ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ -19ನಿಂದ ಮರಣ ಹೊಂದಿದವರ ಮೃತ ದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಿಂದ ಸಾಗಿಸಲು ಖಾಸಗಿ ಆಂಬ್ಯುಲೆನ್ಸ್ ವಾಹನ ಮಾಲೀಕರು ಸಾರ್ವಜನಿಕರಿಂದ ಮಿತಿ ಇಲ್ಲದೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು ಸಾರ್ವಜನಿಕರಿಗೆ ಇದು ದೊಡ್ಡ ಮುಳುವಾಗಿತ್ತು.
ಇದನ್ನು ಗಮನಿಸಿದ ಜಿಲ್ಲಾಡಳಿತ, ಜಿಲ್ಲಾ ರಕ್ಷಾಣಾಧಿಕಾರಿಗಳ ನೇತೃತ್ವದಲ್ಲಿ ಇಂದಿನಿಂದ ಆಂಬ್ಯುಲೆನ್ಸ್ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಕ್ಕೆ KSSIDC ಯ ಉಪಾಧ್ಯಕ್ಷ ಎಸ್. ದತ್ತಾತ್ರಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಗಮನಿಸಿದರು.
ಇಂದಿನಿಂದ ಸಾರ್ವಜನಿಕರು ಕಡಿಮೆ ದರದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಬಹುದಾಗಿದ್ದು, ಆಂಬ್ಯುಲೆನ್ಸ್ ಸಹಾಯವಾಣಿ ಕೇಂದ್ರವು 2 ಪಾಳಿಯಲ್ಲಿ ನಡೆಯಲಿದ್ದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಲಭ್ಯವಿರುತ್ತದೆ. ಹಾಗೂ ಮೃತ ದೇಹವನ್ನು ಸಾಗಿಸಲು ಭರಿಸುವ ಹಣವನ್ನು ಈ ಕೆಳಕಂಡಂತೆ ನಿಗದಿ ಮಾಡಲಾಗಿದೆ.
ಮಹಾನಗರ ಪಾಲಿಕೆ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಾಗಿಸಲು ಎಲ್ಲಾ ತರಹದ ಮಾನನಗಳಿಗೆ 1000ರೂ. (ವಾಹನ ಚಾಲಕ, ಪಿ ಪಿ ಇ ಕಿಟ್ ಹಾಗೂ ಇತರೆ ಸೇವೆಗಳು ಸೇರಿ)
ಮಹಾನಗರ ಪಾಲಿಕೆ, ಶಿವಮೊಗ್ಗ ನಗರ ವ್ಯಾಪ್ತಿ ಹೊರತುಪಡಿಸಿ ಇನ್ನಿತರೇ ಸ್ಥಳಗಳಿಗೆ ಸಾಗಿಸಲು
ಟೆಂಪೋ ಟ್ರಾವೆಲ್, ಟಾಟಾ ವಿಂಗರ್ ಆಂಬ್ಯುಲೆನ್ಸ್ ಕಿ.ಮೀ ಗೆ 16ರೂ. ಚಾಲಕರಿಗೆ 300ರೂ.
ಓಮಿನಿ ಆಂಬ್ಯುಲೆನ್ಸ್ ಕಿ.ಮೀ ಗೆ 11ರೂ. ಚಾಲಕರಿಗೆ 300ರೂ.
ಕ್ರೂಜರ್ ಆಂಬ್ಯುಲೆನ್ಸ್ ಕಿ.ಮೀ ಗೆ 13ರೂ. ಚಾಲಕರಿಗೆ 300ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post