ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲೂಕಿನ ಕೋಟೆಗಂಗೂರು ಗ್ರಾಮ ಪಂಚಾಯಿತಿಯ ದೇವಕಾತಿಕೊಪ್ಪದಲ್ಲಿ ತೆರವಾಗಿದ್ದ ಗ್ರಾಪಂ ಸದಸ್ಯರ ಖಾಲಿ ಹುದ್ದೆಗೆ ಮೊನ್ನೆ ನಡೆದಿದ್ದ ಉಪಚುನಾವಣೆಯಲ್ಲಿನ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಶಿವಮೊಗ್ಗ ತಾಲೂಕ ಕಚೇರಿಯಲ್ಲಿ ನಡೆದಿದ್ದು, ಅಭ್ಯರ್ಥಿ ದೇವಕಾತಿಕೊಪ್ಪದ ಡಿಎಲ್ ರಮೇಶ್ ಭಾರಿ ಬಹುಮತದ ಅಂತರದಿಂದ ಜಯಗಳಿಸಿದ್ದಾರೆ.
ಒಟ್ಟು ಚಲಾವಣೆಯಾದ 738 ಮತಗಳಲ್ಲಿ 15 ಮತಗಳು ತಿರಸ್ಕೃತಗೊಂಡಿದ್ದು, 608 ಮತಗಳನ್ನು ಡಿಎಲ್ ರಮೇಶ್ ಪಡೆದಿದ್ದಾರೆ. ಪ್ರತಿಸ್ಪರ್ಧಿ ಸುರೇಶ್ ಅವರಿಗೆ 115 ಮತಗಳು ಸಿಕ್ಕಿದ್ದು, ಪರಭವಗೊಂಡಿದ್ದಾರೆ.
Also read: ನೀವು ಪ್ಯಾನ್ ಕಾರ್ಡ್ ಹೊಂದಿದ್ದೀರಾ? ಹಾಗಾದ್ರೆ ಈ ಮಹತ್ವದ ಸುದ್ದಿಯನ್ನು ತಪ್ಪದೇ ಓದಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post