ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮೋ ಬ್ರಿಗೇಡ್ 2.0, ಅಜೇಯ ಸಂಸ್ಕøತಿ ಬಳಗದ ವತಿಯಿಂದ ಆ. 28, 29, 30ರಂದು ಚಕ್ರವರ್ತಿ ಸೂಲಿಬೆಲೆಯವರ Chakravarthy Sulebele ಉಪನ್ಯಾಸ ಕಾರ್ಯಕ್ರಮವನ್ನು ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಜೇಯ ಸಂಸ್ಕøತಿ ಬಳಗದ ಅಧ್ಯಕ್ಷ ರಾಮಾಚಾರ್ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ರಾರಾಜಿಸುತ್ತಿದ್ದು, ಸಶಕ್ತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸೆಟೆದು ನಿಂತಿದೆ ಆದರೆ ಈ ಪ್ರಗತಿಯನ್ನುಸಹಿಸದ ಒಂದು ದೊಡ್ಡ ಬುದ್ಧಿಜೀವಿಗಳ ವರ್ಗ ಭಾರತದ ಅಖಂಡತೆಗೆ ಮಾರಕವಾಗುವ ದೇಶಭಂಜನೆಯ ಕೆಲಸಗಳಲ್ಲಿ ನಿರತವಾಗಿದ್ದು, ಜನಾಂಗೀಯ ದ್ವೇಷ ಹೆಚ್ಚಿಸುತ್ತಾ ಮತಾಂತರದ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಾ,ನೈಜ ಇತಿಹಾಸವನ್ನು ತಿರುಚುವ ಸುಳ್ಳು ವಿವಾದ ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಯುವ ಬ್ರಿಗೇಡ್ ಪ್ರಮುಖರಾದ ವಿನಯ್ ಮಾತನಾಡಿ, `ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ’ ಎಂಬ ಶೀರ್ಷಿಕೆಯಡಿ ನಮ್ಮ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಭಾರತ ಭಂಜನೆಯ ಷಡ್ಯಂತ್ರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.
ಸಾಯಂಕಾಲ 6-30ರಿಂದ 8ರ ವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಅಂತರಾಷ್ಟ್ರೀಯ ಖ್ಯಾತಿ ಲೇಖಕ ರಾಜೀವ್ ಮಲ್ಹೋತ್ರಾರವರ ಪ್ರಸಿದ್ಧ ಕೃತಿಗಳಾದ ಬ್ರೇಕಿಂಗ್ ಇಂಡಿಯಾ ಹಾಗೂ ಸ್ನೇಕ್ಸ್ ಇಂದ ಗಂಗಾ (ಗಂಗೆಯಲ್ಲಿ ವಿಷಸರ್ಪಗಳು) ಗ್ರಂಥಗಳಲ್ಲಿ ಆಧಾರ ಸಹಿತವಾಗಿ ವಿವರಿಸಿದ್ದು,ಭಾರತದ ಅಸ್ಮಿತೆ ಪ್ರೀತಿಸುವ ಪ್ರತಿಯೊಬ್ಬರೂ ಈ ಕುರಿತು ಜಾಗೃತಿಗೊಳ್ಳಬೇಕಾದ ಅವಶ್ಯಕತೆ ಇದ್ದು ಈ ಕಾರಣಕ್ಕಾಗಿ ಈ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗೇಶ್, ಅಚ್ಯುತ್‍ರಾವ್, ಚೇತನ್, ಹರೀಶ್‍ಕಾರ್ಣಿಕ್, ಕುಮಾರ ಶಾಸ್ತ್ರಿ ರಾಜೇಶ್ ಶಾಸ್ತ್ರಿ, ಪುರೋಹಿತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post