ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ನಗರದಲ್ಲಿರುವ ಕೇಸರಿ ಘಡ್ ಫೌಂಡೇಷನ್ ನವದೆಹಲಿಯ ಸುಪ್ರಸಿದ್ಧ ಲುಕ್‍ಮಾನ್ ಐಎಎಸ್‍ನೊಂದಿಗೆ ಸಂಯೋಜನೆಗೊಂಡಿದ್ದು ಯುಪಿಎಸ್‍ಸಿ ನಡೆಸುವ ಐಎಎಸ್, ಐಪಿಎಸ್, ಐಎಫ್‍ಎಸ್, ಐಎಫ್‍ಒಎಸ್ ಇನ್ನಿತರ ಪರೀಕ್ಷೆಗಳಿಗೆ ತಯಾರಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ ಎಂದು ಫೌಂಡೇಷನ್‍ನ ಅಧ್ಯಕ್ಷ ಡಾ. ಸುರೇಶ್ ಬಾಬು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.14ರಂದು ಪರೀಕ್ಷೆಯ ಅಧಿಕೃತ ಪ್ರಕಟಣೆಯು ಹೊರಡಲಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.3 ಕೊನೆಯ ದಿನವಾಗಿದೆ. ಪೂರ್ವಭಾವಿ ಪರೀಕ್ಷೆ ಮೇ.24ರಂದು ಹಾಗೂ ಮುಖ್ಯ ಪರೀಕ್ಷೆ ಆ.21ರಿಂದ ಆಂಭವಾಗಲಿದೆ. ಐಎಫ್‍ಒಎಸ್ ಮುಖ್ಯ ಪರೀಕ್ಷೆ ನವೆಂಬರ್‍ನಲ್ಲಿ ನಡೆಯಲಿದೆ ಎಂದರು.
ಲುಕ್‍ಮಾನ್ ಐಎಎಸ್ ವಿದ್ಯಾರ್ಥಿಗಳು ದೇಶಾದ್ಯಂತ ಇದ್ದು, ಪರೀಕ್ಷೆ ತರಬೇತಿ ಪಡೆಯುತ್ತಿದ್ದಾರೆ. ಪರೀಕ್ಷೆಗೆ ತಯಾರಾಗಲು ಅನುಕರಣೀಯ ಹತ್ತು ಮಾದರಿ ನಡೆಸಲಾಗುತ್ತಿದೆ. ಹಾಗೂ ಪ್ರತೀ ಪರೀಕ್ಷೆಗೆ ಸುಮಾರು 1500 ರಿಂದ 2000 ರೂ. ಪರೀಕ್ಷಾ ಶುಲ್ಕವಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಉಳಿದವರಿಗೆ 2 ವರ್ಷಕ್ಕೆ 84 ಸಾವಿರ ರೂ. ಶುಲ್ಕವಿದೆ. ಶಿವಮೊಗ್ಗದಲ್ಲಿ 12 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಇವರಲ್ಲಿ ಮೂವರು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.
ನಮ್ಮ ಫೌಂಡೇಷನ್ ವತಿಯಿಂದ ಅಖಿಲ ಭಾರತ ಪ್ರಿಲಿಮ್ಸ್ ಮಾಕ್ ಟೆಸ್ಟ್ ಅನ್ನು ಜನವರಿಯಿಂದ ಮೇ ತಿಂಗಳವರೆಗೆ ಯುಪಿಎಸ್‍ಸಿ ಮಾದರಿಯಲ್ಲಿ ಸಂಪೂರ್ಣ ಉಚಿತವಾಗಿ ನಡೆಸಲಾಗುವುದು. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದು, ಅವರಿಗೆ ಪೂರ್ವಭಾವಿ ಪರೀಕ್ಷೆ ಅನುಕೂಲವಾಗಲೆಂದು ಉಚಿತವಾಗಿ ಮಾಕ್ ಟೆಸ್ಟ್ ಅನ್ನು ಪ್ರತೀ ತಿಂಗಳ 2 ಮತ್ತು 4ನೇ ಭಾನುವಾರದಂದು ಸಂಪೂರ್ಣವಾಗಿ ಉಚಿತವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಯಿಸಲು ಮೊ.78293 72100ಗೆ ಕರೆ ಮಾಡಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫೌಂಡೇಷನ್ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಗೋಪೇನಹಳ್ಳಿ ಮಲ್ಲೇಶಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















