ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಶ್ರಯ ಮನೆಗಳ ಫಲಾನುಭವಿಗಳ ಸಮಸ್ಯೆ ಪರಿಹಾರಕ್ಕೆ ನಗರಕ್ಕೆ ಬರುವಂತೆ ವಸತಿ ಸಚಿವ ಜಮೀರ್ ಅಹಮ್ಮದ್ #Minister Zameer Ahmed ಅವರಿಗೆ ನಾಲ್ಕು ಬಾರಿ ಆಹ್ವಾನ ನೀಡಲಾಗಿತ್ತು. ಆದರೆ ಬಂದಿಲ್ಲ. ಈಗ ವಕ್ಫ್ ಭೂಮಿ ಸಂಬಂಧವಾಗಿ ಅವರನ್ನು ನಗರಕ್ಕೆ ಕರೆ ತರುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಅರ್ಥವಿಲ್ಲದ್ದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬಂದರೆ ಜಮೀರ್ ಅವರಿಗೆ ಹೊಡೆಯವುದಾಗಿ ಎಲ್ಲಿಯೂ ಹೇಳಿಲ್ಲ. ಬದಲಾಗಿ ರಾಜ್ಯದಾದ್ಯಂತ ದೇವಸ್ಥಾನ, ಮಠ, ಮಂದಿರ, ಸರ್ಕಾರಿ ಜಮೀನು, ಸ್ಮಶಾನ ಭೂಮಿಯನ್ನು ವಕ್ಫ್ ಗೆ #Wakf Board ಸೇರಿಸುತ್ತಾ ಹೋದರೆ ಜಮೀರ್ ಅಹಮ್ಮದ್ ರಾಜ್ಯದಲ್ಲಿ ಓಡಾಟ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿರುವುದಾಗಿ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
Also read: ಸಿಹಿಮೊಗೆ ಸಂಭ್ರಮ -1 ಆಯೋಜನೆ | ಏನೆಲ್ಲಾ ಸ್ಪರ್ಧೆಗಳಿವೆ? ನೀವೂ ಪಾಲ್ಗೊಳ್ಳಬಹುದೇ? ಇಲ್ಲಿದೆ ಮಾಹಿತಿ
ಪ್ರಕೃತಿ ಸಹಜವಾಗಿರುವ ಝರಿ ನೀರಿನ ಬಳಸುವವರಿಗೆ ಶೇ.3 ರಷ್ಟು ಹಸಿರು ಸೆಸ್ ಹಾಕುವುದಾಗಿ ಹೇಳಿರುವ ಅರಣ್ಯ ಸಚಿವರ ಹೇಳಿಕೆ ಹೊಣೆಗೇಡಿತನದಿಂದ ಕೂಡಿದೆ. ಆದಾಯವಿಲ್ಲ ಎಂಬ ಕಾರಣಕ್ಕೆ ಈ ರೀತಿ ಸೆಸ್ ಹಾಕುವುದಕ್ಕಿಂತ ಶಬರಿ ಮಲೈನಂತಹ ದೊಡ್ಡ ದೇವಸ್ಥಾನಗಳ ಮುಂದೆ ಕುಳಿತು ಭಿಕ್ಷೆ ಬೇಡುವುದು ಒಳ್ಳೆಯದೆಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post