No Result
View All Result
Food & Hospitality Sector a Global Employment Hub: Celebrity Chef Satish Nagaraj
English Articles

Food & Hospitality Sector a Global Employment Hub: Celebrity Chef Satish Nagaraj

by ಕಲ್ಪ ನ್ಯೂಸ್
March 21, 2026
0

Kalpa Media House  |  Mysuru | Trained and experienced Indian chefs today have immense job opportunities across the globe, and...

Read moreDetails
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
  • Advertise With Us
  • Grievances
  • About Us
  • Contact Us
Sunday, March 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯ: ನ್ಯಾ. ಮಂಜುನಾಥ್ ನಾಯಕ್

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 9, 2023
in ಶಿವಮೊಗ್ಗ
0
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯ: ನ್ಯಾ. ಮಂಜುನಾಥ್ ನಾಯಕ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ |

ಕಾನೂನಿನ ಅಜ್ಞಾನದಿಂದ ಶೇ.75 ಪ್ರಕರಣಗಳು ದಾಖಲಾದರೆ ಶೇ.25 ದ್ವೇಷ ಮನೋಭಾವದಿಂದ ದಾಖಲಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು ಅತ್ಯವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಐಕ್ಯುಎಸಿ, ಜಿಲ್ಲಾ ನ್ಯಾಯವಾದಿಗಳ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಎಟಿನ್‍ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯ ನಾವು ಕಾನೂನನ್ನು ಪಾಲಿಸಬೇಕು ಕಾನೂನಿನ ಅರಿವು ಮತ್ತು ಜ್ಞಾನದಿಂದ ನಾವು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳಾದ ಜನ್ಮ ದಿನಾಂಕ, ಜಾತಿ, ಪ್ರವರ್ಗ ಇತರೆ ದಾಖಲಾತಿಗಳನ್ನು ಈಗಲೇ ಪರಿಶೀಲಿಸಿಕೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಆದ ನಂತರ ದಾಖಲಾತಿಗಳಲ್ಲಿ ದೋಷ ಕಂಡುಬಂದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಬೇಕಾಗುತ್ತದೆ. ಆದ್ದರಿಂದ ಈಗಲೇ ಪರಿಶೀಲಿಸಿಕೊಳ್ಳಬೇಕು. ವಾಹನ ಚಾಲನ ಪರವಾನಗಿ ಪಡೆದುಕೊಂಡು, ವಿಮೆಯನ್ನು ಮಾಡಿಸಿದ ನಂತರ ವಾಹನ ಚಾಲನೆ ಮಾಡಬೇಕು.

ಸಿವಿಲ್ ಪ್ರಕರಣಗಳನ್ನು ವರ್ಷಾನುಗಟ್ಟಲೆ ನಡೆಸಲಾಗುತ್ತದೆ, ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರಲ್ಲದವರಿಗೆ ಶಿಕ್ಷೆಯಾಗುತ್ತದೆಂಬ ಅಪವಾದ ನ್ಯಾಯಾಲಗಳಿಗಿದೆ. ಆದರೆ ಕಾನೂನು ರಚಿಸುವುದು ಜನಪ್ರತಿನಿಧಿಗಳು, ನ್ಯಾಯಾಲಯಗಳು ಅವನ್ನು ಜಾರಿಗೊಳಿಸುತ್ತವಷ್ಟೆ. ಆದ್ದರಿಂದ ಉತ್ತಮ ನಾಯಕರನ್ನು ಆರಿಸಬೇಕು.
ನ್ಯಾಯ ವಿಳಂಬಕ್ಕೆ ಮುಖ್ಯ ಕಾರಣ ನಮ್ಮ ಕಾನೂನು. ಬ್ರಿಟಿಷ್ ಕಾಲದ ಕಾನೂನುಗಳೇ ಇನ್ನೂ ಜಾರಿಯಲ್ಲಿವೆ. 1860ರ ಐಪಿಸಿ, 1872 ರ ಎವಿಡೆನ್ಸ್ ಕಾಯ್ದೆ ಇತರೆ. ನಮಗೆ ನಮ್ಮದೇ ನೆಲದ, ಸಂಸ್ಕøತಿಯ ಕಾನೂನು ಬೇಕು. ಪ್ರಸ್ತುತ ಸರ್ಕಾರ ಇದನ್ನು ಮನವರಿಕೆ ಮಾಡಿಕೊಂಡು ಹೊಸ ಕಾನೂನುಗಳನ್ನು ರಚಿಸಿ ಲೋಕಸಭೆಗೆ ಮಂಡಿಸಿದೆ. ಚರ್ಚೆ ನಂತರ ಜಾರಿಗೆ ಬರುವುದು ಎಂದರು.

