ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನ ಸೋಂಕಿತರಿಗಾಗಿ ಶುಭ ಮಂಗಳ ಸಮುದಾಯ ಭವನ ಆರೈಕೆ ಕೇಂದ್ರವಾಗಿ ರೂಪುಗೊಡಿದ್ದು, ನಗರದ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಇಂದು ಉದ್ಘಾಟನೆ ನೆರವೇರಿಸಿದರು.
ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ಚಿಂತನೆ ನಡೆಸಿದ ಉಸ್ತುವಾರಿ ಸಚಿವ ಈಶ್ವರಪ್ಪ ಅವರು, ಕೋವಿಡ್ ಸುರಕ್ಷಾ ಪಡೆ, ಸೇವಾ ಭಾರತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶುಭ ಮಂಗಳ ಕಲ್ಯಾಣ ಮಂದಿರವನ್ನು ಕೊವಿಡ್ ಆರೈಕೆ ಮತ್ತು ಚಿಕಿತ್ಸಾ ಕೇಂದ್ರವಾಗಿ ಮಾರ್ಪಡಿಸಲು ನಿರ್ಧರಿಸಿದ್ದರು.
ಈ ಸಂಸದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಆಯನೂರು ಮಂಜುನಾಥ್. ಜಿ.ಪಂ.ಸದಸ್ಯ ಕೆ.ಈ.ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಮಾಜಿ ಮೇಯರ್ ಸುವರ್ಣ ಶಂಕರ್, ದತ್ತಾತ್ರಿ, ಜ್ಞಾನೇಶ್ವರ್, ಎಸ್. ರುದ್ರೇಗೌಡ, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post