No Result
View All Result
Le Méridien Dehradun in the Foothills of the Himalayas, Inviting Guests to Slow Down and Savour the Good Life
English Articles

Le Méridien Dehradun in the Foothills of the Himalayas, Inviting Guests to Slow Down and Savour the Good Life

by ಕಲ್ಪ ನ್ಯೂಸ್
February 25, 2026
0

Kalpa Media House  |  Bengaluru  | Le Méridien Hotels & Resorts, part of Marriott Bonvoy’s global portfolio of over 30...

Read moreDetails
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
Samruddhi Kundapura: The Rising Pole Star of Coastal Talent

Samruddhi Kundapura: The Rising Pole Star of Coastal Talent

February 23, 2026
  • Advertise With Us
  • Grievances
  • About Us
  • Contact Us
Wednesday, February 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ನಗರ ನಿರ್ವಹಣೆ: ಚಿದಾನಂದ ವಠಾರೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 30, 2021
in ಶಿವಮೊಗ್ಗ
0
ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ನಗರ ನಿರ್ವಹಣೆ: ಚಿದಾನಂದ ವಠಾರೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಜನ ಜೀವನ ಗುಣಮಟ್ಟ ವೃದ್ದಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಸ್ಮಾರ್ಟ್‍ಸಿಟಿ ಯೋಜನೆಯಡಿ ಉತ್ಕೃಷ್ಟ ತಂತ್ರಜ್ಞಾನ ಬಳಸಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್(ಐಸಿಸಿಸಿ) ಮೂಲಕ ನಗರದ ನಿರ್ವಹಣೆ ಮಾಡುವ ಐಸಿಸಿಸಿ ಕಾರ್ಯ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜಾರಿಯಾಗಲಿದೆ ಎಂದು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಠಾರೆ ಭರವಸೆ ವ್ಯಕ್ತಪಡಿಸಿದರು.

ಭಾರತ ಸ್ವಾತಂತ್ರ್ಯ ಹೊಂದಿದ 75 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಇಂದು ನಗರದ ಸ್ಮಾರ್ಟ್ ಸಿಟಿ ಕಚೇರಿ ಐಸಿಸಿಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂಯೋಜಿತ ಆಜ್ಞಾ ನಿಯಂತ್ರಣ ಕೇಂದ್ರ (ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್)ದ ಬಗ್ಗೆ ಸಂವಹನ ಮತ್ತು ದೃಷ್ಟಿಕೋನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

9 ಅಪ್ಲಿಕೇಷನ್‍ಗಳು :
ಐಸಿಸಿಸಿ ವ್ಯವಸ್ಥೆಯಡಿ ಪ್ರಸ್ತುತ ನಗರದ 15 ವಾರ್ಡುಗಳನ್ನು ಒಳಗೊಂಡಂತೆ 9 ಅಪ್ಲಿಕೇಷನ್‍ಗಳಾದ ಇಂಟೆಲಿಜೆಂಟ್ ಪಬ್ಲಿಕ್ ಟ್ರಾನ್ಸ್‍ಪೋರ್ಟ್ ಸಿಸ್ಟಂ, ಎಮೆರ್ಜನ್ಸಿ ರೆಸ್ಪಾನ್ಸ್ ಸಿಸ್ಟಂ, ಇಂಟೆಲಿಜೆಂಟ್ ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‍ಮೆಂಟ್ ಸಿಸ್ಟಂ, ಸ್ಮಾರ್ಟ್ ವಾಟರ್, ಸ್ಮಾರ್ಟ್ ಪಾರ್ಕಿಂಗ್, ಸ್ಮಾರ್ಟ್ ಪೋಲ್ಸ್, ಪೊಲೀಸ್ ಕಿಯಾಸ್ಕ್ ಮತ್ತು ವಿಡಿಯೋ ಮಾನಿಟರಿಂಗ್ ಸಿಸ್ಟಂಗಳನ್ನು ಜಾರಿಗೆ ತರುವ ಕಾರ್ಯ ಪ್ರಗತಿಯಲ್ಲಿದೆ.

