ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆ ಸಿಐ ಶಿವಮೊಗ್ಗ ಭಾವನದ ವತಿಯಿಂದ ವಿದ್ಯಾರ್ಥಿ ಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರಾಟೆ ಶಿಕ್ಷಕಿ ಮೀನಾಕ್ಷಿ ಅವರಿಗೆ ಶೇಷ್ಠ ನಾರಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಕ್ಕಳಿಗೆ ಉಚಿತ ಕರಾಟೆ ಶಿಕ್ಷಣವನ್ನು ನೀಡಿದ ಕರಾಟೆ ಶಿಕ್ಷಕಿ ಮೀನಾಕ್ಷಿ ಅವರ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಹಲವಾರು ಪ್ರಶಸ್ತಿಗಳನ್ನು ಹಾಗೂ ಪುರಸ್ಕಾರಗಳನ್ನು ಗಳಿಳಿಗೆ ಭಾಜನರಾಗಿದ್ದಾರೆ.
Also read: ಹೋಳಿ ಹಬ್ಬವನ್ನು ಏಕೆ ಆಚರಿಸುತ್ತೇವೆ? ಆಚರಿಸುವ ಪದ್ಧತಿ ಹೇಗೆ?
ಈ ಸಂದರ್ಭದಲ್ಲಿ JCI ಶಿವಮೊಗ್ಗ ಭಾವನದ ಅಧ್ಯಕ್ಷೇ ಜೆಸಿ ಅನಿಶಾ ಕಾತರಕಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐ ಪಿ ಪಿ ಜೆಸಿ ಪೂರ್ಣಿಮಾ ಸುನಿಲ್ ಕಾರ್ಯದರ್ಶಿ ಜೆ ಸಿ ವಂದನಾ ದಿನೇಶ್ ಹಾಗೂ ಎಲ್ಲ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post