ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ಜನರು ತಮ್ಮ ದೇಶದ ಮೇಲೆ ಸಾರ್ವಭೌಮತ್ವವನ್ನು ಪಡೆದ ದಿನವನ್ನು ಸ್ಮರಿಸುವ ಸುದಿನ, ನಮ್ಮ ದೇಶವು ಸ್ವಾತಂತ್ರ್ಯವನ್ನು ಸುಮ್ಮನೇ ಪಡೆದಿಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೂರಾರು ಹೋರಾಟಗಾರರ ಬಲಿದಾನದದ ಪ್ರತಿಫಲವಾಗಿದೆ. ಭಾರತದ ಎಲ್ಲಾ ಜನರು ಧರ್ಮ, ಜಾತಿ, ಭಾಷೆ & ಪ್ರದೇಶಗಳ ಭೇದವಿಲ್ಲದೆ ಒಗ್ಗೂಡಿ ರಾಷ್ಟ್ರೀಯ ಏಕತೆಯನ್ನು ನಾವೆಲ್ಲರೂ ಮೂಡಿಸೋಣ ಎಂದು ಪಿಇಎಸ್ ಐಟಿಎಮ್ ಪ್ರಾಂಶುಪಾಲ ಡಾ. ಸ್ವಾಮಿ ಹೇಳಿದರು.
ಪಿಇಎಸ್ ಟ್ರಸ್ಟ್ ವತಿಯಿಂದ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ #Independence Day ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಪಿಇಎಸ್ ಪಬ್ಲಿಕ್ ಶಾಲೆಯ ಆವರಣವು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧಕರನ್ನು ಹಾಗೂ ಎಲ್ಲಾ ಕ್ಷೇತ್ರಗಳಿಗೆ ವಿಶೇಷ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ನಮ್ಮೆಲ್ಲರ ಹೆಮ್ಮಯಾಗಿದೆ ಎಂದು ಹೇಳಿದರು.
ಈ ಸ್ವಾತಂತ್ರ್ಯ ಸಂಭ್ರಮೋತ್ಸವದಲ್ಲಿ 2024-25ನೇ ಸಾಲಿನ ಸಿ.ಬಿ.ಎಸ್.ಸಿ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಿಇಎಸ್ ಸಮೂಹ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಗಳಾದ ಡಾ. ನಾಗರಾಜ ಆರ್ ಅವರು ಪಾರಿತೋಷಕ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಜೀವನದಲ್ಲಿ ಮತ್ತಷ್ಟು ಸಾಧನೆಗಳಿಸಿ ಎಂದು ಪ್ರೇರೇಪಿಸಿದರು
ಈ ಕಾರ್ಯಕ್ರಮದಲ್ಲಿ ಪಿಇಎಸ್ ಸಮೂಹ ಸಂಸ್ಥೆಯ ವತಿಯಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಪಿಇಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸಾರುವ ಹಾಡು ಮತ್ತು ನೃತ್ಯವನ್ನು, ಪಿಇಎಸ್ ಪಿಯುಸಿ ಹಾಗೂ ಐಟಿಎಮ್ ವಿದ್ಯಾರ್ಥಿಗಳು, ಐಎಎಮ್‌ಎಸ್ ಮತ್ತು ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅತ್ಯಂತ ವಿಜ್ರಂಭಣೆಯಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ಡಾ. ನಾಗರಾಜ. ಆರ್, ಸಮೂಹ ಸಂಸ್ಥೆಯ ಎಲ್ಲಾ ವಿಭಾಗದ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಧ್ವಜಾರೋಹಣ ಕಾರ್ಯಕ್ರಮವನ್ನು ಡಾ. ಸೆಂಧಿಲ್ ದೈಹಿಕ ಶಿಕ್ಷಣ ನಿರ್ದೇಶಕರು, ದೈಹಿಕ ಶಿಕ್ಷಕರುಗಳಾದ ಸಂದೀಪ ಕುಮಾರ್, ಕಿರಣ್‌ಕುಮಾರ, ಸಂಜಯ್, ನಾಗರಾಜ ಮತ್ತು ಶ್ರೀರಂಜಿನಿ ಅವರುಗಳು ನಡೆಸಿಕೊಟ್ಟರು. ಕುಮಾರಿ ಜ್ಞಾನ ಸ್ವಾಗತಿಸಿದರು, ಕುಮಾರಿ ಅನವಿತ, ಶ್ರೇಯ ಬಿ, ಪೂರ್ವಿಕ ಮತ್ತು ದೀಕ್ಷಾ ನಿರೂಪಿಸಿ, ಕುಮಾರಿ ಚೈತ್ರ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post