ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈಜ್ಞಾನಿಕವಾದ ಈ ಸಂಸ್ಕೃತ ಭಾಷೆಯ ಮಹತ್ವವನ್ನು ಭಾರತದಲ್ಲಿ ಎಲ್ಲರೂ ತಿಳಿದು ಇದನ್ನು ಇನ್ನೂ ಅಧಿಕವಾಗಿ ಅಧ್ಯಯನ ಮಾಡುವಂತೆ ಆಗಬೇಕು ಎಂದು ಪೇಸ್ ಸಂಸ್ಥೆಯ ಕಾರ್ಯದರ್ಶಿ, ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಎನ್. ವಿಶ್ವನಾಥಯ್ಯ ಹೇಳಿದರು.
ಪೇಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಕೃತದಲ್ಲಿ ವಿಜ್ಞಾನ ಎಂಬ ವಿಷಯದ ಕುರಿತಾದ ಅಂಶಗಳನ್ನು ಮಕ್ಕಳೇ ಪ್ರಸ್ತುತ ಪಡಿಸುವ ಮೂಲಕ ವಿಶೇಷವಾಗಿ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.
ದ್ವಿತೀಯ ಪಿಯು ವಿದ್ಯಾರ್ಥಿಗಳಾದ ನಂದನ್ ಕೌಡಿಕಿ, ನಚಿಕೇತ್, ಸನಕ ಕೆ. ಎಂ, ಅಭಿನವ್ ಶರ್ಮಾ, ಚನ್ನರಾಜ್, ಶ್ರಿಯಾ, ಅಮೃತ ಹಾಗೂ ಕೇದಾರ್ ಇವರುಗಳು ಅಗಾಧವಾದ ಜ್ಞಾನರಾಶಿಯನ್ನು ಹೊಂದಿದ ಸಂಸ್ಕೃತ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವುದರ ಜೊತೆಗೆ ಬಹು ಹಿಂದೆಯೇ ಸಂಸ್ಕೃತ ಗ್ರಂಥಗಳಲ್ಲಿ ಹೇಳಿದ ವಿಜ್ಞಾನದ ಸಂಗತಿಗಳಾದ ವೇದಗಣಿತ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ಹಾಗೂ ಆಯುರ್ವೇದ ವಿಜ್ಞಾನದ ಸಂಗತಿಗಳನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳೇ ಪ್ರಸ್ತುತಪಡಿಸುವ ಮೂಲಕ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾದ ಅಂಶಗಳನ್ನು ತಿಳಿಸಿಕೊಟ್ಟರು.
Also read: ಬಿಎಸ್‌ವೈ ಕುಟುಂಬದ ಭೂ ಹಗರಣಗಳನ್ನೂ ತನಿಖೆಗೆ ಒಳಪಡಿಸಲಿ: ಆಯನೂರು ಮಂಜುನಾಥ್ ಆಗ್ರಹ
ಬಹು ಹಿಂದೆಯೇ ನಮ್ಮ ಪೂರ್ವಜರು ವಿಜ್ಞಾನದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ. ದಶಾವತಾರದ ವಿಷಯದಲ್ಲಿ ಜೀವರಾಶಿಯ ಬೆಳವಣಿಗೆಯ ಸಂಗತಿಯಾಗಿರಬಹುದು, ಪೈಥಾಗೋರಸ್ ನ ಪ್ರಮೇಯವಾಗಿರಬಹುದು, ರಸಾಯನಶಾಸ್ತ್ರದ ಪಾದರಸದ ಕುರಿತಾಗಿರಬಹುದು, ಲೋಹ ಶುದ್ಧೀಕರಣ, ವೇದಗಣಿತ, ಭೌತಶಾಸ್ತ್ರದ ಬೆಳಕಿನ ವೇಗವೇ ಮೊದಲಾದ ಸಂಗತಿಗಳನ್ನು ಬಹು ವಿಸ್ತಾರವಾಗಿ ತಿಳಿಸುವಲ್ಲಿ ಯಶಸ್ವಿಯಾದರು. ವಿಜ್ಞಾನದ ವಿದ್ಯಾರ್ಥಿಗಳಾದ ನಾವು ಇವುಗಳಿಂದ ಪ್ರೇರೇಪಿತರಾಗಿ ಜರ್ಮನಿಯೇ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸ್ಕೃತಕ್ಕೆ ಮಹತ್ವವನ್ನು ನೀಡುತ್ತಿದ್ದಾರಲ್ಲ ಅದರಂತೆ ನಾವು ಕೂಡ ಸಂಸ್ಕೃತಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕುವಂತೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕಿಯಾದ ಡಾ. ಮೈತ್ರೇಯಿ ಹೆಚ್. ಎಲ್ , ಕೇಶವಮೂರ್ತಿ, ಬಸವರಾಜು ಕೆ.ಆರ್. ಪ್ರಭಂಜನ ಉಪಸ್ಥಿತರಿದ್ದರು.
ಸೈಯದ್ ಮೂಸಾ ಸ್ವಾಗತಿಸಿದರು, ಕುಮಾರಿ ಶರಣ್ಯ ಪ್ರಾರ್ಥಿಸಿದರು, ಸೂರ್ಯಕುಮಾರ್ ವಂದಿಸಿದರು, ರಿಷಿ ಹಾಗೂ ಫಲ್ಗುಣಿ ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ನಾಯಕ್, ಮುಂಗಾರು, ಅಮೂಲ್ಯ ಬಾಯರ್ ಹಾಗೂ ರಕ್ಷಾ ರಾವ್ ಸಂಸ್ಕೃತ ಗೀತೆಗಳ ಗಾಯನ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post