No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Thursday, July 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಿಲಿಕಾನ್ ಸಿಟಿಯಲ್ಲಿ ಶಿವಮೊಗ್ಗದ ಚಿತ್ರಕಾರ ನಂಜುಂಡಸ್ವಾಮಿಯವರ ವ್ಯಂಗ್ಯ ಚಿತ್ರ ಪ್ರದರ್ಶನ | ವಿಶೇಷ ಸಂದರ್ಶನ

kalpa News by kalpa News
November 8, 2024
in Special Articles
0
ಸಿಲಿಕಾನ್ ಸಿಟಿಯಲ್ಲಿ ಶಿವಮೊಗ್ಗದ ಚಿತ್ರಕಾರ ನಂಜುಂಡಸ್ವಾಮಿಯವರ ವ್ಯಂಗ್ಯ ಚಿತ್ರ ಪ್ರದರ್ಶನ | ವಿಶೇಷ ಸಂದರ್ಶನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸಂದರ್ಶನ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ  |

ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಾಧಕರು ಮಲೆನಾಡಿನ ಮಡಿಲಿನಿಂದ ಹೊರಹೊಮ್ಮಿದ್ದು ಅನೇಕರು ದೇಶದ ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾನ್ಯವಾಗಿ ಸಾಧಿಸುವ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ, ಎಲ್ಲ ರೀತಿಯ ಅಡೆತಡೆಗಳನ್ನು ಮೆಟ್ಟಿನಿಂತು ಇಂದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಮಲೆನಾಡಿನ ವ್ಯಂಗ್ಯ ಚಿತ್ರಕಾರ ನಂಜುಂಡಸ್ವಾಮಿ ಅವರು ಎಲ್ಲರಿಗೂ ಮಾದರಿ.

ಇಂತಹ ಕಲಾವಿದರು ಚಿತ್ರಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ನಲ್ಲಿ ನಡೆಯುತ್ತಿದೆ. ಇದನ್ನು ವೀಕ್ಷಿಸಲು ಹೋದಾಗ ಮಾತಿಗೆ ಸಿಕ್ಕ ನಂಜುಂಡಸ್ವಾಮಿ ಅವರು ಮಲೆನಾಡಿನ ಶಿವಮೊಗ್ಗದವರು ಎಂದು ತಿಳಿದಾಗ ಮನಸ್ಸಿನಲ್ಲಿ ಏನೋ ಒಂದು ರೀತಿ ವ್ಯಕ್ತಪಡಿಸಲಾಗದ ಆನಂದ!!
ಸುಮಾರು 8 ವರ್ಷಗಳಿಂದ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು, ನಾಲ್ಕು ಏಕವ್ಯಕ್ತಿ ಪ್ರದರ್ಶನ, ಹಲವು ಗ್ರೂಪ್ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.

ಕಳೆದ ಎರಡು ದಶಕಗಳಿಂದ ತಮ್ಮ ಆಕರ್ಷಣೀಯ ರೇಖೆಗಳ ಮೂಲಕ ವ್ಯಂಗ್ಯಚಿತ್ರ ರಚಿಸಿಕೊಂಡು ಬಂದಿರುವ ಶಿವಮೊಗ್ಗ ಮೂಲದ ಕಲಾವಿದ ನಂಜುಂಡಸ್ವಾಮಿ ಅವರ ಕಲಾಪ್ರದರ್ಶನ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ.

90ಕ್ಕೂ ಹೆಚ್ಚು ಸಾಹಿತಿಗಳ ವಿವಿಧ ಭಾವಗಳ ಕ್ಯಾರಿಕೇಚರ್ ಪ್ರದರ್ಶಿಸಲ್ಪಟ್ಟಿವೆ. ವಿಭಿನ್ನ ಮಾಧ್ಯಮಗಳಲ್ಲಿ ರಚಿಸಿರುವ ಚಿತ್ರಗಳು ಪ್ರದರ್ಶನದಲ್ಲಿದೆ.

