ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಫೊಕ್ಸ್ ಸಂಸ್ಥೆ ಇತರೆ ಸಂಸ್ಥೆಗಳ ಸಹಕಾರದೊಂದಿಗೆ ಅರಣ್ಯ ಮರು ಸ್ಥಾಪನೆಗಾಗಿ ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಜೂ.22ರಂದು ಬೆಳಿಗ್ಗೆ 9.30ರಿಂದ ಗಾಜನೂರು ಅರಣ್ಯ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಗಾಯಿತ್ರಿ ಬಿ.ಎಂ. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕೃತಿಯ ಉಳಿವು ನಮ್ಮ ನಿಲುವು ಎಂಬ ಧ್ಯೇಯದ ವಾಕ್ಯದ ಅಡಿಯಲ್ಲಿ ಅರಣ್ಯ ಮರುಸ್ಥಾಪನೆಗಾಗಿ ನಾವು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುತ್ತೇವೆ ಎಂದರು.
ಪ್ರಕೃತಿ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಆದರೆ ಇಂದು ಅದು ನಾಶವಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ದೃಷ್ಠಿಯಿಂದ ವಿದ್ಯಾರ್ಥಿಗಳಲ್ಲಿ ಮತ್ತು ಸಮಾಜದಲ್ಲಿ ಅರಣ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಮೂಡಿಸುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ಈ ಸಾಮಾಜಿಕ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ ಎಂದರು.
Also read: ಕಾರ್ಕಳ | ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ
ಈ ಕಾರ್ಯಕ್ರಮಕ್ಕೆ ಎಟಿಎನ್‍ಸಿ ಕಾಲೇಜಿನ ಉಪಾಧ್ಯಾಯ ವರ್ಗದವರು ಮತ್ತು ವಿದ್ಯಾರ್ಥಿಗಳು ನಮ್ಮೊಂದಿಗೆ ಸಹಕಾರ ನೀಡಿದ್ದಾರೆ. ಅಲ್ಲದೆ ಗಾಜನೂರಿನ ಬೃಂದಾವನ ಹೈಡ್ರೊಪವರ್ ಪ್ರೈವೇಟ್ ಲಿ., ಶಿವಮೊಗ್ಗದ ಸೀನಿಯರ್ ಛೇಂಬರ್, ಸಿರಿಗಂಧ ತಾಲ್ಲೂಕು ಸ್ತ್ರಿಶಕ್ತಿ ಒಕ್ಕೂಟ, ವೈಷ್ಣವ ಯೂನಿಫಾರಂ ವಿತರಕರು ವಿ.ಕೆ.ಟ್ರಸ್ಟ್ ಹರಿಯರ ಮುಂತಾದ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿದೆ ಎಂದರು.
ಕೇವಲ ಗಿಡ ನೆಡುವುದು ಮಾತ್ರವಲ್ಲ ಅವುಗಳ ಪೋಷಣೆಯನ್ನು ಮಾಡುವುದು ನಮ್ಮ ಸಂಸ್ಥೆಯ ಉದ್ಧೇಶವಾಗಿದೆ. ಸಾರ್ವಜನಿಕರು ನಮ್ಮ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಟಿಎನ್‍ಸಿ ಕಾಲೇಜಿನ ರವಿಕುಮಾರ್ ಮಮತಾ ಪಿ.ಆರ್., ನಾಗರಾಜ್ ಕೆ.ಆರ್. ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post