ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020)ಯಲ್ಲಿ ಗೊಂದಲ ಮೂಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಲವು ಬೆಂಬಲಿಗರಾದ ಎಡಪಂಥಿಯರು ಕಾರಣ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಪೀಪಲ್ಸ್ ಫೋರಂ ಫಾರಂ ಕರ್ನಾಟಕ ಎಜ್ಯುಕೇಶನ್ ವೇದಿಕೆಯ ಮುಖಂಡ ಡಿ.ಎಸ್. ಅರುಣ್ D S Arun ನೇರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್ಇಪಿ ಎಂಬುವುದು ಹಲವು ಚರ್ಚೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ, ಪೋಷಕರ, ಸಾರ್ವಜನಿಕರ ಮತ್ತು ಚಿಂತಕರ, ಶಿಕ್ಷಣ ತಜ್ಞರ ಅಭಿಪ್ರಾಯದೊಂದಿಗೆ ಚರ್ಚಿಸಿ ಒಮ್ಮತದಿಂದ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತಂದಿದೆ. ಆದರೆ, ರಾಜ್ಯಸರ್ಕಾರ ಕೇವಲ ಬಿಜೆಪಿ ಸರ್ಕಾರ ತಂದ ಯೋಜನೆ ಎಂಬ ಕಾರಣಕ್ಕಾಗಿ ಇದನ್ನು ರದ್ದುಮಾಡಲು ಹೊರಟಿದೆ. ಈ ಗೊಂದಲಕ್ಕೆ ಸಿದ್ದರಾಮಯ್ಯನವರ ಬೆಂಬಲಿಗರು ಎನ್ನಲಾದ ಕೆಲವು ಎಡಪಂಥಿಯ ಚಿಂತಕರು ಕಾರಣರಾಗಿದ್ದಾರೆ. ಆ ಚಿಂತಕರ ಮಾತು ಕೇಳಿ ಮುಖ್ಯಮಂತ್ರಿಗಳು ಮತ್ತು ರಾಜ್ಯಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಕವಾಗಿರುವ ಎನ್ಇಪಿನ್ನು ರದ್ದುಮಾಡಲು ಹೊರಟಿದೆ ಎಂದು ಆರೋಪಿಸಿದರು.
ಎನ್ಇಪಿ ಎಂಬುವುದು ಹೊಸದೇನಲ್ಲ, ಇದು 1968ರಲ್ಲಿಯೇ ಜಾರಿಗೆ ತರಲಾಗಿತ್ತು. ನಂತರ 1986ರಲ್ಲಿ ಅನುಮೋದನೆಗೊಂಡಿತ್ತು. 1992ರಲ್ಲಿ ಜಾರಿಗೆ ಬಂದಿತ್ತು. ಇದೆಲ್ಲವೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅಳವಡಿಸಿದ್ದು, ಆದರೆ, 2020ರಲ್ಲಿ ಮೋದಿಜಿಯವರು ತಂದ ಯೋಜನೆ ಎಂಬ ಕಾರಣಕ್ಕಾಗಿ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
Also read: ಡಾಕ್ಟರ್ ಟೈಮ್ ಸರಿಯಾಗಿ ಬರಲ್ಲ, ಬಂದರೂ ಒಪಿಡಿಯಲ್ಲಿ ರೆಸ್ಟ್ ಮಾಡ್ತಾರೆ: ಪ್ರತಿಭಟನೆ
ರಾಜ್ಯ ಸರ್ಕಾರ ಇದನ್ನು ವಿರೋಧಿಸುವುದಕ್ಕೆ ಕಾರಣವೇ ಇಲ್ಲ. ಕನ್ನಡ ಮತ್ತು ಕನ್ನಡ ಸಂಸ್ಕøತಿಯ ಪರಿಚಯ ಮಕ್ಕಳಿಗೆ ಎನ್ಇಪಿ ಯಿಂದ ಸಾಧ್ಯವಿಲ್ಲ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ ? ಕನ್ನಡದ ಮಕ್ಕಳಿಗೆ ಯಾವ ರೀತಿಯ ಅನ್ಯಾಯವಾಗುತ್ತದೆ ಎಂಬುವುದನ್ನು ಇವರೇ ಹೇಳಬೇಕು. ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಹೊಂದಿರುವ ಕನ್ನಡದವರೇ ಶಿಕ್ಷಣ ತಜ್ಞರು ಇರುವಾಗಿ ಹೊರಗಿನವರನ್ನು ಸರ್ಕಾರ ಗುರುತಿಸಿ ತಂದಿರುವುದು, ಅವರ ಮಾತನ್ನು ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ನಮ್ಮ ವಿದ್ಯಾರ್ಥಿಗಳನ್ನು ನಾವು ಇಂದು ಜಾಗತಿಕ ಮಟ್ಟದಲ್ಲಿ ರೂಪಿಸಬೇಕಾಗಿದೆ. ಯಾವುದು ಹಳೆಯ ಕಾಲದ ಶಿಕ್ಷಣ ಪದ್ಧತಿ ಈಗ ನಮಗೆ ಬೇಕಿಲ್ಲ. ರಾಜ್ಯ ಶಿಕ್ಷಣ ಸಮಿತಿಯು ನೀಡುವ ಅಳವಡಿಕೆ ಕೇವಲ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರವೇ ಸೀಮಿತವಾಗುವುದರಿಂದ ಉಳ್ಳವರಿಗೆ ಎನ್ಇಪಿ ಶಿಕ್ಷಣವಾದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ಇಪಿ ಎನ್ನುವ ಎರಡು ವರ್ಗದ ಸೃಷ್ಠಿಯೇ ರಾಜ್ಯ ಸರ್ಕಾರದ ಈ ನಿರ್ಧಾರ ಕಾರಣವಾಗುತ್ತದೆ ಎಂದರು.