ಟ್ರಾಫಿಕ್ ನಿರ್ವಹಣೆ :    
ಇಂಟೆಲಿಜೆನ್ಸ್ ಟ್ರಾಫಿಕ್ ನಿರ್ವಹಣೆ ಯೋಜನೆಯಡಿ ಪೊಲೀಸ್ ಇಲಾಖೆ ಸೂಚಿಸಿರುವ ನಗರದ 12 ಜಂಕ್ಷನ್‍ಗಳಲ್ಲಿ ಇಂಟೆಲಿಜೆನ್ಸ್ ಟ್ರಾಫಿಕ್ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿದ್ದು ನಗರದ 9 ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಲೇಸರ್ ಪ್ರೊಫೈಲಿಂಗ್ ಮತ್ತು ರಾಡಾರ್ ಆಧಾರಿತ ಸೆನ್ಸರ್ ಮಾನಿಟರಿಂಗ್ ಟ್ರಾಫಿಕ್ ಬಳಕೆ ಮಾಡಿ ವೇಗ ಪರೀಕ್ಷೆ, ಟ್ರಾಫಿಕ್ ಸಾಂದ್ರತೆ, ವಾಹನಗಳ ವರ್ಗೀಕರಣ ಮತ್ತು ಇ-ಚಾನಲ್ ಸಿಸ್ಟಂ, ರೆಡ್‍ಲೈಟ್ ಉಲ್ಲಂಘನೆ, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಎಲ್ಲ ವ್ಯವಸ್ಥೆಗಳನ್ನು ಐಸಿಸಿಸಿ ಮೂಲಕ ನಿರ್ವಹಿಸಲಾಗುವುದು.

ಸ್ಮಾರ್ಟ್ ಪಾರ್ಕಿಂಗ್:  
ನಗರದಲ್ಲಿ 13 ಕಡೆ ಆಫ್‍ಸ್ಟ್ರೀಟ್ ಮತ್ತು 10 ಕಡೆಗಳಲ್ಲಿ ಆನ್‍ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಆಫ್‍ಸ್ಟ್ರೀಟ್ ಪಾರ್ಕಿಂಗ್ ವ್ಯಸ್ಥೆಯಲ್ಲಿ ಬೂಮ್ ಬ್ಯಾರಿಯರ್‍ಗಳನ್ನು ಅಳವಡಿಸಲಾಗಿದೆ. ಲೇನ್ ಮಾರ್ಕಿಂಗ್ ಮಾಡಲಾಗಿದೆ. ಸಾರ್ವಜನಿಕರು ಸ್ಮಾರ್ಟ್ ಸಿಟಿಯಿಂದ ಅಭಿವೃದ್ದಿಪಡಿಸುತ್ತಿರುವ ‘ಒನ್ ಸಿಟಿ ಒನ್ ಆ್ಯಪ್ ಮೂಲಕ ತಾವು ಮನೆಯಿಂದ ಹೊರಡುವ ಮುನ್ನವೇ ಲಭ್ಯವಿರುವ ಪಾರ್ಕಿಂಗ್ ಸ್ಲಾಟ್ ಮತ್ತು ಇತರೆ ಮಾಹಿತಿಯನ್ನು ಇದರಲ್ಲಿ ನೋಡಬಹುದು.

ಕನ್ಸರ್ವೆನ್ಸಿ ರಸ್ತೆಗಳನ್ನು ಅಭಿವೃದ್ದಿಪಡಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಮಕ್ಕಳ ಮನೋರಂಜನೆ ತಾಣಗಳಾಗಿ ಅಭಿವೃದ್ದಿ ಪಡಿಸುವ ಮೂಲಕ ಈ ಜಾಗವನ್ನು ಉಪಯುಕ್ತಗೊಳಿಸುವ ಉದ್ದೆಶ ಹೊಂದಲಾಗಿದೆ.

ಘನ ತ್ಯಾಜ್ಯ ನಿರ್ವಹಣೆ:
ನಗರದ 35 ವಾರ್ಡುಗಳ 85,833 ವಸತಿಗಳಿಂದ ಸುಮಾರು 163 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು 20 ಆಟೋ ಟಿಪ್ಪರ್‌ಗಳು, 9 ಟಿಪ್ಪರ್ ಟ್ರಕ್ ಸೇರಿದಂತೆ ಒಟ್ಟು 43 ವಾಹನಗಳಲ್ಲಿ ಘನ ತ್ಯಾಜ್ಯ ಸಾಗಣೆ ವ್ಯವಸ್ಥೆ ಇದೆ. ಎಲ್ಲ ವಾಹನಗಳ ಓಡಾಟದ ಮೇಲೆ ಕಣ್ಣಿಡಲು ಜಿಪಿಎಸ್ ಅಳವಡಿಕೆ, ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಖಾತ್ರಿಗೆ ಮನೆಗಳಿಗೆ ಹೆಚ್‍ಎಫ್ ಆರ್‍ಎಫ್‍ಐಡಿ ಅಳವಡಿಕೆ, ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿ, ಲ್ಯಾಂಡ್‍ಫಿಲ್ ಸೈಟಿನಲ್ಲಿ ಸಿಸಿ ಟಿವಿ ಹಾಗೂ ಬ್ಲ್ಯಾಕ್ ಸ್ಟಾಟ್‍ಗಳಲ್ಲಿ 30 ಸ್ಥಿರ ಬಾಕ್ಸ್ ಸಿಸಿ ಕ್ಯಾಮರಾ ಅಳವಡಿಕೆಯಿಂದ ಪರಿಣಾಮಕಾರಿ ವಿಲೇವಾರಿ ಬಗ್ಗೆ ಖಾತ್ರಿಪಡಿಸುವಿಕೆ.

