ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಶ್ಚಿಮ ಬಂಗಾಳದ ಸಂದೇಶ್ ಕಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ABVP ದೇಶದಾದ್ಯಂತ ನೀಡಿದ ಪ್ರತಿಭಟನಾ ಕರೆಯಂತೆ ಶಿವಮೊಗ್ಗ ಎಬಿವಿಪಿ ಘಟಕದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶವಾಲಿ ಪ್ರದೇಶದ ಮಹಿಳೆಯರು ಲೈಂಗಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದು, ಅವರ ಅಸ್ಮಿತೆಯ ಮೇಲೆ ಜಿಹಾದಿ ಗುಂಪು ದಾಳಿ ನಡೆಸುತ್ತಿದ್ದು, ಸಂತ್ರಸ್ಥ ಮಹಿಳೆಯರಲ್ಲಿ ಹೆಚ್ಚಿನವರು ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕರು ಹಿಂದುಗಳ ಮನೆಗಳಿಂದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನು ಭಯಭೀತರನ್ನಾಗಿಸಿ, ಅಪಹರಿಸಿ ದೌರ್ಜನ್ಯ ನಡೆಸಿದ ಹೇಯ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರು ತುಷ್ಟೀಕರಣ ಮನೋಭಾವದಿಂದ ಜಾತ್ಯಾತೀ ತ ಮಹಿಳಾ ಮುಖ್ಯಮಂತ್ರಿ ಎಂದು ಕರೆಯಲ್ಪಡುವ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಈ ರೀತಿಯ ಮಹಿಳಾ ದೌರ್ಜನ್ಯ ನಡೆಯುತ್ತಿದ್ದರು. ಸರ್ಕಾರದ ತುಷ್ಟೀಕರಣ ನೀತಿ ಖಂಡಿಸಿ ಬೇಸತ್ತ ಸಾವಿರಾರು ಮಹಿಳೆಯರು ಇಂದು ಮಮತಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಾಂಗ್ಲಾ ದೇಶದ ಅಸುರಕ್ಷಿತ ಗಡಿಯಿಂದ ಜಿಹಾದಿಗಳ ಒಳನುಸುಳುವಿಕೆ ಜನ ಸಂಖ್ಯೆಯ ಅಸಮತೋಲನಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮಹಿಳೆಯರ ಸಾಮೂಹಿಕ ಅಸ್ಮಿತೆಯ ಮೇಲಿನ ದಾಳಿಯನ್ನು ತಕ್ಷಣವೇ ನಿಗ್ರಹಿಸಿ ಸಂದೇಶವಾಲಿಯ ಸಂತ್ರಸ್ಥ ಮಹಿಳೆಯರಿಗೆ ತ್ವರಿತ ನ್ಯಾಯ ಒದಗಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಿಗಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
Also read: ದೇವರಲ್ಲಿ ನಂಬಿಕೆ ಇಟ್ಟಮೇಲೆ ಕಷ್ಟಗಳಿಗೆ ಆತನನ್ನು ದೂಷಿಸಬಾರದು: ಹರಿಹರಪುರ ಶ್ರೀ
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ್ ಎಚ್.ಕೆ., ಅಭಿಷೇಕ್, ಮುಖೇಶ್, ಯಶವಂತ್, ಆಕಾಶ್, ವರುಣ್, ಸಚಿನ್, ಲೋಹಿತ್, ರವಿ, ಯಶಸ್ವಿನಿ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post