ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಯಲ್ಲಿ ಸ್ಪತಂತ್ರವಾಗಿ ಸ್ಪರ್ಧಿಸಿರುವ ನನ್ನ ಬಗ್ಗೆ ಭಯ ಆರಂಭವಾಗಿ ಬಹಳ ದಿನಗಳೇ ಆಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆ ಮಾಡುವುದಾದರೆ ನೇರ ಚುನಾವಣೆಗೆ ಬನ್ನಿ ಅಪಪ್ರಚಾರಗಳಿಗೆ ಬಗ್ಗಲ್ಲ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ನನ್ನ ಬಗ್ಗೆ ಭಯ ಆರಂಭವಾಗಿ ಬಹಳ ದಿನವಾಗಿದೆ. ಮಧು ಬಂಗಾರಪ್ಪ ಈಶ್ವರಪ್ಪ ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ ಆದರೆ ವರ್ಜಿನಲ್ಲ ಬಿಜೆಪಿ ನನ್ನದೆ ಎಂದು ಬೆಂಬಲಿಗರು ತೋರಿಸಿದ್ದಾರೆ ಎಂದರು.

Also read: ಏ.19ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ: ಗುರುದತ್ತ ಹೆಗಡೆ
ವಿಜಯೇಂದ್ರ ರವರು #Vijayendra ನಾಮ ಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ ಇನ್ನೂ ಕಾಲ ಮಿಂಚಿಲ್ಲ ಹಿರಿಯರು ಮಾತನಾಡುತ್ತಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಅಪಪ್ರಚಾರಕ್ಕೂ ಈಶ್ವರಪ್ಪ ಬಗ್ಗಲ್ಲ. ನೂರಕ್ಕೆ ನೂರು ಸ್ಪರ್ಧೆ ಮಾಡುತ್ತೇನೆ ಯಾರಿಗೂ ನಿರಾಶೆ ಮಾಡೋಲ್ಲ ಚುನಾವಣೆಯಲ್ಲಿ ಗೆದ್ದು ಮೋದಿಯವರನ್ನು ಪ್ರಧಾನಿ ಮಾಡಲು ಕೈಎತ್ತುತ್ತೇನೆ ಎಂದರು.

ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ ಹೊಂದಾಣಿಕೆ ಮಾಡಿಲ್ಲ ಎಂದು ಮಧು ಬಂಗಾರಪ್ಪ #Madhu Bangarappa ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿಯಲ್ಲಿರುವ ಹಿಂದುತ್ವವನ್ನು ಅಪ್ಪ ಮಕ್ಕಳು ಹಿಂದೆ ಸರಿಸುತ್ತಿದ್ದಾರೆ ಇದರ ವಿರುದ್ಧ ನಮ್ಮ ಹೋರಾಟ ಬಿಜೆಪಿ ಹಿಂದುತ್ವ ಈಶ್ವರಪ್ಪ ಹಿಂದುತ್ವ ಒಂದೆ.ನಮ್ಮದು ಮೋದಿ ಹಿಂದುತ್ವ. ಕರ್ನಾಟಕದ ಬಿಜೆಪಿಯಲ್ಲಿ ಅಪ್ಪ ಮಕ್ಕಳು ಹಿಂದುತ್ವ ನಾಯಕರನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮದೆ ನಿಜವಾದ ಹಿಂದುತ್ವ ಎಂದು ಟಾಂಗ್ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post