ನಂಜುಂಡಸ್ವಾಮಿ ಅವರ ರೇಖೆಯಲ್ಲಿನ ಶಕ್ತಿ ಪ್ರತಿಯೊಂದು ಸಾಹಿತಿಗಳ ಭಾವಕ್ಕೆ ಇನ್ನಷ್ಟು ಮೆರಗು ತಂದಿದೆ. ಆಯಾ ಸಾಹಿತಿಗಳಲ್ಲಿ ಕಾಣಬಹುದಾದ ಕೆಲ ವಿಶೇಷ ಗುಣಗಳು ಕಣ್ಣೆದುರು ನಿಲ್ಲುವ ರೀತಿಯಲ್ಲಿ ರಚಿಸಿದ್ದಾರೆ.
ಕನ್ನಡದ ಪ್ರಸಿದ್ಧ ಕವಿಗಳಾದ ಕುವೆಂಪು, ಪು.ತಿ. ನರಸಿಂಹಾಚಾರ್, ಜೆ.ಪಿ. ರಾಜರತ್ನಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ್ರಿವೇಣಿ, ಟಿ.ಪಿ. ಕೈಲಾಸಂ, ಹಾಗೂ ನಾಡಿನ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು, ಮಲೆನಾಡಿನ ಗಾಯಕರಾದ ಗರ್ತಿಕೆರೆ ರಾಘಣ್ಣ, ಪರಿಸರ ಮಾತೆ ಸಾಲುಮರದ ತಿಮ್ಮಕ್ಕ ಹಾಗೂ ಚಲನಚಿತ್ರ ನಟರಾದ ರಾಜ್ ಬಿ. ಶೆಟ್ಟಿ ಹಾಗೂ ನಾಡಿನ ಮೈಸೂರು ಅನಂತಸ್ವಾಮಿ, ಜಿ.ಆರ್. ವಿಶ್ವನಾಥ್, ಸುಧಾಮೂರ್ತಿ, ಗೋಪಾಲಕೃಷ್ಣ ಅಡಿಗ ಎಚ್.ಎಸ್. ವೆಂಕಟೇಶ್ ಮೂರ್ತಿ ಮತ್ತು ರಾಜಕುಮಾರ್, ಪುನೀತ್ ರಾಜಕುಮಾರ್, ವಿಶ್ವೇಶ್ವರಯ್ಯ, ನಿಸಾರ್ ಅಹ್ಮದ್, ಅನಂತನಾಗ್, ಸಿ. ಅಶ್ವಥ್ ಹೀಗೆಯೇ ಬರೆಯುತ್ತಾ ಹೋದರೆ ನಂಜುಂಡಸ್ವಾಮಿ ಅವರ ಕೈಯಲ್ಲಿ ಅರಳಿದ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ನೂರಾರು ಚಿತ್ರಗಳು ನಂಜುಂಡಸ್ವಾಮಿಯವರ ಕುಂಚದಲ್ಲಿ ಅಚ್ಚುಕಟ್ಟಾಗಿ ಚಿತ್ರಸಲ್ಪಟ್ಟಿದ್ದು, ಇದು ಅವರ ಕಲಾ ನೈಪುಣ್ಯತೆ, ವಿನೂತನ ಶೈಲಿ ಹಾಗೂ ಕಲಾವಿದ ತನ್ನ ಕುಂಚದಲ್ಲಿ ಹೇಗೆ ಅರಳಿಸಬಲ್ಲ ಎಂಬುದಕ್ಕೆ ಇವರ ಚಿತ್ರೀಗಳೇ ಸಾಕ್ಷಿ, ಇಂತಹ ವಿಶೇಷ ರೇಖಾಚಿತ್ರಗಳನ್ನು ಎಲ್ಲರೂ ಹೋಗಿ ಒಮ್ಮೆ ನೋಡಿ ಬರಬೇಕು ಎಂಬುದು ಕಲ್ಪ ಮೀಡಿಯಾ ಹೌಸ್ ಆಶಯ.
ಈ ಪ್ರತಿಭಾನ್ವಿಕ ಕಲಾವಿದರೊಂದಿಗೆ ಕಲ್ಪ ಮೀಡಿಯಾ ಹೌಸ್ ವಿಶೇಷ ಸಂದರ್ಶನ ನಡೆಸಿದ್ದು, ಅದರ ವಿವರಗಳ ಓದುಗರಿಗೆ ಅರ್ಪಣೆ.

ಕಲ್ಪ ಮೀಡಿಯಾ ಹೌಸ್: ನಿಮ್ಮ ಪರಿಚಯ ತಿಳಿಸಿ?
ನಂಜುಂಡಸ್ವಾಮಿ: ನಾನು ಶಿವಮೊಗ್ಗದಲ್ಲಿ 1964ರ ನವೆಂಬರ್ 4ರಂದು ಜನಿಸಿದೆ. ನನ್ನ ತಂದೆ ಶ್ರೀ ವೈ.ಕೆ. ಶ್ರೀಕಂಠಯ್ಯ ಹಾಗೂ ತಾಯಿ ಶ್ರೀಮತಿ ಲಕ್ಷ್ಮೀದೇವಿ.

ಕಲ್ಪ ಮೀಡಿಯಾ ಹೌಸ್: ನಿಮ್ಮ ಈ ಕಲೆಗೆ ಗುರು ಯಾರು?
ನಂಜುಂಡಸ್ವಾಮಿ: ನನ್ನ ಈ ಚಿತ್ರಕಲೆಗೆ ತಂದೆಯೇ ಮೊದಲ ಗುರುಗಳು. ನಂತರ ಶಿಲ್ಪಿ ಕೆ. ಜ್ಞಾನೇಶ್ವರ್ ಅವರಲ್ಲಿ ಹೆಚ್ಚಿನ ತರಬೇತಿ ಪಡೆದೆ. ಆನಂತರ ವ್ಯಂಗ್ಯಚಿತ್ರರಚನೆಗೆ ಹಿರಿಯ ವ್ಯಂಗ್ಯ ಚಿತ್ರಕಾರ ಗುಜ್ಜಾರ್ ಮಾರ್ಗದರ್ಶನ ಮಾಡಿದ್ದಾರೆ.

