ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟೈಯರ್-2 ನಗರಗಳ ಸಣ್ಣ ಮಾರುಕಟ್ಟೆಗಳಲ್ಲೂ ಎಕ್ಸ್ ಕ್ಲೂಸಿವ್ ಧಿರಿಸುಗಳು, ಅಲಂಕಾರಿಕ ವಸ್ತುಗಳು ಸಿಗುತ್ತಿರುವುದು ಹೆಮ್ಮೆಯ ವಿಷಯ ಎಂದು ತೇಜಸ್ವಿನಿ ರಾಘವೇಂದ್ರ #Tejaswini Raghavendra ಹೇಳಿದ್ದಾರೆ.
ಶಿವಮೊಗ್ಗದ ಜುವೆಲ್ ರಾಕ್ ಹೊಟೆಲ್ ಸಭಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿರುವ ಅರ್ಬನ್ ಇಂಡಿಯಾ #Urban India ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.

ಇದು ಮೆಟ್ರೋ ನಗರಗಳಲ್ಲಿ ಮಾತ್ರ ಲಭ್ಯವಿರುವ ವಿಶೇಷ ಉತ್ಪನ್ನಗಳ ನಡುವಿನ ಅಂತರವನ್ನು ಶಿವಮೊಗ್ಗದಲ್ಲಿ ಪ್ರದರ್ಶನ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಇಂತಹ ಪ್ರದರ್ಶನಗಳು ಕೇವಲ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಮಹಿಳೆಯರಿಗೆ ಅಗತ್ಯವಾದ ಎಲ್ಲಾ ಉತ್ಪನ್ನಗಳು ಇಲ್ಲಿ ಲಭ್ಯವಿರುವ ಪ್ರದರ್ಶನ ಉದ್ಘಾಟಿಸಿರುವುದು ನನಗೆ ಸಂತಸ ತಂದಿದೆ ಎಂದರು.

ಈ ವೇಳೆ ಅರ್ಬನ್ ಇಂಡಿಯಾ ಸಂಸ್ಥಾಪಕಿ ನಿರಂಜನಿ ರವೀಂದ್ರ, ಶ್ರಾವಣ ಸುಭಾಷ್, ನಯನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post