ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬರೂ ತಮ್ಮ ಮರಣದ ನಂತರ ನೇತ್ರದಾನ ಮಾಡುವಂತೆ ಪ್ರೇರಣೆ ಮಾಡುವ ಉದ್ದೇಶದಿಂದ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ, ಶಂಕರ ಕಣ್ಣಿನ ಆಸ್ಪತ್ರೆ, ಮಲೆನಾಡು ನೇತ್ರ ತಜ್ಞರ ಸಂಘ, ಭಾರತೀಯ ದಂತ ತಜ್ಞರ ಸಂಘ ಹಾಗೂ ರೋಟರಿ ಮಿಡ್ ಟೌನ್ ಶಿವಮೊಗ್ಗದ ಸಹಯೋಗದಲ್ಲಿ ಯೋಜಿಸಲಾಗಿದ್ದ ನೇತ್ರದಾನ ಪಾಕ್ಷಿಕೆ ಪ್ರಯುಕ್ತ ಜಾಥಾ ಯಶಸ್ವಿಯಾಗಿ ನಡೆಯಿತು.

ಐಎಂಎ ಹಾಲ್ ನಿಂದ ಹೊರಟ ಜಾಥಾ ಗೋಪಿ ಸರ್ಕಲ್’ನಲ್ಲಿ ಸಮಾವೇಶಗೊಂಡಿತು. ಅಲ್ಲಿ, ಮಾನವ ಸರಪಳಿಯನ್ನು ನಿರ್ಮಿಸಿ ನೇತ್ರದಾನದ ಕುರಿತು ಘೋಷಣೆಗಳನ್ನು ಮಾಡಲಾಯಿತು.
ಜಾಥಾದಲ್ಲಿ ಡಾ. ಎಸ್. ಶ್ರೀಧರ, ಡಾ. ವಿನಯ ಶ್ರೀನಿವಾಸ್, ಡಾ. ಟಿ. ಅಶೋಕ್, ಡಾ.ಎಚ್.ಎಂ. ಮಲ್ಲಿಕಾರ್ಜುನ್, ಡಾ. ಎಸ್. ಮಹೇಶ್, ಡಾ. ಬಿ.ಎಂ. ಗೌತಮ್, ಡಾ. ಅಕ್ಷತ ಓಕಡೆ, ಡಾ. ಜೀನತ್, ಡಾ. ಬಿ.ಪಿ. ವಿಶ್ವನಾಥ್ ಸೇರಿ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post