ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬೆಂಗಳೂರಿನಿಂದ ಕುಪ್ಪಳ್ಳಿಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ತೀರ್ಥಹಳ್ಳಿ ತಾಲೂಕು ಮಾಳೂರು ಬಳಿ ಇಂದು ಮುಂಜಾನೆ ಪಲ್ಟಿ ಹೊಡೆದಿರುವ ಘಟನೆ ನಡೆದಿದೆ.
ಘಟನೆ ವಿವರ:
ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಸಾರಿಗೆ ಬಸ್ ಇಂದು ಬೆಳಿಗ್ಗೆ 5 ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣ ತಲುಪಿದೆ. ನಂತರ 5:15ರ ಸುಮಾರಿಗೆ ಹೊರಟು 6 ಗಂಟೆ ಸಮಯದಲ್ಲಿ ಮಾಳೂರಿನ ಬಳಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ.
ದಟ್ಟ ಮಂಜು ಕವಿದಿದ್ದ ಪರಿಣಾಮ ಚಾಲಕನಿಗೆ ರಸ್ತೆ ತಿರುವು ಕಾಣದೆ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಬಸ್ ಪಲ್ಟಿ ಆಗಿದೆ ಎಂದು ಶಿವಮೊಗ್ಗ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post