1945 ರ ನ.9 ರಂದು ರಚನೆಯಾದ ಕಾನೂನು ಸೇವಾ ಸಮಿತಿ ಸ್ಮರಣಾರ್ಥ ನ.09 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಸಂಕಷ್ಟದಲ್ಲಿರುವವರು, ದುರ್ಬಲರು, ಅಗತ್ಯವಿರುವವರೆಲ್ಲ ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದನ್ ಸಿ.ಎನ್ ಮಾತನಾಡಿ, ವಾಸ್ತವಾಂಶಗಳ ಅಜ್ಞಾನಕ್ಕೆ ಕ್ಷಮೆ ಇದೆ. ಆದರೆ ಕಾನೂನಿನ ಕುರಿತಾದ ಅಜ್ಞಾನಕ್ಕೆ ಕ್ಷಮೆ ಇಲ್ಲ. ಆದ್ದರಿಂದ ಎಲ್ಲರೂ ಈ ನೆಲದ ಕಾನೂನನ್ನು ತಿಳಿದುಕೊಳ್ಳಬೇಕು. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಳ್ಳಿಗಳಲ್ಲಿ, ಸಮುದಾಯಗಳು, ಶಾಲಾ-ಕಾಲೇಜುಗಳಲ್ಲಿ ಅನೇಕ ಕಾನೂನು ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Also read: ದಿ.ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿ

ಭ್ರೂಣದಿಂದ ಹಿಡಿದು ಸಾವಿನ ನಂತರವೂ ನಮಗೆಲ್ಲ ಕಾನೂನುಗಳು ಅನ್ವಯವಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನನ್ನು ತಿಳಿದಿರಲೇಬೇಕು. ವಿದ್ಯಾರ್ಥಿಗಳಾದ ನೀವು ಕಾನೂನಿನ ಅರಿವನ್ನು ಪರಿಣಾಮಕಾರಿಯಾಗಿ ಸುತ್ತಮುತ್ತಲಿನವರಿಗೆ ತಿಳಿಸಬಹುದಾಗಿದ್ದು ಕಾನೂನಿನ ಅರಿವನ್ನು ಹರಡುವ ವೈರಸ್‍ಗಳಾಗಬೇಕು. ಕಾಯ್ದೆಗಳನ್ನು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಾಗಬೇಕು.
ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ನೀಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳಾ ಮತ್ತು ಮಕ್ಕಳು, ಭಿಕ್ಷುಕರು, ಅಂಗವೈಫಲ್ಯ ಹೊಂದಿರುವವರು, ಬಾಲ ಅಪರಾಧಿಗಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ವಾರ್ಷಿಕ ಆದಾಯ 3 ಲಕ್ಷಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ ನಾಗರೀಕರು ಉಚಿತವಾದ ಕಾನೂನಿನ ಸಲಹೆ ಮತ್ತು ನೆರವನ್ನು ಹಾಗೂ ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಗಳು ಮತ್ತು ಇನ್ನಿತರೆ ಗಲಭೆಗಳಿಂದ ನೊಂದ ಸಂತ್ರಸ್ಥರು ಪರಿಹಾರ ಪಡೆಯಲು ಅರ್ಹರಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಕಡೆಯಿಂದ ಮಾಹಿತಿಯನ್ನು ಪಡೆದು ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.