ಕಲ್ಪ ಮೀಡಿಯಾ ಹೌಸ್: ನಿಮ್ಮ ವಿದ್ಯಾಭ್ಯಾಸ?
ನಂಜುಂಡಸ್ವಾಮಿ: ಕಮರ್ಷಿಯಲ್ ಆರ್ಟ್ಸ್, ಫೈನ್ ಆರ್ಟ್ಸ್, ಸಾಂಪ್ರದಾಯಿಕ ಕಲೆ.

ಕಲ್ಪ ಮೀಡಿಯಾ ಹೌಸ್: ಎಷ್ಟನೇ ವಯಸ್ಸಿನಿಂದ ಚಿತ್ರಕಲೆ ರಚನೆ ಆರಂಭಿಸಿದಿರಿ?
ನಂಜುಂಡಸ್ವಾಮಿ: ನನ್ನ 17ನೇ ವಯಸ್ಸಿನಿಂದಲೇ ಈ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದೇನೆ.

ಕಲ್ಪ ಮೀಡಿಯಾ ಹೌಸ್: ಯಾವೆಲ್ಲಾ ಪತ್ರಿಕೆಗಳಲ್ಲಿ ನಿಮ್ಮ ವ್ಯಂಗ್ಯ ಚಿತ್ರಗಳು ಪ್ರಕಟಗೊಂಡಿವೆ?
ನಂಜುಂಡಸ್ವಾಮಿ: ತರಂಗ, ಸುಧಾ, ತುಷಾರ, ಮಯೂರ, ವಿಜಯವಾಣಿ, ವಿಶ್ವ ವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಹಲವು ಪತ್ರಿಕೆಗಳಲ್ಲಿ ಹಾಗು ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಕಲ್ಪ ಮೀಡಿಯಾ ಹೌಸ್: ಯಾವೆಲ್ಲಾ ಪ್ರಶಸ್ತಿಗಳು ನಿಮಗೆ ಸಂದಿವೆ?
ನಂಜುಂಡಸ್ವಾಮಿ: ಪ್ರತಿಷ್ಠಿತ ಮಾಯಾ ಕಾಮತ್ ಪ್ರಶಸ್ತಿ ಅಲ್ಲದೆ ಹಲವು ಪ್ರಶಸ್ತಿಗಳು, ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಬಹುಮಾನಗಳು ಬಂದಿರುತ್ತೆ. ಅನೇಕ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalahamsa Infotech private limited

Tags: CartoonistIndian Institute of World CultureKannada News WebsiteLatest News Kannadaಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ಕಾರ್ಟೂನಿಸ್ಟ್ನಂಜುಂಡಸ್ವಾಮಿರಾಜ್ಯರಾಷ್ಟ್ರವ್ಯಂಗ್ಯ ಚಿತ್ರಕಾರಸಿಲಿಕಾನ್ ಸಿಟಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಹಾಡೋನಹಳ್ಳಿಯಲ್ಲಿ ಹೆಚ್ಚಿದ ಅಡಿಕೆ ಕಳ್ಳತನ | ರೈತರ ಆತಂಕ | ಕ್ರಮಕ್ಕೆ ಆಗ್ರಹ

Next Post

ಶಿವಮೊಗ್ಗ ಹಾಲು ಒಕ್ಕೂಟ ಮಾರುಕಟ್ಟೆ ವಿಭಾಗದ ಅವ್ಯವಹಾರ ತನಿಖೆ ನಡೆಸಿ: ಬಿಜಿಪಿ ರೈತ ಮೋರ್ಚಾ ಆಗ್ರಹ

kalpa News

kalpa News

Next Post
ದೆಹಲಿಯ ಎಲ್ಲ 7 ಕ್ಷೇತ್ರಗಳೂ ಬಿಜೆಪಿ ತೆಕ್ಕೆ ಸಾಧ್ಯತೆ | ಲೀಡ್’ನಲ್ಲಿ ಕಮಲ ಪಕ್ಷ

ಶಿವಮೊಗ್ಗ ಹಾಲು ಒಕ್ಕೂಟ ಮಾರುಕಟ್ಟೆ ವಿಭಾಗದ ಅವ್ಯವಹಾರ ತನಿಖೆ ನಡೆಸಿ: ಬಿಜಿಪಿ ರೈತ ಮೋರ್ಚಾ ಆಗ್ರಹ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL