ರಿಪ್ಪನ್’ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ರಿಪ್ಪನ್’ಪೇಟೆ ನಿವಾಸಿಯಾಗಿದ್ದ ಖುರೇಶಿ ಈ ಭಾಗದಲ್ಲಿ ಅತ್ಯಂತ ಕ್ರಿಯಾಶೀಲ ಪತ್ರಕರ್ತರಾಗಿದ್ದು, ಅಪಾರ ಜನರ ವಿಶ್ವಾಸ ಗಳಿಸಿದ್ದರು. ಈ ಭಾಗದಲ್ಲಿ ಯಾವುದೇ ಬೆಳವಣಿಗೆಗಳಿದ್ದರೂ ಅತ್ಯಂತ ಕ್ಷಿಪ್ರಗತಿಯಲ್ಲಿ ಮಾಧ್ಯಮಗಳಿಗೆ ತಿಳಿಸುವುದರಲ್ಲಿ ನಿರತರಾಗಿದ್ದ ಖುರೇಷಿ, ಜಿಲ್ಲಾ ಮಟ್ಟದ ಕೆಲವು ಪತ್ರಿಕೆಗಳಿಗೆ ಸುದ್ದಿ ಮೂಲವಾಗಿದ್ದರು.
ಅಪ್ಪಟ ಸಮಾಜ ಸೇವಕರಾಗಿ ಗಮನ ಸೆಳೆದಿದ್ದ ಇವರು, ಸದಾ ಕಷ್ಟದಲ್ಲಿರುವ ಜೀವಗಳಿಗೆ ತುಡಿಯುತಿದ್ದ ಉತ್ಸಾಹಿಯಾಗಿದ್ದರು. ಅನಾಥ ಶವಗಳಿಗೆ ಯಾರು ಸಿಕ್ಕಿಲ್ಲ ಅಂದಾಕ್ಷಣ ಸಾಗಿಸಲು ನೆರವಾಗುತ್ತಿದ್ದ ಮಹಾನ್ ವ್ಯಕ್ತಿ ರಿಪ್ಪನ್’ಪೇಟೆ ಖುರೇಶಿ. 25 ವರ್ಷದಿಂದ ಸುಮಾರು ಶವಗಳನ್ನು ರಕ್ಷಣಾ ಇಲಾಖೆಯ ಮುಖಾಂತರ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಸಮಾಜ ಸೇವೆಯ ಒಂದು ಭಾಗವಾಗಿದ್ದ ಖುರೇಶಿ ಇನ್ನೂ ಬರೀ ನೆನಪು ಮಾತ್ರ.
ಖುರೇಶಿ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 2.30ಕ್ಕೆ ರಿಪ್ಪನ್’ಪೇಟೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಖುರೇಶಿ ಅವರ ನಿಧನಕ್ಕೆ ಕಲ್ಪ ನ್ಯೂಸ್ ಅತೀವ ದುಃಖ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತದೆ.
Discussion about this post