ಶಿವಮೊಗ್ಗ: ನಮ್ಮ ತಂದೆ ವಕೀಲರಾಗಿ ತಮ್ಮ ರಾಜಕೀಯ ಜೀವನವನ್ನು ಇಲ್ಲಿಂದಲೇ ಪ್ರಾರಂಭ ಮಾಡಿ, ರಾಜಕೀಯ ಉತ್ತುಟಗಕ್ಕೆ ಏರಿದರು ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ತಮ್ಮ ತಂದೆಯನ್ನು ನೆನೆದು ಭಾವುಕರಾದರು.
ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ನಿನ್ನೆ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ, ವಕೀಲರ ಸಂಘದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ತಮ್ಮ ತಂದೆಯನ್ನು ನೆನೆದು ಭಾವುಕರಾದರು. ತಮ್ಮ ತಂದೆಗೆ ನೀಡಿದ ಸಹಕಾರವನ್ನು ತಮಗೂ ನೀಡುವಂತೆ ಅವರು ಕೋರಿದರು.
ವಕೀಲರ ಸಂಘದ ಅಧ್ಯಕ್ಷ ಜಿ. ಮಧು ಹಾಗು ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ವಕೀಲರನ್ನು ಭೇಟಿಯಾಗಿ ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ತಮ್ಮನ್ನು ಬೆಂಬಲಸುವಟತೇ ಮಧು ಬಂಗಾರಪ್ಪನವರು ಮನವಿ ಮಾಡಿದರು.
ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಜಿ. ಮಧು ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಹಿಂದೆ ಬಂಗಾರಪ್ಪನವರು ಸಂಘದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನೆನೆದು ಹಾಗೂ ಮಧುಬಂಗಾರಪ್ಪನವರು ಕಳೆದ ಬಾರಿ ನೀಡಿದ ಸಹಕಾರದಿಂದ ಸಂಘದ ಸದಸ್ಯರಿಗೆ ಆಗಿರುವ ಅನುಕೂಲವನ್ನು ನೆನೆದು ಅಭಿನಂದನೆ ಸಲ್ಲಿಸಿದರು.
ಕುರುಬ ಜಾತಿ ಸಮಾವೇಶ
ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ಕುರುಬ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಬಂಡೇಪ್ಪ್ ಕಾಶಂಪುರ್, ಎಂಎಲ್’ಸಿ ಪ್ರಸನ್ನ ಕುಮಾರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಕುರುಬ ಜನಾಂಗದವರು ಮೈತ್ರಿಕೂಟದ ಅಭ್ಯರ್ಥಿ ಬೆಂಬಲಿಸಲು ಕುರುಬ ಸಮುದಾಯದ ಮುಖಂಡರು ಕರೆ ನೀಡಿದರು. ಮಧುಬಂಗಾರಪ್ಪ ಅವರಿಗೆ ಕುರಿಮರಿಯನ್ನು ಉಡುಗೊರೆಯಾಗಿ ಕುರುಬ ಸಮುದಾಯದ ನೀಡಿದರು.
ಬಂಜಾರ ಸಮಾಜದೊಂದಿಗೆ ಸಭೆ
ನಿನ್ನೆ ಬಂಜಾರ ಸಮುದಾಯದ ಮುಖಂಡರೊಂದಿಗೆ ಮಧು ಬಂಗಾರಪ್ಪ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಶಾಸಕಿಯಾದ ಶಾರದಾ ಪೂರ್ಯಾ ನಾಯ್ಕ್ ಇದ್ದರು.
ಉಪ್ಪಾರ ಸಮಾಜದೊಂದಿಗೆ ಸಭೆ
ನಿನ್ನೆ ಮಧ್ಯಾಹ್ನ ಲಗಾನ್ ಕಲ್ಯಾಣ ಮಂದಿರದಲ್ಲಿ ಉಪ್ಪಾರ ಸಮಾಜದ ಸ್ನೇಹ ಮಿಲನ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಧು ಬಂಗಾರಪ್ಪ ಮಾತನಾಡಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಂಎಲ್’ಸಿ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಹಾಗೂ ಉಪ್ಪಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Discussion about this post