಕ ಪ್ರಕರಣ ಮೂರು ಬೈಕ್ ಗಳನ್ನು ಸದರಿ ತಂಡ ವಶಪಡಿಸಿಕೊಂಡಿದೆ. 17 ಬೈಕ್ ಗಳ ಒಟ್ಟು ಬೆಲೆ 10.55ಲಕ್ಷ ರೂ. ಆಗಿದೆ ಎಂದರು.
ಈ ಪ್ರಕರಣ ಭೇದಿಸಲು ಭಾಗಿಯಾದ ಪಿಎಸ್‍ಐ ಅಪರಾಧ ವಿಭಾಗದ ಆರ್. ಶ್ರೀನಿವಾಸನ್, ಪಿಎಸ್‍ಐ ತಿಮ್ಮಪ್ಪ, ಸಿಬ್ಬಂದಿಗಳಾದ ಪಾಲಾಕ್ಷ ನಾಯ್ಕ್, ಚಂದ್ರಾ ನಾಯ್ಕ, ಹೇಮಂತ್ ಕುಮಾರ್, ಪುನೀತ್, ಎಂ. ಚಂದ್ರಾನಾಯಕ್, ಮನೋಹರ್, ನಿತಿನ್, ಸುಮಿತ್ರಾಬಾಯಿ ಅವರನ್ನು ಅಭಿನಂದಿಸಿದರು.
ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಕಳ್ಳತನ ಪ್ರಕರಣ ವರದಿಯಾಗಿವೆ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವವರನ್ನು ವಿಚಾರಿಸಲಾಗುತ್ತಿದೆ. ಸಿಸಿ ಕ್ಯಾಮೆರಾ ಹಾಕಲಾಗಿದೆ. ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕಿಸಲಾಗಿದೆ.
ಭದ್ರಾವತಿ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‍ಐಆರ್ ದಾಖಲಾಗಿದ್ದು, ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗಾಯಾಳು ಗೋಕುಲ್ ಮೇಲೂ ಕೂಡ ಒಂದು ಕೇಸ್ ದಾಖಲಾಗಿದೆ. ಹೆಚ್ಚಿನ ತನಿಖೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿದೆ ಎಂದರು.
ನಗರದಲ್ಲಿ ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಅತ್ಯಾಧುನಿಕ ಆಟೋಮೆಟಿಕ್ ಸಿಗ್ನಲ್ ಅಳವಡಿಸಲಾಗಿದೆ. ಸಿಗ್ನಲ್ ಜಂಪ್ ಪ್ರಕರಣಗಳು ಕೂಡ ದಾಖಲಾಗಿವೆ. ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಸಲಹೆಗಳು ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಅವರು ಕೋರಿದರು.
ಆಟೋ ಮೀಟರ್ ಅಳವಡಿಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಚಾಲಕರು ತೊಂದರೆ ಕೊಟ್ಟಲ್ಲಿ ಅಥವಾ ಸಮವಸ್ತ್ರ ಧರಿಸದೇ ಇದ್ದಲ್ಲಿ ಯಾವುದೇ ದೂರು ಇದ್ದರೂ ಕೂಡ ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗದೇ ಟ್ರಾಫಿಕ್ ಠಾಣೆಗೆ ದೂರು ನೀಡಿ ಅಥವಾ ಸಂಬಂಧಪಟ್ಟ ಮೊಬೈಲ್ ಗೆ ಫೋನ್ ಮಾಡಿ ದೂರು ದಾಖಲಿಸುವಂತೆ ಅವರು ಸೂಚಿಸಿದರು. ಪ್ರೀಪೇಯ್ಡ್ ಆಟೋ ನಿಲ್ದಾಣಕ್ಕೆ ಸಂಬಂಧಿಸಿದಂತೆ ಆರ್.ಟಿ.ಒ. ಅವರು ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಆ ಬಗ್ಗೆ ಚರ್ಚೆಗಳು ಆಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಡಿ.ವೈ.ಎಸ್.ಪಿ. ಬಾಲರಾಜ್, ದೊಡ್ಡಪೇಟೆ ಠಾಣಾ ನಿರೀಕ್ಷಕ ರವಿ ಪಾಟೀಲ್ ಇದ್ದರು.









Discussion about this post