ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೂರ್ವಾಸ ಕ್ಷೇತ್ರವಾದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿಯವರ ಬ್ರಹ್ಮ ರಥೋತ್ಸವ ಫೆ.27ರ ನಾಳೆ ನಡೆಯಲಿದೆ.
ಪ್ರತಿ ವರ್ಷ ಮಾಘ ಶುದ್ಧ ಹುಣ್ಣಿಯಂದು ಶ್ರೀಸ್ವಾಮಿಯವರ ಬ್ರಹ್ಮ ರಥೋತ್ಸವ ನಡೆಯಲಿದೆ. ಅದರಂತೆ ನಾಳೆ ಬೆಳಗ್ಗೆ 10:30 ಕ್ಕೆ ಕೋಟೆ ಶ್ರೀ ಆಂಜನೇಯ ದೇವಾಲಯದಿಂದ ಕೋಟೆ ರಸ್ತೆ , ಎಸ್‌ಪಿಎಂ ರಸ್ತೆ ಮಾರ್ಗವಾಗಿ ಗಾಂಧಿಬಜಾರ್’ನಿಂದ ಶಿವಪ್ಪನಾಯಕ ವೃತ್ತದವರಗೆ ಸಾಗುವ ರಥೋತ್ಸವ ನಂತರ ಅದೇ ಮಾರ್ಗವಾಗಿ ಹಿಂತಿರುಗಿ ಮದ್ಯಾಹ್ನ 3 ಘಂಟೆಗೆ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದ ಮುಂಭಾಗ ಸಂಪನ್ನಗೊಳ್ಳಲಿದೆ.
ರಥ ಬರುವ ಎಲ್ಲಾ ಮಾರ್ಗಗಳ ಅಡ್ಡರಸ್ತೆಗಳಲ್ಲಿ ಮತ್ತು ಪ್ರಮುಖ ದೇವಾಲಯಗಳ ಬಳಿ ಸಾರ್ವಜನಿಕರಿಗೆ ಫಲ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದೆ. ರಥ ಎಳೆಯುವ ಭಕ್ತರಿಗೆ ನೀರು ಮಜ್ಜಿಗೆ ಪಾನಕದ ವ್ಯವಸ್ಥೆ ಮಾಡಲಾಗಿದ್ದು, ಹೆಂಗಸರು ಮಕ್ಕಳು ಹಾಗೂ ಹಿರಿಯರಿಗೆ ಸೇವೆಗೆ ಮೊದಲು ಅವಕಾಶ ಕಲ್ಪಿಸಲಾಗುತ್ತಿದೆ.
ಮಾರಿಕಾಂಬ ದೇವಾಲಯದ ಪಕ್ಕದ ಎರಡೂ ರಸ್ತೆ ಮತ್ತು ಕೋಟೆ ಅಂಚೆ ರಸ್ತೆ ಕಚೇರಿಯವರೆಗೆ ರಥೋತ್ಸವದ ದಿನದ ಬೆಳಗ್ಗೆ 8 ರಿಂದ 10 ರವರೆಗೆ ವಾಹನ ಸಂಚಾರ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಲಾಗಿದ್ದು, ಮಾರಿಕಾಂಬ ದೇವಸ್ಥಾನದಿಂದ ಕೋಟೆ ಯುವಕರ ಸಂಘ ನೀರಿನ ಟ್ಯಾಂಕ್‌ವರೆಗೆ ಯಾವುದೇ ಅಂಗಡಿ ಹಾಕದಂತೆ ಕೋರಲಾಗಿದೆ.
ಮಧ್ಯಾಹ್ನ 12 ಗಂಟೆಗೆ ದೇವಾಲಯದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post