ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ್ಞಾನವೆಂದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಷ್ಟೇ ಅಲ್ಲ ಅದನ್ನು ಎಲ್ಲ ರಂಗದಿಂದಲೂ ಪಡೆಯಬಹುದು. ಆಸಕ್ತಿ ಮತ್ತು ಆಳವಾದ ಅಧ್ಯಯನದಿಂದ ಹಾಗೂ ಸಾಧನೆಯಿಂದ ಜ್ಞಾನ ಸಂಪಾದನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ #DC Gurudutta Hegde ಹೇಳಿದ್ದಾರೆ.
ಅವರು ಇಂದು ಕುವೆಂಪು ರಂಗಮAದಿರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜ್ಞಾನದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅಪಾರ ಜ್ಞಾನವಂತರಿದ್ದಾರೆ. ಮಾದರಿ ಕೃಷಿಕರು, ಚಿಂತಕರು, ರಾಜಕಾರಣಿಗಳು ಮೊದಲಾದ ಸ್ಫೂರ್ತಿದಾಯಕ ವ್ಯಕ್ತಿಗಳಿದ್ದಾರೆ. ಆತ್ಮವಿಶ್ವಾಸದಿಂದ ಹಿಂಜರಿಕೆ ಪ್ರವೃತ್ತಿಯನ್ನು ಬಿಟ್ಟು ಚಿಕ್ಕ ಚಿಕ್ಕ ಗುರಿಗಳನ್ನು ಇಟ್ಟುಕೊಂಡು ಶ್ರದ್ಧೆಯಿಂದ ಮುನ್ನುಗ್ಗಿದಾಗ ಜ್ಞಾನವನ್ನು ಸಂಪಾದಿಸಬಹುದು. ಇಂದಿನ ಕಾರ್ಯಕ್ರಮದಲ್ಲಿ ಅನೇಕ ಸಂಪನ್ಮೂಲ ವ್ಯಕ್ತಿಗಳು ಈ ಬಗ್ಗೆ ನಿಮಗೆ ತಿಳುವಳಿಕೆ ನೀಡಲಿದ್ದು, ಸದುಪಯೋಗ ಪಡಿಸಿಕೊಳ್ಳಿ ಎಂದರು.
Also read: ಕ್ರೈಸ್ಟ್‌ಕಿಂಗ್: ಪ್ರೌಢಶಾಲಾ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಗಣ್ಯ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬನಿಗೂ ಜ್ಞಾನ ತುಂಬ ಮುಖ್ಯ. ಅನೇಕ ದೇಶಗಳು ಜ್ಞಾನವಂತರನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಆ ದೇಶ ಅಭಿವೃದ್ಧಿಯಾಗುತ್ತಿದೆ. ಯಾರ ಬಳಿ ಜ್ಞಾನವಿದೆಯೂ ಅವರಿಗೆ ಸನ್ಮಾನ ಗೌರವ ಎಲ್ಲವೂ ಸಿಗುತ್ತದೆ. ಯುವ ವಯಸ್ಸಿನಲ್ಲಿ ಗ್ರಹಣಶಕ್ತಿ ಜಾಸ್ತಿ ಇರುತ್ತದೆ. ಕೇವಲ ಪುಸ್ತಕದ ಓದು ಸಾಕಾಗುವುದಿಲ್ಲ. ಅಥವಾ ಜ್ಞಾನವೊಂದೇ ಸಾಕಾಗುವುದಿಲ್ಲ. ಅದರ ಜೊತೆಗೆ ಮೌಲ್ಯಗಳು ಇರಬೇಕು. ಮೊದಲು ಮಾನವನಾಗಬೇಕು, ಬೇರೆಯವರಿಗೆ ನೋವುನ್ನುಂಟು ಮಾಡುವ ಕೆಲಸ ಮಾಡಬಾರದು. ಮನಸ್ಸಿನಲ್ಲಿ ಅಂದುಕೊAಡಿದ್ದನ್ನು ಸಾಧಿಸುವ ಛಲವಿದ್ದರೆ ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ವಿಫುಲ ಅವಕಾಶವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗ ದಸರಾ ವಿಶಿಷ್ಟವಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಜ್ಞಾನದಸರಾವನ್ನು ಹಮ್ಮಿಕೊಂಡಿದ್ದೇವೆ. ಶಾರದೆ ಜ್ಞಾನ ದೇವತೆ ಹಾಗಾಗಿ ಇವತ್ತು ಶಾರದ ದೇವಿಯ ದಸರಾದಂದೆ ಜ್ಞಾನದಸರಾ ಹಮ್ಮಿಕೊಂಡಿದ್ದೇವೆ. ಮೌಲ್ಯಾಧಾರಿತ ಜೀವನ ಈ ದೇಶದ ಅಭಿವೃದ್ಧಿಗೆ ಪೂರಕ. ವ್ಯಕ್ತಿತ್ವ ನಿರ್ಮಾಣದ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ವಿವಿಧ ಸಾಧಕರಿಂದ ಉಣಬಡಿಸುವ ವಿಶೇಷ ಕಾರ್ಯಕ್ರಮವಾಗಿ ಜ್ಞಾನದಸರಾ ಹಮ್ಮಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ತರಬೇತುದಾರರಾದ ಸಾಧನ ಮಂಜುನಾಥ್, ಖ್ಯಾತ ಮನೋವೈದ್ಯರಾದ ಡಾ.ಪ್ರೀತಿ ಶಾನಭಾಗ್, ರಾಷ್ಟçಪ್ರಶಸ್ತಿ ಪುರಸ್ಕೃತ ರೈತರಾದ ದುರ್ಗಪ್ಪ ಅಂಗಡಿ, ಅಂತರಾಷ್ಟಿçÃಯ ತರಬೇತುದಾರರಾದ ವೆಂಕಟೇಶ್ ಮೈಸೂರು ಅವರಿಂದ ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಜ್ಞಾನವನ್ನು ಹಂಚಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಆಯುಕ್ತೆ ಕವಿತಾ ಯೋಗಪ್ಪನವರ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post