ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಹಾಗೂ ದೇಶದಾದ್ಯಂತ ಮಾಧ್ಯಮದ ಕ್ಷೇತ್ರದಲ್ಲಿ ಸದ್ದು ಮಾಡಿರುವ ಕೃತಕ ಆ್ಯಂಕರ್ #AIAnchor ಮಲೆನಾಡಿಗೂ ಲಗ್ಗೆಯಿಟ್ಟಿದ್ದು, ಮೊಟ್ಟಮೊದಲ ಬಾರಿಗೆ ಇಂತಹ ಒಂದು ಪ್ರಯತ್ನಕ್ಕೆ ಕುವೆಂಪು ವಿಶ್ವವಿದ್ಯಾಲಯ #KuvempuUniversity ಕೈಹಾಕಿದೆ.
ಹೌದು… ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಡೆಸುತ್ತಿರುವ ಸಹ್ಯಾದ್ರಿ ಯೂಟ್ಯೂಬ್ ಚಾನಲ್ ಇಂತಹ ಒಂದು ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದೆ.
ಆರ್ಟಿಫಿಷಿಯಲ್ ಇಂಟಲಿಜೆನ್ಸ್(ಕೃತಕ ಬುದ್ಧಿಮತ್ತೆ) #ArtificialIntelligence ನಿರೂಪಕಿಯನ್ನು ಸೃಷ್ಠಿಸಿದ್ದು, ಇದಕ್ಕೆ ಎಐ ಗೀತಾ ಎಂದು ಹೆಸರಿಸಲಾಗಿದೆ. ಪ್ರಮುಖವಾಗಿ ಶಿವಮೊಗ್ಗ #Shivamogga ಜಿಲ್ಲೆಯಲ್ಲಿ ಇದು ಮೊಟ್ಟಮೊದಲ ಪ್ರಯತ್ನವಾಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಸತ್ಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸಂಪಾದಕರಾದ ಕೆ.ಟಿ. ಸಿಂಧು, ಎಂ. ಮನೋಜ್, ಕೆ. ಶ್ವೇತಾ, ಎಸ್. ಭವಾನಿ, ಆರ್. ಸುಶ್ಮಿತಾ, ಬಿ.ಆರ್. ಪೂಜಾ ಹಾಗೂ ಅಭಿಶೇಕ್ ಅವರು ಈ ಕೃತಕ ನಿರೂಪಕಿಯ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ತಾಂತ್ರಿಕ ವಿಭಾಗದಲ್ಲಿ ಜಿ.ಪಿ. ವಿನಯ್, ಎನ್.ಜೆ. ಸಚಿನ್, ಎಸ್. ಸುನಿಲ್ ಹಾಗೂ ದೊರೆ ಅರಸ್ ಅವರುಗಳು ಸಹಕಾರ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















