ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಾ ರೀತಿಯ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಬೆಲೆಯನ್ನು ಏರಿಕೆ ಮಾಡುತ್ತಿದೆ, ಇದರಿಂದ ಜನಸಾಮಾನ್ಯರಿಗೆ ತುಂಬಾ ಕಷ್ಟವಾಗುತ್ತಿದೆ .ಹಾಲು, ತರಕಾರಿ, ಹಣ್ಣು, ಗ್ಯಾಸ್,ಮುಂತಾದ ದಿನ ಬಳಕೆ ವಸ್ತುಗಳ ಏರಿಕೆ ಜೊತೆಗೆ ವಿದ್ಯಾರ್ಥಿಗಳ ಶುಲ್ಕವು ಸೇರಿದಂತೆ ಎಲ್ಲಾ ರೀತಿಯ ನೊಂದಣಿ ಶುಲ್ಕಗಳನ್ನು ಏರಿಸಲಾಗಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಕುಂಠಿತವಾಗಿದೆ ವಿದ್ಯಾರ್ಥಿಗಳ ಪೆÇೀಷಕರ ಆರ್ಥಿಕ ಸ್ಥಿತಿಗೆ ಇದು ತೊಂದರೆಯಾಗಿದೆ ಜನರ ಬಳಿ ಉಳಿತಾಯಕ್ಕು ಹಣ ಇಲ್ಲದಂತಾಗಿದೆ, ಬಡ ಮತ್ತು ಮಾಧ್ಯಮ ವರ್ಗ ಬದುಕುವುದೇ ಕಷ್ಟವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ತಂದು,ಬೆಲೆ ಏರುವಂತೆ ಮಾಡಿದೆ ಆದ್ದರಿಂದ ಕೂಡಲೇ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಮತ್ತು ಮತ್ತು ಜನರ ಮೇಲೆ ಉಂಟಾಗುವ ಹೊರೆಯನ್ನು ಇಳಿಸಬೇಕು ಎಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಿಂಹ ಸೇನೆಯ ರಾಜ್ಯಾಧ್ಯಕ್ಷ ಎಂ ರವಿ ಪ್ರಸಾದ್, ಜಿಲ್ಲಾಧ್ಯಕ್ಷ ಎಸ್.ಎಂ.ಮಧುಸೂದನ್ ಪ್ರಮುಖರಾದ ನಯಾಜ್, ಗೋಪಿ, ಕಿರಣ್, ವೆಂಕಟೇಶ್, ರಘು ,ಅನಿಲ್ ಶರತ್, ಲಿಂಗರಾಜು, ಭರತ್, ಅಭಿಷೇಕ್, ನೂರುಲ್ಲಾ, ರಾಹುಲ್, ಶಿವಕುಮಾರ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post