ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಸರ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲಾ ಕೈಜೋಡಿಸಿ ಕೆಲಸ ಮಾಡೋಣ ಎಂದು ಶಾಸಕ ಚೆನ್ನಬಸಪ್ಪ MLA Channabasappa ಸಂದೇಶ ನೀಡಿದರು.
ಸರ್ಕಾರ ಹಾಗೂ ಜನರ ಪಾಲ್ಗೊಳ್ಳುವಿಕೆಯಲ್ಲಿ ವಿಶೇಷ ಸಸಿಗಳನ್ನು ನೆಡುವುದರ ಮೂಲಕ ಅಶ್ವತ್ಥ್ ನಗರ ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ಹಸಿರೀಕರಣ ನಡೆದುಕೊಂಡು ಬರುತ್ತಿದ್ದು, ವಿಶ್ವ ಪರಿಸರ ದಿನದ ಅಂಗವಾಗಿ ನೂತನ ಶಾಸಕ ಚನ್ನಬಸಪ್ಪ (ಚೆನ್ನಿ) ಅವರಿಂದ ಸಸಿಯನ್ನು ನೆಡಿಸಲಾಯಿತು.

ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ಜನರ ಸಹಯೋಗದಿಂದ ನಡೆಯುತ್ತಿರುವ ಹಸಿರೀಕರಣ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ನಗರದ ಮಾಜಿ ಶಾಸಕರಾದ ಈಶ್ವರಪ್ಪ ನವರು ನೀಡಿದ ಅನುದಾನಗಳ ಹಾಗೂ ವಿಶೇಷ ಖಾಳಜಿ ಬಗ್ಗೆ ನೆನೆಯುತ್ತಾ, ಎಂ ಎಲ್ ಸಿ ಗಳಾದ ರುದ್ರೇಗೌಡರು, ಅರುಣ್ ಹಾಗೂ ಎಂಪಿ ಬಿ ವೈ ರಾಘವೇಂದ್ರ, ಮಾಜಿ ಸೂಡಾ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ನಾಗರಾಜ್ ರವರುಗಳು ನೀಡಿದ ನೀಡಿದ ಅನುದಾನಗಳ ಬಗ್ಗೆ , ವಾರ್ಡ್ ನಂಬರ್ 2 ರ ಉತ್ಸಾಹಿ ಯುವ ಕಾರ್ಪೊರೇಟರ್ ಇ. ವಿಶ್ವಾಸ್ ಮಾಹಿತಿ ನೀಡಿದರು.

ಪರಿವರ್ತನಾ ಬಳಗದ ಅಧ್ಯಕ್ಷರಾದ ಹರ್ಷ ಕಾಮತ್ ಮತ್ತು ಸದಸ್ಯರು, ಹಾಗೂ ಅಶ್ವತ್ಥ್ ನಗರ ಹಾಗೂ ಎಲ್ ಬಿ ಎಸ್ ನಗರದ ನಿವಾಸಿ ಸಂಘಗಳ ಪ್ರಮುಖ ರಾದ ರಂಗಪ್ಪ , ಪಂಚಣ್ಣ ಹಾಗೂ ನಿವಾಸಿಗಳು ನೂತನ ಶಾಸಕರಿಗೆ ಸನ್ಮಾನಿಸಿದರು.
ಹಿರಿಯ ವಕೀಲರಾದ ಎಂ.ಆರ್. ಸತ್ಯನಾರಾಯಣ್ ರವರು, ಪಾಳು ಬಿದ್ದ ಜಾಗ ಸುಂದರ ಉದ್ಯಾನವಾಗಿ ಮೂಡಿಬರುತ್ತಿರುವುದಕ್ಕೆ ಕಾರ್ಪೊರೇಟರ್ ವಿಶ್ವಾಸ್ ರವರಿಗೆ ಅಭಿನಂದಿಸುತ್ತಾ, ನೂತನ ಶಾಸಕರಾದ ಚೆನ್ನಿ ರವರಿಗೆ ಅವರ ಅವಧಿಯಲ್ಲಿ ಒಳ್ಳೆಯ ಕೆಲಸವಾಗಲಿ ಎಂದು ಆಶಿಸುತ್ತಾ ರಾಜಕೀಯ ಜೀವನದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ವಲಯದ ಆರ್ ಎಫ್ ಓ ರಾಘವೇಂದ್ರ ರವರು ಉಪಸ್ಥಿತರಿದ್ದರು. ತಮ್ಮೆಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಇಡೀ ಕಾರ್ಯಕ್ರಮ ವನ್ನು ಜೆ ಸಿ ಐ ಶಿವಮೊಗ್ಗ ವಿವೇಕ್ ನ ಸದಸ್ಯರಾದ ಕಾಟನ್ ಜಗದೀಶ್, ಜೆಸಿ ಭಾರತಿ, ಜೆಸಿ ಸುರೇಶ್ ಎಂ ಆರ್, ಜೆ ಸಿ ದೀಪು ಹಾಗೂ ಇನ್ನಿತರ ಸದಸ್ಯರು ನಡೆಸಿಕ್ಕೊಟ್ಟರು.










Discussion about this post