ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ನಗರದ ಸಾಂಸ್ಕೃತಿಕ ವೈಭವ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ `ಸಕಾರಾತ್ಮಕ ಶಿವಮೊಗ್ಗ’ವನ್ನು ನಿರ್ಮಿಸಲು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಸಾಮಾಜಿಕ ಜಾಲತಾಣದ ಯುವ ಕ್ರಿಯೇಟರ್‌ಗಳಿಗೆ ಕರೆ ನೀಡಿದರು.
ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶಾಂತಿ ನಗರದ ಸುಭದ್ರತೆ ಹಾಗೂ ಸೋಷಿಯಲ್ ಮೀಡಿಯಾ Social media ವೇದಿಕೆಗಳ ಜವಾಬ್ದಾರಿಯುತ ಬಳಕೆಯ ಕುರಿತ ವಿಶೇಷ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ನಗರದ ಸಂಚಾರ ನಿಯಮಗಳ ಜಾಗೃತಿ, ಸೈಬರ್ ಸುರಕ್ಷತೆ ಮತ್ತು ಗಾಂಜಾಗೆ ಸಂಬಂಧಿಸಿದಂತ ವಿಷಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಂಟೆಂಟ್ ಕ್ರಿಯೇಟರ್‍ಗಳು ಕೈಜೋಡಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಇನ್‍ಫ್ಲುಯೆನ್ಸರ್‍ಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರಲ್ಲದೆ, ಜಿಲ್ಲಾಡಳಿತದೊಂದಿಗೆ ಸದಾ ಸಹಕರಿಸುವುದಾಗಿ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