ಸ್ಮಾರ್ಟ್ ವಾಟರ್ :
24×7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಒಟ್ಟು 52 ಓಹೆಚ್‍ಟಿಗಳು ಇದ್ದು ಎಎಂಆರ್ ಬಲ್ಕ್ ವಾಟರ್ ಫ್ಲೋ ಮೀಟರ್ ಅಳವಡಿಸಲಾಗಿದೆ. ಹಾಗೂ ನೀರಿನಲ್ಲಿನ ಇತರೆ ಪ್ಯಾರಾಮೀಟರ್ ಪರೀಕ್ಷಿಸಲು ಮೀಟರ್ ಅಳವಡಿಸಲಾಗಿದೆ ಹಾಗೂ ನೀರು ವ್ಯರ್ಥವಾಗಿ ಹೋಗುವುದದನ್ನು ಶೇ.40 ರಿಂದ 20ಕ್ಕೆ ಇಳಿಸುವ ಉದ್ದೇಶದಿಂದ ಕ್ರಮ ವಹಿಸಲಾಗಿದೆ.

ಇಂಟೆಲಿಜೆಂಟ್ ಸಾರಿಗೆ ನಿರ್ವಹಣೆ ವ್ಯವಸ್ಥೆ:
ಎಲ್ಲ ಕೆಎಸ್‍ಆರ್‍ಟಿಸಿ ಬಸ್‍ಗಳ ಕಾರ್ಯಾಚರಣೆ ಟ್ರ್ಯಾಕ್ ಮಾಡಲು ವಿಟಿಯು(ವೆಹಿಕಲ್ ಟ್ರ್ಯಾಕಿಂಗ್ ಯುನಿಟ್) ಅಳವಡಿಕೆಗೆ ಹಾಗೂ ಟ್ರಿಪ್‍ಗಳ ಯೋಜನೆ ಮತ್ತು ವೇಳಾಪಟ್ಟಿಗಾಗಿ ಮೊಬೈಲ್ ಆಪ್ ಬಳಕೆಗೆ ಪ್ರಸ್ತಾಪಿಸಲಾಗಿದೆ. ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಲ್ಲಿ ಇದನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.

ಸ್ಮಾರ್ಟ್ ಪೋಲ್ಸ್:
ನಗರದಲ್ಲಿ ಡಿಜಿಟಲ್ ಬಿಲ್‍ಬೋರ್ಡ್ ಹೊಂದಿರುವ, ಎನ್‍ವೈರ್ನಮೆಂಟಲ್ ಸೆನ್ಸರ್ಸ್, ಎಲ್‍ಇಡಿ ಬೀದಿದೀಪಗಳನ್ನು ಹೊಂದಿರುವ ಹಾಗೂ ನಗರ ಸರ್ವೇಕ್ಷಣೆಗೆ ಡ್ರೋನ್, ಅಪಾಯ ಪರಿಸ್ಥಿತಿಯಲ್ಲಿ ಪ್ಯಾನಿಕ್ ಕಾಲ್ ಮತ್ತು ಸಾರ್ವಜನಿಕರನ್ನು ಉದ್ದೇಶಿಸುವ ಮೈಕ್, ನೆಟ್‍ವರ್ಕ್ ಕ್ಯಾಮೆರಾ, ಸೋಲಾರ್ ವ್ಯವಸ್ಥ ಹೊಂದಿರುವ ಸ್ಮಾರ್ಟ್‍ಪೋಲ್ಸ್ ಗಳನ್ನು ನಗರದ 9 ಭಾಗಗಳಲ್ಲಿ ಮೊದಲನೇ ಹಂತದಲ್ಲಿ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸ್ಮಾರ್ಟ್‍ಸಿಟಿ ಲಿ.ಯೋಜನೆಯ ಅಧಿಕಾರಿ ಪ್ರದೀಪ್ ಕುಮಾರ್ ಇಂಟಿಗ್ರೇಟೆಡ್ ಕಮ್ಯಾಂಡ್ & ಕಂಟ್ರೋಲ್ ಸೆಂಟರ್ ಬಗ್ಗೆ ಪಿಪಿಟಿ ಪ್ರದರ್ಶನ ಮೂಲಕ ವಿಶದವಾಗಿ ವಿವರಿಸಿದರು.

ಕಾರ್ಯಾಗಾರದಲ್ಲಿ ಶ್ರೀಕುಮಾರ್ ಮತ್ತು ಇತರೆ ಪ್ರತಿಷ್ಟಿತ ನಾಗರೀಕರು ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಇತರೆ ಇಲಾಖೆ, ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಬೇಕು. ಸಹಕಾರ ಕೊರತೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಯಾವುದೇ ಯೋಜನೆ ಜಾರಿಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆಗಳು ಜನಸ್ನೇಹಿಯಾಗಿ ಅವರ ಪರವಾಗಿರಬೇಕು ಹಾಗೂ ಈ ಯೋಜನೆ ಎಂದಿಗೆ ಮುಗಿಯುತ್ತದೆ ಎಂದು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.

ಕಾರ್ಯಾಗಾರವನ್ನು ಪ್ರತಿಷ್ಟಿತ ನಾಗರೀಕರು, ರೋಟರಿ, ಲಯನ್ಸ್, ಇತ್ಯಾದಿ ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ತರು, ಅಗ್ನಿಶಾಮಕ ದಳ ಹಾಗೂ ಪತ್ರಕರ್ತರೊಂದಿಗೆ ಸಂವಹಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದು, ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ವಿವಿಧ ಸಂಘ ಸಂಸ್ಥೆಗಳು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga NewsSmart Cityಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಸ್ಮಾರ್ಟ್‌ಸಿಟಿ
Share197Tweet123Send
Previous Post

ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಚಿವ ಈಶ್ವರಪ್ಪ ಚಾಲನೆ

Next Post

ಸೊರಬ: ಎಂ.ವಿ. ಕೃಷ್ಣಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಕ್ಟೋಬರ್ 1ರಂದು ಬೃಹತ್ ರಕ್ತದಾನ ಶಿಬಿರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸೊರಬ: ಎಂ.ವಿ. ಕೃಷ್ಣಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಕ್ಟೋಬರ್ 1ರಂದು ಬೃಹತ್ ರಕ್ತದಾನ ಶಿಬಿರ

ಸೊರಬ: ಎಂ.ವಿ. ಕೃಷ್ಣಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಕ್ಟೋಬರ್ 1ರಂದು ಬೃಹತ್ ರಕ್ತದಾನ ಶಿಬಿರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸೌರ ಶಕ್ತಿಯ ಸಮರ್ಥ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ: ಅರುಣ್ ಅಭಿಪ್ರಾಯ

ಸೌರ ಶಕ್ತಿಯ ಸಮರ್ಥ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ: ಅರುಣ್ ಅಭಿಪ್ರಾಯ

February 25, 2026
ಕೃಷ್ಣಾ ನದಿಯ ಮೇಲೆ 805 ಮೀಟರ್ ಉದ್ದದ ರೈಲ್ವೆ ಸೇತುವೆ ಕಾರ್ಯಾರಂಭ: ಎಜಿಎಮ್ ಅನಂತ್ 

ಕೃಷ್ಣಾ ನದಿಯ ಮೇಲೆ 805 ಮೀಟರ್ ಉದ್ದದ ರೈಲ್ವೆ ಸೇತುವೆ ಕಾರ್ಯಾರಂಭ: ಎಜಿಎಮ್ ಅನಂತ್ 

February 25, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

February 25, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಹೋಳಿ ಹಬ್ಬ | ಹುಬ್ಬಳ್ಳಿ – ಮುಜಫರ್‌ಪುರ ನಡುವೆ ವಿಶೇಷ ರೈಲುಗಳ ಸಂಚಾರ

February 25, 2026
Minister Somanna Inspects Road Over Bridges at Tiptur

Minister Somanna Inspects Road Over Bridges at Tiptur

February 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL