ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಶಾಸಕ ಅರಗ ಜ್ಞಾನೇಂದ್ರ #Araga Gnanendra ಸಚಿವರಾಗಿದ್ದ ಕಾಲದಲ್ಲಿ ತೀರ್ಥಹಳ್ಳಿ ಭಾಗದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಸರ್ಕಾರಿ ಕಟ್ಟಡಗಳ ಕಾಮಗಾರಿಗಳು ನಡೆದಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಭ್ರಷ್ಟಚಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #Ayanuru Manjunath ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಪೊಲೀಸ್ ಕ್ವಾಟರ್ಸ್ ಪೊಲೀಸ್ ಠಾಣೆ, ಅಗ್ನಿಶಾಮಕ ಕಟ್ಟಡ,ಗ್ರಾಮಾಭಿವೃದ್ಧಿ ಭವನ, ಪ್ರಥಮ ದರ್ಜೆ ಕಾಲೇಜು, ಹೀಗೆ ವಿವಿಧ ಕಟ್ಟಡಗಳು ಅರಗ ಜ್ಞಾನೇಂದ್ರ ಅವರು ಸಚಿವರಾಗಿದ್ದಾಗ ನಿರ್ಮಾಣವಾಗಿವೆ. ಸುಮಾರು 100 ಕೋಟಿಗಳ ವೆಚ್ಚದಲ್ಲಿ ಈ ಎಲ್ಲಾ ಕಟ್ಟಡಗಳು ನಿರ್ಮಾಣವಾಗಿದ್ದರೂ ಕೂಡ ಈ ಮಳೆಗಾಲದಲ್ಲಿ ಅವೆಲ್ಲವೂ ಸೋರುತ್ತಿವೆ ಎಂದರು.
ಉದ್ಘಾಟನೆಯೂ ಮುಂಚೆಯೇ ಕಟ್ಟಡಗಳು ಸೋರುತ್ತಿವೆ ಎಂದರೆ ಎಷ್ಟೊಂದು ಕಳಪೆಯಾಗಿರಬಹುದು ಎಂದು ಅರ್ಥವಾಗುತ್ತದೆ. ಈ ಕಟ್ಟಡಗಳು ಕಳೆದ ವರ್ಷದ ಅಲ್ಪ ಮಳೆಗೆ ಸೋರುತ್ತಿದ್ದವು. ಈ ವರ್ಷ ಮಳೆಯಾಗುತ್ತಿದೆ. ಮುಂದೆ ಜಡಿ ಮಳೆ ಇಡಿದರೆ ಕೆಲವು ಕಟ್ಟಡಗಳು ಬೀಳುವ ಸಾಧ್ಯತೆಗಳು ಇವೆ ಎಂದರು.
ಬಿಜೆಪಿ ಕಾಲದಲ್ಲಿ ಭ್ರಷ್ಟಚಾರ ತುಂಬುತುಳುಕಿತ್ತು ಎನ್ನುವುದಕ್ಕೆ ಸೋರುತ್ತಿರುವ ಸರ್ಕಾರಿ ಕಟ್ಟಡಗಳೇ ಸಾಕ್ಷಿಯಾಗಿವೆ. ವಿಶೇಷವೆಂದರೆ ಈ ಎಲ್ಲಾ ಕಟ್ಟಡಗಳ ಗುತ್ತಿಗೆದಾರ ಒಬ್ಬನೇಯಾಗಿರುತ್ತಾನೆ. ಆತ ಶಾಸಕ ಅರಗಜ್ಞಾನೇಂದ್ರ ಸಂಬಂಧಿ ಎಂದು ಹೇಳಲಾಗುತ್ತಿದೆ ಎಂದರು.
ಇಷ್ಟೊಂದು ಭ್ರಷ್ಟಚಾರ ನಡೆದಿದ್ದರು ಕೂಡ, ಕಟ್ಟಡಗಳು ಸೋರುತ್ತಿದ್ದರು ಕೂಡ ಅರಗಜ್ಞಾನೇಂದ್ರ ಅವರು ಏಕೆ ಸುಮ್ಮನೆ ಇದ್ದಾರೆ ಎಂದು ಅರ್ಥವಾಗುತ್ತಿಲ್ಲ. ಮುಂಬರುವ ಅಧಿವೇಶನದಲ್ಲಿ ಅವರೇ ಈ ಬಗ್ಗೆ ಧ್ವನಿ ಎತ್ತಲಿ. ತನಿಖೆಗೆ ಅವರೇ ಒತ್ತಾಯಿಸಬೇಕು ಎಂದರು.
ಸದನ ಆರಂಭವಾಗುತ್ತದೆ. ಸರ್ಕಾರಿ ನೌಕರರ ಏಳನೇ ವೇತನ ಜಾರಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಶೇ.27.5ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಮಧ್ಯಾಂತರವಾಗಿ ಶೇ.17ರಷ್ಟು ಈಗಾಗಲೇ ನೀಡಲಾಗಿದೆ. ಹಾಗೆಯೇ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕೂಡ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಕಟ್ಟಡಗಳ ಉದ್ಘಾಟನ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಮಳೆಗಾಲದಲ್ಲಿ ಕಟ್ಟಡಗಳು ಸೋರುವುದು ಸಾಮಾನ್ಯ ಎಂದು ಹೇಳಿದ್ದಾರಲ್ಲ, ಹಾಗಾದರೆ ಇದನ್ನು ಸಮರ್ಥಿಸಿಕೊಡಂತ್ತೆ ಹಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಆಯನೂರು ಉತ್ತರಿಸಿ, ಹಾಗೆನಿಲ್ಲ, ವೇದಿಕೆಯ ಸೌಜನ್ಯಕ್ಕಾಗಿ ಮಧುಬಂಗಾರಪ್ಪನವರು ಹಾಗೆ ಹೇಳಿದ್ದಾರೆ. ಕಟ್ಟಡಗಳು ಸೋರುವುದನ್ನು ಅವರು ಸಮರ್ಥಿಸಿಕೊಳ್ಳುವುದಿಲ್ಲ ಎಂದರು.
Also read: ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಭಯ, ಆತಂಕ ಬೇಡ: ಡಾ. ಚೇತನ್ ಕುಮಾರ್
ಅಲ್ಲದೇ ಸಚಿವರ ಕಾರಿನಲ್ಲಿಯೇ ಅರಗಜ್ಞಾನೇಂದ್ರ ಅವರು ಉದ್ಘಾಟನ ಸ್ಥಳಕ್ಕೆ ಬಂದಿದ್ದಾರೆ. ಬರುವ ದಾರಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಹಾಗಾಗಿ ಹೇಳಿರಬಹುದಷ್ಟೇ. ಆದರೆ ತನಿಖೆ ಮಾಡಬೇಕು ಎಂಬುವುದು ನಮ್ಮ ಆಗ್ರಹ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎಸ್.ಕೆ.ಮರಿಯಪ್ಪ, ವೈ.ಹೆಚ್.ನಾಗರಾಜ್, ಚಂದ್ರಭೂಪಾಲ್, ಕಲಗೂಡು ರತ್ನಾಕರ್, ಮಧು, ಧೀರರಾಜ್, ಮಂಜುನಾಥ ಬಾಬು, ಇಕ್ಕೇರಿ ರಮೇಶ್, ಕೃಷ್ಣ, ಎಸ್.ಪಿ.ಪಾಟೀಲ್, ಧೀರರಾಜ್ ಹೊನ್ನಾವಿಲೆ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post