ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಜನತೆಗೆ ಮೂಳೆ ಮತ್ತು ಕೀಲು ಸಮಸ್ಯೆಗಾಗಿ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ತಿಲಕ್ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಸೆ.28ರ ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸ್ಪೈನ್ ಅಂಡ್ ಆಥೋಪಿಡಿಕ್ ಸರ್ಜನ್ ಡಾ. ಆಕಾಶ್ ಹೊಸತೋಟ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಮತ್ತು ಅನುಭವಿ ಮೂಳೆ ಚಿಕಿತ್ಸೆ ತಜ್ಞರ ತಂಡದೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ವ್ಯಾಪಕ ಶ್ರೇಣಿಯ ಮೂಳೆ ಮತ್ತು ಕೀಲು ಸ್ಥಿತಿಗಳಿಗೆ ವೈಯಕ್ತಿಕಗೊಳಿಸಿದ ಆರೈಕೆ ನೀಡಲಾಗುವುದು ಎಂದರು.

ಪುನರ್‍ವಸತಿ ಕೇಂದ್ರದೊಂದಿಗೆ ಸುಧಾರಿತ ಬೆನ್ನುಮೂಳೆಯ ಆರೈಕೆ ಘಟಕ. ಕ್ರೀಡಾಪಟುಗಳಿಗೆ ಸೇವೆ ಸಲ್ಲಿಸುವ ಸುಧಾರಿತ ಆರ್ತೋಸ್ಕೋಪಿ ಮತ್ತು ಕ್ರೀಡಾ ವೈದ್ಯಕೀಯ ಘಟಕ, ಸುಧಾರಿತ ಕೀಲು ಆರೈಕೆ ಘಟಕ, ಮಕ್ಕಳ ಮೂಳೆ ಚಿಕಿತ್ಸಾ ಘಟಕ, ಸಂಯೋಜಿತ ಯೋಗ ಮತ್ತು ಪುನರ್ವಸತಿ ಘಟಕ ಸೇರಿದಂತೆ ಹಲವಾರು ಮೂಲ ಸೌಕರ್ಯಗಳು ಲಭ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಪೂಜಾ ಆಕಾಶ್, ಡಾ. ದೀಪಕ್ ಉಪ್ಪಿನ್, ಡಾ. ಭರತ್ ಹೆಚ್.ಡಿ., ಡಾ. ಅಭಿಷೇಕ್ ಎಂ.ಬಿ. ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

























Discussion about this post