ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ Kote Marikamba Fair ಇಂದು ಅದ್ದೂರಿ ಚಾಲನೆ ದೊರೆತಿದ್ದು, ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರು ಕುಟುಂಬ ಸಹಿತರಾಗಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಗಾಂಧಿ ಬಜಾರ್’ನಲ್ಲಿ ಪ್ರತಿಷ್ಠಾಪಿಸಲಾಗಿರುವ ಮಾರಿಕಾಂಬಾ ದೇವಿಯ ತವರುಮನೆಗೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಅವರು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು.

Also read: ಪರೀಕ್ಷೆ ವೇಳೆ ಪ್ರಧಾನಿ ಮೋದಿ ಭೇಟಿ | ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ | ಎಂಪಿ ರಾಘವೇಂದ್ರ
ಆನಂತರ, ಭಕ್ತರು ನಿಂತಿದ್ದ ಸರತಿ ಸಾಲುಗಳ ಪಕ್ಕದಲ್ಲಿ ತೆರಳಿದ ಸಂಸದರು ಭಕ್ತರ ಕುಶಲೋಪರಿ ವಿಚಾರಿಸಿ, ಜಾತ್ರೆಯ ಶುಭ ಕೋರಿದರು.
ತಮಗೆ ಪರಿಚಯವಿರುವ ಹಲವು ಮಂದಿಯನ್ನು ಅತ್ಯಂತ ಆತ್ಮೀಯವಾಗಿ ಮಾತನಾಡಿಸಿದ ಸಂಸದರು, ಸರಳತೆ ಮರೆದಿದ್ದು ವಿಶೇಷವಾಗಿತ್ತು.

ಇನ್ನು, ಜಾತ್ರೆಗೆ ಭೇಟಿ ನೀಡಿದ್ದ ಸಂಸದ ರಾಘವೇಂದ್ರ ಅವರೊಂದಿಗೆ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಹಲವು ಮಹಿಳೆಯರು, ಯುವಕ-ಯುವತಿಯರು ಸಂಸದರನ್ನು ಆತ್ಮೀಯವಾಗಿ ಮಾತನಾಡಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಇನ್ನು, ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದ್ದು, ನಗರದಾದ್ಯಂತ ಸಂಭ್ರಮ ಮನೆ ಮಾಡಿದೆ. ಸಂಪ್ರದಾಯದAತೆ ಬಿಬಿ ರಸ್ತೆಯ ಬ್ರಾಹ್ಮಣ ನಾಡಿಗ್ ಕುಟುಂಬದವರ ಮೊದಲಿಗೆ ದೇವಿಯ ತವರು ಮನೆ ಗಾಂಧಿಬಜಾರ್’ನಲ್ಲಿರುವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜಾತ್ರೆಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಮಾರಿಕಾಂಬೆಯ ಪರದೆಯನ್ನು ಸರಿಸಲಾಯಿತು. ಈ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post