ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡೀ ಜಗತ್ತಿಗೆ ದೇವರು ಹೇಗಿದ್ದಾನೆ ಎಂದು ತಮ್ಮ ಶಿಲ್ಪಕಲೆಯ ಮೂಲಕ ತೋರಿಸಿಕೊಟ್ಟವರು ಅಮರ ಶಿಲ್ಪಿ ಜಕಣಾಚಾರಿಯವರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ Amarashilpi Jakanachari ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಜಗತ್ತು ನಮ್ಮೆಡೆ ನೋಡುವಂತೆ ಮಾಡಿರುವುದು ಇಂತಹ ಶಿಲ್ಪಿಗಳು. ದೇಶದ ಶಿಲ್ಪಕಲೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಶಿಲ್ಪಕಲೆ ದೇಶದ ಅಸ್ಮಿತೆ. ದೇವಾಲಯಗಳ ಬಗ್ಗೆ ಶ್ರದ್ದೆ, ನಂಬಿಕೆ ಮತ್ತು ಆಸಕ್ತಿ ಹೊಂದಿರುವವರು ನಾವು. ನಮ್ಮದು ಸನಾತನ, ದೇವನಿರ್ಮಿತ ದೇಶ. ಸೋಮನಾಥ ಪುರ ಸೇರಿದಂತೆ ಅಯೋಧ್ಯ, ಕಾಶಿ ವಿಶ್ವನಾಥ ಹೀಗೆ ಅನೇಕ ದೇವಾಲಯಗಳನ್ನು ಭಗ್ನಗೊಳಿಸಲಾಗಿದ್ದು, ಹೋರಾಟದ ಮೂಲಕ ನಮ್ಮ ದೇವಾಲಯಗಳು ಮತ್ತು ಪರಂಪರೆಯನ್ನು ಉಳಿಸಿಕೊಂಡಿದ್ದೇವೆ ಎಂದರು.

Also read: ಕಾರು-ಬೈಕ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
12 ನೇ ಶತಮಾನದಲ್ಲಿ ತುಮಕೂರು ಬಳಿಯ ಕ್ರೀಡಾಪುರದಲ್ಲಿ ಜಕಣಾಚಾರಿಯವರು ಜನಿಸಿದರು. ವಿಶ್ವ ಪ್ರಸಿದ್ದ ಬೇಲೂರು, ಹಳೇಬೀಡು, ಸೋಮನಾಥ ದೇವಾಲಯ ನಿರ್ಮಾಣ ಮಾಡಿ ತಮ್ಮ ಕಲೆ, ಕೌಶಲ್ಯ, ಜಾಣ್ಮೆ, ಶ್ರದ್ದೆ ಮತ್ತು ಹಠವನ್ನು ಈ ಶಿಲ್ಪಕಲೆ ಮೂಲಕ ವಿಶ್ವಕ್ಕೇ ಸಾರಿದ್ದಾರೆ. ನಾವೆಲ್ಲ ಈ ಕುರಿತು ಚಿಂತಿಸಬೇಕು ಎಂದರು.

ಇದೇ ವೇಳೆ ಸಮಾಜದ ಇಬ್ಬರು ಸಾಧಕರಾದ ಶ್ರೀ ನವೀನ್ ಮತ್ತು ಶ್ರೀ ಭರತ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು. ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಆಗರದಹಳ್ಳಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಎನ್.ಟಿ.ಬಸವರಾಜ್, ಜಿಲ್ಲಾ ವಿಶ್ವಕರ್ಮ ಬ್ರಾಹ್ಮಣರ ಸಮಾಜದ ಅಧ್ಯಕ್ಷ ಸೋಮಾಚಾರಿ, ಮಾಜಿ ನಗರಸಭಾ ಉಪಾಧ್ಯಕ್ಷ ರಮೇಶ್, ಕಾಳಿಕಾಂಬ ದೇವಸ್ಥಾನದ ಶ್ರೀನಿವಾಸ ಮೂರ್ತಿ, ಸಮಾಜದ ಮುಖಂಡರು, ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post