ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಉಗರ ಪ್ರೇಮಿಯೊಬ್ಬರು ಕಾಳಿಂಗ ಸರ್ಪದ ಕಡಿತದಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿರುವ ಘಟನೆ ನಡೆದಿದೆ.
ಅತ್ಯಂತ ಅಪಾಯಕಾರಿಯಾದ ಕಾಳಿಂಗ ಸರ್ಪವನ್ನು ಹಿಡಿಯುವುದು ಎಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಇಂತಹ ಡೆಡ್ಲಿ ಹಾವನ್ನು ರಿಪ್ಪನ್’ಪೇಟೆ ಬಳಿಯ ಚಿಕ್ಕನೇನಿ ಗ್ರಾಮದ ಪ್ರಭಾಕರ್ ಹಿಡಿಯಲು ಯತ್ನಿಸುತ್ತಿದ್ದ ವೇಳೆ ಕಾಳಿಂಗ ಸರ್ಪ ವ್ಯಘ್ರಗೊಂಡು ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಆದರೆ ಅದೃಷ್ಟವಷಾತ್ ಸ್ವಲ್ಪದರಲ್ಲಿ ಅವರು ಪಾರಾಗಿದ್ದಾರೆ.
ಈಗಾಗಲೇ ನೂರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿರುವ ಪ್ರಭಾಕರ್ ಅವರಿಗೆ ಹಿಂದೆಂದೂ ಈ ರೀತಿಯ ಅನುಭವ ಆಗಿರಲಿಕ್ಕಿಲ್ಲ. ಅಂದಹಾಗೆ, ಕೋಡೂರು ಗ್ರಾಪಂ ವ್ಯಾಪ್ತಿಯ ಮತ್ತಿಘಟ್ಟ ಎಂಬಲ್ಲಿ ಗ್ರಾಮಸ್ಥರೊಬ್ಬರ ಮನೆಯ ಬಳಿ ಬಂದಿದ್ದ ಕಾಳಿಂಗ ಸರ್ಪ, ಹಿಡಿಯಲು ಹೋದಾಗ, ತಪ್ಪಿಸಿಕೊಂಡು, ತೋಟದ ನಡುವೆ ಇದ್ದ ಕೆರೆಗೆ ಈ ಹಾವು ಹೋಗಿದೆ. ಈ ವೇಳೆ ಕಾಳಿಂಗವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಹೋದಾಗ ಈ ಘಟನೆ ನಡೆದಿದ್ದು, ಸ್ನೇಕ್ ಪ್ರಭಾಕರ್ ಮೇಲೆಯೇ ದಾಳಿ ನಡೆಸಲು ಮುಂದಾಗಿತ್ತಿ ಈ ಕಾಳಿಂಗ. ಬಳಿಕ ಕಾಲಿಗೆ ಕಡಿಯಲು ಮುಂದಾಗಿದ್ದ ಸರ್ಪ, ಇನ್ನೇನು ಮುಖಕ್ಕೆ ಕಚ್ಚಬೇಕು ಎನ್ನುವಷ್ಟರಲ್ಲಿ ಕಾಳಿಂಗನ ತಲೆ ಹಿಡಿದುಕೊಂಡಿದ್ದಾರೆ ಸ್ನೇಕ್ ಪ್ರಭಾಕರ್. ಸ್ವಲ್ಪ ಮೈಮರೆತಿದ್ದರೂ ಈ ಹಾವಿನ ಕಡಿತ ಪ್ರಾಣಕ್ಕೆ ಅಪಾಯವಾಗುತ್ತಿತ್ತು.
ಇದನ್ನು ಗಮನಿಸಿದ ಅವರು ಹರಸಾಹಸ ಪಟ್ಟು ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು, ಸ್ಥಳೀಯರ ನೆರವಿನಿಂದ ಗೋಣಿಚೀಲದಲ್ಲಿ ತುಂಬಿ, ಹಾವನ್ನು ರಕ್ಷಿಸಿ ಸಮೀಪದ ಕಾಡಿಗೆ ಬಿಟ್ಟು, ಉರಗ ಪ್ರೇಮಿ ಸ್ನೇಕ್ ಪ್ರಭಾಕರ್ ನಿಟ್ಟುಸಿರು ಬಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post