ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ. 4ರಂದು ಬಸವನಬಾಗೇವಾಡಿಯಲ್ಲಿ ಸಾವಿರಾರು ಸ್ವಾಮೀಜಿಗಳ ನೇತೃತ್ವದಲ್ಲಿ ‘ಕ್ರಾಂತಿವೀರ ಬ್ರಿಗೇಡ್’ಗೆ #Krantiveera Briged ಚಾಲನೆ ನೀಡಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಾಂತಿವೀರ ಬ್ರಿಗೇಡ್ ಎನ್ನುವುದು ಪಕ್ಷಾತೀತವಾಗಿದೆ. ಹಿಂದೂ ಸಮಾಜದ ಒಗ್ಗೂಡುವಿಕೆಗಾಗಿ ಇದನ್ನು ಸ್ಥಾಪಿಸಲಾಗುತ್ತಿದೆ. ಬಸವಣ್ಣ ಹುಟ್ಟಿದ ನಾಡಾದ ಬಸವನ ಬಾಗೇವಾಡಿಯಿಂದಲೇ ಇದಕ್ಕೆ ಚಾಲನೆ ಸಿಗಲಿದೆ. ಫೆ. 4ರಂದು ಇದರ ಉದ್ಘಾಟನೆಯಾಗಲಿದೆ. ಉತ್ತರ ಕರ್ನಾಟಕದಿಂದ 1008 ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಶಿವಮೊಗ್ಗದಿಂದಲೂ ಕೂಡ ಸುಮಾರು 250ಕ್ಕೂ ಅಧಿಕ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅತಿಹೆಚ್ಚಿನ ಮಠಗಳು ಎಲ್ಲ ಸಮಾಜದ ಮಠಗಳು ಕೂಡ ಬಹಳ ದುಸ್ಥಿತಿಯಲ್ಲಿವೆ. ಗುಡಿಸಿಲಿನಲ್ಲಿ ಮಠಗಳಿವೆ. ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿದ್ದಾರೆ. ಅದ್ಯಾವುದನ್ನೂ ಗಮನಿಸದೆ ಸಮಾಜವನ್ನು ಜಾಗೃತಿ ಮಾಡುವುದೇ ನಮ್ಮ ಉದ್ದೇಶ. ಅವರೆಲ್ಲರೂ ಹಿಂದೂ ಧರ್ಮದ ಉಳಿವಿಗಾಗಿ ತಪಸ್ಸಿನ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಆದರೆ ಅಲ್ಲಿ ಸಜ್ಜನರು ವಾಸಿಸುವ ಮನೆಯಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದೆ ಒಂದು ಟೈಮ್ ಬಾಂಡ್ ಇಟ್ಟುಕೊಂಡು, ಒಂದು ಅಥವಾ ಎರಡು ತಿಂಗಳಿನಲ್ಲಿ ಬಡವರಿಗೆ ನೀಡುವ ವ್ಯವಸ್ಥೆ ಮಾಡಿ. ಇಲ್ಲದಿದ್ದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.

ಇದೂವರೆಗೂ ಚುನಾವಣೆ ನಡೆಸಿಕೊಂಡು ಬರುತ್ತಿರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ರಾಜ್ಯದ ರಾಜಕಾರಣವೇ ಕುಲಗೆಟ್ಟು ಹೋಗಿದೆ. ನಮ್ಮ ಪಕ್ಷ ಹೀಗಾಗಿದೆಯಲಾ ಎಂದು ತುಂಬಾ ನೋವಿದೆ. ಎಷ್ಟೋ ಜನರ ನೋವು ಬಲಿದಾನ ಆಗಿದೆ ಪಕ್ಷ ಕಟ್ಟುವಲ್ಲಿ. ಅವರೆಲ್ಲರ ತಪಸ್ಸು ಅವರೆಲ್ಲರ ಬಲಿದಾನದ ಪಕ್ಷ ಕೆಲವು ರಾಜಕಾರಣಿಗಳ ಕೈಗೆ ಸಿಕ್ಕಿದೆ. ಸಿದ್ಧಾಂತದ ರಾಜಕಾರಣ ಮತ್ತೆ ಬರುತ್ತದೆ ಎಂಬ ನಂಬಿಕೆ ಇದೆ. ಪಕ್ಷ ಶುದ್ಧೀಕರಣ ಆಗಬೇಕಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯದವರು ಬರುತ್ತಿದ್ದಾರೆ. ಬಿಜೆಪಿ ಶುದ್ಧೀಕರಣ ಆಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶAಕರ್, ಇ. ವಿಶ್ವಾಸ್, ಕಾಚನಕಟ್ಟೆ ಸತ್ಯನಾರಾಯಣ್, ಬಾಲು, ಟಾಕ್ರಾನಾಯ್ಕ್, ಮಂಜು, ಕುಬೇರ, ಜಾಧವ್, ಶಿವಾಜಿ, ಮೋಹನ್, ಕುಬೇರಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post