ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಸರ್ಕಾರಿ ನೌಕರರ ಭವನ ದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ #Karate ಅಸೋಸಿಯೇಷನ್ ಆಯೋಜಿಸಿದ ಕರಾಟೆ ತೀರ್ಪುಗಾರರ ಕಾರ್ಯಾಗಾರ ಮತ್ತು ಪರೀಕ್ಷೆ ಯಶಸ್ವಿಯಾಗಿ ನಡೆಯಿತು.
ವರ್ಲ್ಡ್ ಕರಾಟೆ ಫೆಡರೇಶನ್ ನ ನೂತನ ನಿಯಮಗಳ ಕುರಿತು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರಾಟೆ ಇಂಡಿಯಾ ಆರ್ಗನೈಸೇಷನ್ ನ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಪ್ರೇಮ್ ಜಿತ್ ಸೇನ್ ಭಾಗವಹಿಸಿ ಕರಾಟೆ ತೀರ್ಪುಗಾರರಿಗೆ ನಿಯಮಗಳಲ್ಲಿನ ಬದಲಾವಣೆಗಳ ಕುರಿತು ತಿಳಿಸಿದರು.
Also read: ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ | ಮುಂದುವರೆದ ಪರಿಶೀಲನೆ
ಈ ಪರೀಕ್ಷೆಯು ರಾಷ್ಟ್ರೀಯ ಫೆಡರೇಶನ್ ನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಂದ 43 ಕರಾಟೆ ತೀರ್ಪುಗಾರರು ಈ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಭಾರ್ಗವ್ ಮತ್ತು ಹಿರಿಯ ಉಪಾಧ್ಯಕ್ಷ ಅಲ್ತಾಫ್ ಪಾಷಾ, ಉಪಾಧ್ಯಕ್ಷ ಹಾಗೂ ಆಯೋಜಕ ಶಿವಮೊಗ್ಗ ವಿನೋದ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ಕರಾಟೆ ತೀರ್ಪುಗಾರರಾದ ಸುಧಾಕರ್, ರಂಗಸ್ವಾಮಿ, ಮೊಹಮ್ಮದ್ ಆರಿಫ್ ಸೈಯದ್ ರಿಯಾಜ್, ಬಾಲರಾಜ್ ಪಂಚಪ್ಪ,
ಶಿವಕುಮಾರ್, ಕೌಶಿಕ್, ಓಬಲೇಶ್, ಮೀನಾಕ್ಷಿ, ಅನೂಪ್, ಶ್ರೇಯಸ್, ಶರವಣ, ರಾಜೇಶ್, ಇಂಚನ, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post