ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ್ಞಾನಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು ಇಂದು ಅಗತ್ಯ ಮತ್ತು ಅನಿವಾರ್ಯ. ಆದರೆ ಕನ್ನಡವನ್ನು ಪ್ರೀತಿಸುವುದು ನಮ್ಮ ಹೃದಯ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಅತಿ ಅಗತ್ಯ ಎಂದು ಹೊಸನಗರದ ಕುವೆಂಪು ವಿದ್ಯಾಲಯದ ಸಂಸ್ಥಾಪಕರೂ,ನಗರದ ಪದವಿ ಪೂರ್ವ ಕಾಲೇಜಿನ ನಿರ್ವತ್ತ ಪ್ರಾಂಶುಪಾಲರು ಆದ ಡಾ.ಸೊನಲೆ ಶ್ರೀನಿವಾಸ್ ತಿಳಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯು ಅತ್ಯಂತ ಸಮೃದ್ಧ ಹಾಗೂ ಹಿರಿಯ ಲಿಪಿಯನ್ನು ಹೊಂದಿದೆ. ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ಈ ನೆಲದ ಸಂಸ್ಕೃತಿ ಎಂದು ತಿಳಿಸಿದರು.
ನಮ್ಮ ಮಾತೃಭಾಷೆಯಲ್ಲಿ ನಾವು ಮಾತನಾಡಿದಾಗ ಕೇವಲ ವಿಷಯವನ್ನು ತಿಳಿಸುವುದಿಲ್ಲ. ಅದರೊಂದಿಗೆ ನಿಜವಾದ ಭಾವವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದರು.

Also read: ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿಯ ಬಲ | 100 ಕೋಟಿ ಹಣ ಉಳಿತಾಯ: ಸಚಿವ ದಿನೇಶ್ ಗುಂಡೂರಾವ್
ಡಾ.ರಾಜೇಂದ್ರ ಚೆನ್ನಿ ಸವರನ್ನು ಇತ್ತೀಚೆಗೆ ಕನ್ನಡ ಭಾಷಾ ಭಾರತಿಯ ಗೌರವ ಶ್ರೀ ಪ್ರಶಸ್ತಿ ಪ್ರಕಟವಾಗಿರುವುದಕ್ಕಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವು ಬೆಳಗ್ಗೆ ಕನ್ನಡ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಕನ್ನಡ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಡಾ. ರಾಜೇಂದ್ರ ಚೆನ್ನಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕರಾದ ಕವಿತಾ ಸುಧೀಂದ್ರ, ಡಾ. ಮಧು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಂಧ್ಯಾ ನಿರೂಪಿಸಿ, ಪ್ರಜ್ಞಾ ದೀಪ್ತಿ ಮತ್ತು ತಂಡದವರು ಪ್ರಾರ್ಥಿಸಿದರು. ಕುಮಾರಿ ಸುಖಿತ ಸ್ವಾಗತಿಸಿ, ಅಜಯ್ ವಂದಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ಸ್ಪೂರ್ತಿ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post