ಎನ್ಇಪಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದರೆ, ಬಹುತೇಕ ಎಲ್ಲಾ ಖಾಸಗಿ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿಬಿಎಸ್ಇಗೆ ಬದಲಾವಣೆಯಾಗುತ್ತಾರೆ. ಆದರೆ, ಬಡ ಮಕ್ಕಳು ಈ ಸಿಬಿಎಸ್ಇಗೆ ಹೋಗುವುದಾದರು ಹೇಗೆ, ಶಿಕ್ಷಣ ಕಲಿಯುವುದಾದರೂ ಹೇಗೆ ? ರಾಜ್ಯ ಸರ್ಕಾರ ಬಡವರ ಮಕ್ಕಳು ಹೆಚ್ಚು ಓದಬಾರದು, ಶಿಕ್ಷಣ ಕಲಿಯಬಾರದು ಎಂದುಕೊಂಡತ್ತೆ ಇದೆ. ಬಡ ವಿದ್ಯಾರ್ಥಿಗಳ ಜ್ಞಾನ ದಾಹಕ್ಕೂ ಇದು, ಕಂಠಕವಾಗುತ್ತದೆ ಎಂದರು.
ರಾಷ್ಟ್ರಕ್ಕೊಂದೆ ಶಿಕ್ಷಣ ನೀತಿ ಇರಬೇಕು ಎಂಬುವುದು ಕಾಂಗ್ರೆಸ್ ಪಕ್ಷದ ನಾಯಕರಾದ ದಿ. ರಾಜೀವ್ ಗಾಂಧಿಯವರು ಹೇಳಿದ್ದರು. ಆದರೆ ಅದೇ ಪಕ್ಷದಲ್ಲಿ ಇರುವ ರಾಜ್ಯ ನಾಯಕರು ರಾಜಕಾರಣ ಮಾಡುವ ಬರದಲ್ಲಿ ಅದನ್ನು ಮರೇತಿದ್ದಾರೆ. ಸ್ವಾತಂತ್ರ್ಯ ನಂತರ ರೂಢಿಸಿದ ಮೊದಲ ಎರಡು ಶಿಕ್ಷಣ ನೀತಿಗಳನ್ನು ಯಾವ ರಾಜ್ಯ ಸರ್ಕಾರಗಳು ತೆಗೆದುಹಾಕುವ ನಿರ್ಧಶನವಿಲ್ಲ. ಶಿಕ್ಷಣವಲಯವನ್ನು ರಾಜಕೀಯ ದಿಂದ ಹೊರಗಿಡುವ ಜವಬ್ದಾರಿಯನ್ನು ಮುಂದುವರೆಸಿ ಎಂಬುವುದು ಪೀಪಲ್ಸ್ ಫೋರಂ ಫಾರಂ ಕರ್ನಾಟಕ ಎಜುಕೇಶನ್ದ್ದು ಎಂದರು.
ಆದ್ದರಿಂದ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಎನ್ಇಪಿಯನ್ನು ರದ್ದುಗೊಳಿಸಬಾರದು ಮತ್ತು ಮುಂದುವರಿಸಬೇಕು. ಹಾಗಾಗಿ ನಾವು ರಾಜ್ಯಾದಾದ್ಯಂತ ಸಹಿ ಸಂಗ್ರಹ ಅಭಿಯಾನದ ಮೂಲಕ ಜನಭಿಪ್ರಾಯವನ್ನು ಮೂಡಿಸುತ್ತಿದ್ದೇವೆ. ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ನಮ್ಮ ವೇದಿಕೆ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಸುಮಾರು 10ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಇದರಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದಾರೆ. ಆದ್ದರಿಂದ ಎನ್ಇಪಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎ.ಜೆ. ರಾಮಚಂದ್ರ, ಡಾ.ರವಿಕಿರಣ್, ಪ್ರವೀಣ್, ರಾಮಲಿಂಗಪ್ಪ, ಚಂದ್ರಶೇಖರ್, ಧರ್ಮಪ್ರಸಾದ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post