ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ್ಞಾನ ಪ್ರಸರಣ ಸಪ್ತಾಹ ನನಗೆ ತುಂಬಾ ಖುಷಿ ಕೊಟ್ಟಿದೆ ನಿಮ್ಮ ಅಚ್ಚುಕಟ್ಟಾದ ಏಳು ದಿನದ ವ್ಯವಸ್ಥೆಗಳು ಆನಂದವನ್ನುಂಟು ಮಾಡಿದೆ ಎಂದು ಮನತುಂಬಿ ಹಾರೈಸಿದವರು ಬಾಳಗಾರ್ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು. ಮುಂದುವರಿದು ಮಾತನಾಡುತ್ತಾ, ಇದೇ ರೀತಿ ಮುಂದೆ ಯಾವುದೇ ಜ್ಞಾನಿಗಳು ಶ್ರೀಗಳು ನಿಮ್ಮಲ್ಲಿಗೆ ಬಂದರೂ ಸಹ ಅವರಿಂದ ಉಪನ್ಯಾಸವನ್ನು ಶ್ರದ್ಧೆಯಿಂದ ಕೇಳುವುದರ ಜೊತೆಗೆ ಅವರಿಗೆ ಬೇಕಾದ ಸಹಾಯಗಳನ್ನು ಅಷ್ಟೋತ್ತರ ಬಳಗದವರು ಮಾಡುವುದರೊಂದಿಗೆ ಜ್ಞಾನಾರ್ಜನೆಯ ಪ್ರಯೋಜನವನ್ನು ಪಡೆಯಿರಿ ಎಂದು ನಿರ್ಮತ್ಸರದಿಂದ ಶ್ರೀಗಳು ನುಡಿದರು.
ಏಳು ದಿನಗಳಲ್ಲೂ ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಉಪನ್ಯಾಸವನ್ನು ಆಸಕ್ತಿಯಿಂದ ಶಾಂತತೆಯಿಂದ ಕೇಳಿದ ಶ್ರೋತ್ರಗಳ ಕುರಿತು ಬಾಳಗಾರ ಶ್ರೀ ಆರ್ಯ ಅಕ್ಶೋಭ್ಯತೀರ್ಥ ಮಠಾಧೀಶರಾದ ಶ್ರೀ ಅಕ್ಶೋಭ್ಯ ರಾಮಪ್ರಿಯ ತೀರ್ಥರು ಪ್ರಶಂಸೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೊಮ್ಮನಕಟ್ಟೆ ರಾಯರ ಮಠದ ಅಷ್ಟೋತ್ತರ ಬಳಗದ ಪ್ರಾರ್ಥನೆ ಮೇರೆಗೆ ಬಾಳಗಾರ ಶ್ರೀಗಳು ಸಂಸ್ಥಾನ ಪೂಜೆಮಾಡಿ ಭಿಕ್ಷೆ ಸ್ವೀಕರಿಸಿ. ಮಂಗಳೋತ್ಸವದ ಆಶೀರ್ವಚನ ನೀಡಿದರು.

ಅಷ್ಟೋತ್ತರ ಬಳಗದವರಾದ ಶೇಷಗಿರಿ,ಬಾಳಗಾರ್ ಗುರುರಾಜ, ಅಚ್ಚುತ್ ರಾವ್ ಸಪ್ತಾಹದ ಕುರಿತು ಮಾತನಾಡಿದರು. ಜಯಭೀಮ್ ಜೋಷಿ ಮತ್ತು ರಾಘವೇಂದ್ರ ಆನವಟ್ಟಿ ಏಳು ದಿನ ಕಾರ್ಯಕ್ರಮದಲ್ಲಿಯ ಸಾರಾಂಶವನ್ನು ವಾಚಿಸಿದರು. ರಾಯರ ಮಠದ ವ್ಯವಸ್ಥಾಪಕ ಧಿರೇಂದ್ರಾಚಾರ್ ಮತ್ತು ಸಿಬ್ಬಂದಿಯ ಅಚ್ಚು ಕಟ್ಟಾದ ವ್ಯವಸ್ಥೆ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು. ಅಧ್ಯಕ್ಷರಾದ ರಮೇಶ್ ಧ್ರುವ, ಗೋಪಾಲ ಕೃಷ್ಣ ಆನವಟ್ಟಿ, ನಾಗರಾಜ್ ಎ.ಪಿ., ರಾಘವೇಂದ್ರ ವೈದ್ಯ, ಮಧ್ವೇಶ್ ವೇದವ್ಯಾಸ, ಮುರುಳಿ, ಶಿವಕುಮಾರ್ ಪ್ರಹ್ಲಾದ್ ಪಾಟೀಲ್, ಭೀಮಣ್ಣ ಮುಂತಾದವರು ಉಪಸ್ಥಿತರಿದ್ದರು.
ಬಂದಂತಹ ಭಕ್ತರಿಗೆಲ್ಲಾ ಶ್ರೀಗಳು ಫಲ ಮತ್ತು ಸುವರ್ಣ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post