Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಗಿನ್ನಿಸ್ ದಾಖಲೆಯ ಕಾರ್ಯಕ್ರಮವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಪ್ರಧಾನಿ ಮೋದಿಯವರ PM Narendra Modi ಮನ್ ಕಿ ಬಾತ್ Mann ki baath ಕಾರ್ಯಕ್ರಮ ಏ. 30ಕ್ಕೆ ನೂರನೇ ಸಂಚಿಕೆ ಪೂರೈಸಲಿದೆ. ರಾಷ್ಟ್ರದೆಲ್ಲೆಡೆ ಕೋಟ್ಯಾಂತರ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಏ. 30ರಂದು ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಕನ್ನಡದಲ್ಲೂ ತರ್ಜುಮೆಯಾಗಿ ಅಂದೆ ಬಿತ್ತರವಾಗಲಿದೆ ಎಂದರು.
ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಯೋಜಿಸಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಾರ್ಯಕ್ರಮ ನಡೆಸುತ್ತಿದ್ದು, ಐತಿಹಾಸಿಕ ಕಾರ್ಯಕ್ರಮ ಯೋಜಿಸಲಾಗಿದೆ. ನಿರ್ಣಾಯಕ, ಬಲಶಾಲಿ ನಾಯಕತ್ವದ ಮೂಲಕ ಪ್ರತಿಯೊಬ್ಬರಿಗೂ ತಲುಪುವ ಬಾನುಲಿ ಕಾರ್ಯಕ್ರಮ ಇದಾಗಿದೆ ಎಂದರು.
ಮನ್ ಕಿ ಬಾತ್ ಲಕ್ಷಾಂತರ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಹೆಸರು ಕೂಡ ಪ್ರಸ್ತಾಪಿಸಲಾಗಿದೆ. ಮತ್ತೂರು ಗ್ರಾಮ, ಕುವೆಂಪು ಅವರ ಹೆಸರು, ಅಡಿಕೆ ಹಾಳೆಯಿಂದ ಸಾಮಾಗ್ರಿ ಮಾಡುವ ದಂಪತಿ ಸೇರಿದಂತೆ ಹಲವಾರು ಬಾರಿ ಶಿವಮೊಗ್ಗದ ಹೆಸರು ಪ್ರಸ್ತಾಪವಾಗಿದೆ ಎಂದರು.
ನೂರನೇ ಮನ್ ಕಿ ಬಾತ್ ಕಾರ್ಯಕ್ರಮ ಗಿನ್ನಿಸ್ ದಾಖಲೆಯಾಗಲಿದೆ. ಪ್ರತಿಯೊಂದು ಬೂತ್ ನಲ್ಲಿ ಈ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮನ್ ಕಿ ಬಾತ್ ಕಾರ್ಯಕ್ರಮ ಎಲ್ಲಿಯೂ ತೊಂದರೆಯಾಗದಂತೆ ಪ್ರಸಾರವಾಗಿದೆ. ನೂರನೇ ಕಾರ್ಯಕ್ರಮದಲ್ಲಿ ಒಂದೇ ಬಾರಿಗೆ ಬಾನುಲಿಯಲ್ಲಿ ಪ್ರಸಾರವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಟಿವಿ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ದೇಶದ ಕೋಟ್ಯಾಂತರ ಜನರು ವಿವಿಧ ಮಾದ್ಯಮಗಳ ಮೂಲಕ ಈ ಕಾರ್ಯಕ್ರಮ ಆಲಿಸುವುದು ದಾಖಲೆಯಾಗಲಿದೆ ಎಂದು ಹೇಳಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post