ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಸೀತಾರಾಮಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಜುಲೈ 10ರ ನಾಳೆ ಲೋಕ ಕಲ್ಯಾಣಾರ್ಥವಾಗಿ ಮೂಲ ಶ್ರೀರಾಮರಿಗೆ 1008 ಕುಂಭಗಳಲ್ಲಿ ಸಂಗ್ರಹಿತವಾದ ಪವಿತ್ರ ಜಲಾಭಿಷೇಕ ನಡೆಯಲಿದೆ.
ಈ ಪವಿತ್ರ ಕಾರ್ಯಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪವಿತ್ರ ನದಿಗಳ ತೀರ್ಥಗಳು ಹಾಗೂ 108 ಅಪರೂಪದ ಗಿಡಮೂಲಿಕೆಗಳ ಬೇರುಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ವಿಶಿಷ್ಟ ನವರತ್ನ ಅಭಿಷೇಕ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಮೈಸೂರಿನ ಆಚಾರ್ಯ ವಿನಯ್‌ರವರ ಸಾರಥ್ಯದಲ್ಲಿ ಋತ್ವಿಜರು ನಡೆಸಿಕೊಡಲಿದ್ದಾರೆ.
ಕೊರೋನಾ ನಿಯಮಗಳನ್ನು ಅನುಸರಿಸಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post