ಎಟಿಎನ್‍ಸಿಸಿ ಕಾಲೇಜಿನ ಪ್ರಾಂಶುಪಾಲರಾದ ಮಮತ ಪಿ ಆರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳನ್ನು ಸರಿಯಾಗಿರಿಸಿಕೊಳ್ಳಬೇಕು. ಎಲ್ಲಿ ಏನು ಮಾಡಬೇಕು ಮತ್ತು ಮಾಡಬಾರದೆಂಬ ಜ್ಞಾನವಿರಬೇಕು. ವಾಹನ ಚಾಲನ ಪರವಾನಗಿ, ವಿಮೆ, ಎಮಿಷನ್ ಪರೀಕ್ಷಾ ವರದಿ ಇಟ್ಟುಕೊಳ್ಳಬೇಕು. ಕಾನೂನನ್ನು ಎಂದಿಗೂ ಕೈಗೆ ತೆಗೆದುಕೊಳ್ಳಬಾರದು. ಎಲ್ಲರನ್ನೂ ಪ್ರೀತಿ, ಗೌರವದಿಂದ ಕಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದರು.

http://kalpa.news/wp-content/uploads/2023/05/VID-20230516-WA0005.mp4

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಜಗದೀಶ್, ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ ನಾಗರಾಜು, ಇಂಗ್ಲಿಷ್ ಉಪನ್ಯಾಸಕ ಅಂಜನ್, ವಾರ್ತಾ ಸಹಾಯಕರಾದ ಎಂ.ಟಿ. ಭಾಗ್ಯ  ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share200Tweet123Send
Previous Post

ದಿ.ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿ

Next Post

ಬರ ಪರಿಹಾರ ನೀಡದೆ ರೈತರಿಗೆ ಅನ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
1 ಸಾವಿರ ಕೋಟಿ ರೂ. ವೆಚ್ಚದ ಹೆದ್ದಾರಿ ಕಾಮಗಾರಿಗೆ ಪ್ರಧಾನಿಯಿಂದ ಫೆ.27ರಂದು ಶಂಕುಸ್ಥಾಪನೆ

ಬರ ಪರಿಹಾರ ನೀಡದೆ ರೈತರಿಗೆ ಅನ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 30-ಎಪ್ರಿಲ್ 3: ಮೈಸೂರು-ನಂಜನಗೂಡು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

March 21, 2026
A Blissful concert by the Divine Duo

A Blissful concert by the Divine Duo

March 21, 2026
ಗಮನಿಸಿ | ಈ 7 ದಿನಗಳು ಬೆಂಗಳೂರು-ಅಶೋಕಪುರಂ ಮೆಮು ರೈಲಿನ ಮಹತ್ವದ ಮಾಹಿತಿ

ಬಾಣಸವಾಡಿ ಮತ್ತು ತುಮಕೂರು ನಡುವೆ ಒಂದು ಟ್ರಿಪ್ ಮೆಮು ವಿಶೇಷ ರೈಲು ಸೇವೆ

March 21, 2026
ಮಾರ್ಚ್ 23-25 | ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂ ವಿನ್ಯಾಸ ರಾಷ್ಟ್ರೀಯ ಸಮ್ಮೇಳನ

ಮಾರ್ಚ್ 23-25 | ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂ ವಿನ್ಯಾಸ ರಾಷ್ಟ್ರೀಯ ಸಮ್ಮೇಳನ

March 21, 2026
ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ | ಸುತ್ತೂರು ಶ್ರೀ ಸಾನಿಧ್ಯ, ಸಮ್ಮೇಳನ ಸರ್ವಾಧ್ಯಕ್ಷರಾಗಿ ಬೆಕ್ಕಿನಕಲ್ಮಠ ಶ್ರೀಗಳು

ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ | ಸುತ್ತೂರು ಶ್ರೀ ಸಾನಿಧ್ಯ, ಸಮ್ಮೇಳನ ಸರ್ವಾಧ್ಯಕ್ಷರಾಗಿ ಬೆಕ್ಕಿನಕಲ್ಮಠ ಶ್ರೀಗಳು

March 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL