ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರಿನಲ್ಲಿ ನಡೆಯಲಿರುವ ಪ್ರಸಕ್ತ ವರ್ಷದ ಮಂಗಳೂರು ಲಿಟ್ ಫೆಸ್ಟ್‌ಗೆ ಕೊರೋನಾ ಕಾರಣದಿಂದಾಗಿ ಪ್ರವೇಶವನ್ನು ಸೀಮಿತಗೊಳಿಸಲಾಗಿದ್ದು, ನಗರದ ಪಂಚಟಿ ಕಾಲೋನಿಯ ಮಧುಕೃಪಾದಲ್ಲಿ ಮಾರ್ಚ್ 27ರ ಶನಿವಾರ ಬೆಳಗ್ಗೆ 9:30ರಿಂದ 12:30ರವರೆಗೆ ಕಾರ್ಯಕ್ರಮದ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗಿದೆ.
ನೇರ ವೀಕ್ಷಣೆ ಜೊತೆಗೆ ಸಾಹಿತಿಗಳು ಮತ್ತು ಚಿಂತಕರೊಡನೆ ನೇರ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
ಆಸಕ್ತರು ದುರ್ಗಾ ಪ್ರಸಾದ್ ಮೊ: 9449085249 ಅಥವಾ ಸುರೇಶ್ ಮೊ: 9448139228 ಇವರಿಗೆ ಮುಂಚಿತ ತಿಳಿಸಬೇಕೆಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post