ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ಆರು ತಿಂಗಳಿನಿಂದ ಶಿವಮೊಗ್ಗ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಲು ಆಗ್ರಹಿಸಿ ಇಂದು ಬಿಜಿಪಿ ರೈತ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಹಾಲು ಒಕ್ಕೂಟದಲ್ಲಿ #Shimul ಪ್ರತಿದಿನ ಸಂಜೆ ಡೀಲರ್ಗಳು ಹಾಲನ್ನ ಇಂಡೆಂಟ್ ಹಾಕುವಾಗ ಒಕ್ಕೂಟಕ್ಕೆ ಸಂದಾಯ ಮಾಡಬೇಕಾದ ಹಣವನ್ನು ಆನ್ಲೈನ್ ಮೂಲಕ ಸಂದಾಯ ಮಾಡುತ್ತಾರೆ. ಸರ್ವರ್ ಡೌನ್ ಇರುವಾಗ ಸಂಬಂಧಪಟ್ಟ ಅಧಿಕಾರಿಯ ಖಾತೆಗೆ ಹಣವನ್ನು ಹಾಕಿ ತದನಂತರ ಒಕ್ಕೂಟಕ್ಕೆ ಜಮೆ ಮಾಡುವುದು ಅನಿವಾರ್ಯವಾಗಿರುತ್ತದೆ. ಆದರೆ ಕಳೆದ ಆರು ತಿಂಗಳಿನಿಂದ ಅಧಿಕಾರಿಗಳು ಡೀಲರ್ಗಳಿಂದ ಹಾಕಿಸಿಕೊಂಡ ಹಣವನ್ನು ಒಕ್ಕೂಟಕ್ಕೆ ಜಮಾ ಮಾಡದೆ ಅವ್ಯವಹಾರವನ್ನು ನಡೆಸಿರುತ್ತಾರೆ ಎಂದು ಮನವಿದಾರರು ಆರೋಪಿಸಿದರು.
ಅಧಿಕಾರಿಗಳು ಹಣವನ್ನು ದುರ್ಬಳಕೆ ಕೂಡ ಮಾಡಿಕೊಂಡಿರುತ್ತಾರೆ ಎಂದು ಕಳೆದ ವಾರ ಒಕ್ಕೂಟದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮೂರು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಿರುತ್ತಾರೆ. ಕಳೆದ ಆರು ತಿಂಗಳಿನಿಂದ ಅಕೌಂಟ್ ಕಮಿಟಿ ಮೀಟಿಂಗ್ ನಡೆದಿದ್ದರೂ ಅಧಿಕಾರಿಗಳು ಪ್ರತಿನಿತ್ಯ ಜಮಾ ಖರ್ಚು ಪರಿಶೀಲನೆ ಮಾಡಿ ವ್ಯವಹಾರವನ್ನು ನಡೆಸುತ್ತಿರುವಾಗಲೂ ಯಾಕೆ ಇಂಥ ಪ್ರಕರಣ ನಡೆದಿದೆ ಎಂಬುದು ಪ್ರಶ್ನೆ ಮೂಡುತ್ತದೆ. ಇದರಲ್ಲಿ ಆಡಳಿತ ಮಂಡಳಿಯವರು ಸಹ ಭಾಗಿಯಾಗಿ ನಡೆಸಿರಬಹುದಾದ ಅವ್ಯವಹಾರವೆಂದು ಶಂಕೆಮೂಡುತ್ತದೆ ಎಂದು ಆರೋಪಿಸಿದರು.
Also read: ಸಿಲಿಕಾನ್ ಸಿಟಿಯಲ್ಲಿ ಶಿವಮೊಗ್ಗದ ಚಿತ್ರಕಾರ ನಂಜುಂಡಸ್ವಾಮಿಯವರ ವ್ಯಂಗ್ಯ ಚಿತ್ರ ಪ್ರದರ್ಶನ | ವಿಶೇಷ ಸಂದರ್ಶನ
ಈ ಹಗರಣದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಬೇಕು. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಹಾಲು ಉತ್ಪಾದಕರಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ. ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ತಿಳಿದು, ಕಳೆದ ತಿಂಗಳು ಒಂದು ರೂಪಾಯಿ ಹಾಲಿನ ದರವನ್ನು ಕಡಿಮೆ ಮಾಡಿರುತ್ತಾರೆ. ಈ ಎಲ್ಲಾ ಅವ್ಯವಹಾರಗಳಿಗೆ ಆಸ್ಪದ ಮಾಡಿಕೊಡಬಾರದು. ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮೊರ್ಚದ ಜಿಲ್ಲಾದ್ಯಕ್ಷ ಎಮ್.ಸಿದ್ದಲಿಂಗಪ್ಪ, ಕುಮಾರ್ ನಾಯ್ಡ, ಗಣೇಶ್ ಬೆಳಕಿ ,ಹರೀಶ್ ಮುಂತಾದವರಿದ್ದರು.
ಹಗರಣದ ವಿಷಯಕ್ಕೆ ಸಂಬಂಧಿಸಿದಂತೆ, ಪತ್ರಿಕಾಗೋಷ್ಠಿಯಲ್ಲಿ ಮತಾನಾಡಿದ ಜಿಲ್ಲಾದ್ಯಕ್ಷ ಸಿದ್ದಲಿಂಗಪ್ಪ ಸುಮಾರು ಎರಡು ಕೋಟಿ ಹಗರಣ ನಡೆದಿದೆ. ಈ ಬಗ್ಗೆ ಮಾಹಿತಿ ನೀಡದಂತೆ, ಹೊರಗೆ ಹೋಗದಂತೆ ಮಾಡಿದ್ದಾರೆ. ಹೊಸ ನಿರ್ದೇಶಕರ ಪಾತ್ರವೂ ಇದೆ ಎಂದು ಆರೋಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post