ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದು ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಇಬ್ಬರು ಹಿರಿಯ ಪತ್ರಕರ್ತರು ವಿಧಿವಶರಾಗಿದ್ದು, ಮಲೆನಾಡಿನ ಪತ್ರಿಕೋದ್ಯಮಕ್ಕೆ ಸೂತಕದ ಛಾಯೆ ಆವರಿಸಿದೆ.
ಪಬ್ಲಿಕ್ ಟಿವಿ ವರದಿಗಾರ ಕೆ.ವಿ. ಶಶಿಧರ್ ಅವರು ಇಹಲೋಕ ತ್ಯಜಿಸಿದ ದುಃಖದ ಬೆನ್ನಲ್ಲೇ, ಹಿರಿಯ ಪತ್ರಿಕಾ ಛಾಯಾಗ್ರಾಹಕ, ಇಂಡಿಯನ್ ಎಕ್ಸ್’ಪ್ರೆಸ್ ಪತ್ರಿಕೆಯ ಶಿವಮೊಗ್ಗ ನಂದನ್(57) ಇಂದು ವಿಧಿವಶರಾಗಿದ್ದಾರೆ.
Also Read>> ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಚುನಾವಣೆ | ನಕಲಿ ಮತದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಅನಾರೋಗ್ಯಕ್ಕೆ ಒಳಗಾಗಿದ್ದ ಶಿವಮೊಗ್ಗ ನಂದನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ನಂದನ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

1967ರಲ್ಲಿ ಅರಸಾಳುವಿನಲ್ಲಿ ಜನಿಸಿದ ನಂದನ್ ಅವರ ಪತ್ನಿ ಶೋಭಾ. ರಂಗಭೂಮಿ ಕಲಾವಿದ ಮತ್ತು ಪತ್ರಕರ್ತ ಚಂದನ್ ಮತ್ತು ಕೀರ್ತನಾ ಇವರ ಮಕ್ಕಳು.
ಇಂಡಿಯನ್ ಎಕ್ಸ್’ಪ್ರೆಸ್ ಪತ್ರಿಕೆಯ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಂದನ್, ಹಲವು ಪತ್ರಿಕೆ ಹಾಗೂ ವಾರಪತ್ರಿಕೆಗಳಿಗೂ ಸಹ ಸೇವೆ ಸಲ್ಲಿಸಿದ್ದಾರೆ.

ನಂದನ್ ಅವರ ಸಾಧನೆಯನ್ನು ಅರಸಿ 5 ರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿಗಳು, ಶಿವಮೊಗ್ಗ ದಸರಾದಲ್ಲಿ ಶಿವಮೊಗ್ಗ ನಗರಸಭೆ ವತಿಯಿಂದ ಪೌರ ಸನ್ಮಾನ, ಸ್ಥಳೀಯ ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರ, ಸನ್ಮಾನ, ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹ ವಿಶೇಷ ಪ್ರಶಸ್ತಿಗಳು ಸಂದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post